ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಡಿಜಿಟಲ್ ಉವಾಚ

ಹಳೆ ಕ್ಯಾಮರಾವನ್ನು ಕ್ಲಿಕ್ಕಿಸಿಕೊಂಡ ಡಿಜಿಟಲ್ ಕ್ಯಾಮರಾದ ಉವಾಚ…

dattu-k-150x150

ದತ್ತು ಕುಲಕರ್ಣಿ, ಅಸ್ಟ್ರೇಲಿಯಾ

 

ಅಯ್ಯಾ ಮುತ್ತಜ್ಜಾ..

ನನ್ನ ಕಣ್ಣಿಂದ ನಿನ್ನನ್ನು ಹೀಗೆ ಸೆರೆ ಹಿಡಿದದ್ದೆ ಒಂದು ಸೊಗಸು

ಮೊನ್ನೆ ಒಂದು ಚಿಕ್ಕ ಹುಡುಗ

ಅವರ ಅಜ್ಜನ ಬೋನ್ಸಾಯಿ ಆಲದ ಮರವನ್ನು

ಕೈಯಲ್ಲಿ ಜೋತಾಡಿಸುತ್ತಾ ಹೋಗುತ್ತಿದ್ದನ್ನು

ಸೆರೆ ಹಿಡಿದೆ.

ಇದೂ ಹಾಗೆ ಇರಬೇಕು.

ಅದಿರಲಿ…

ಈಗ ಒಂದಷ್ಟು ನನ್ನ ಪ್ರವರ ಕೇಳಿಸಿಕೊ.

ನಾನು ನಿನ್ನ ಹಾಗೆ

ಹುಟ್ಟಿದ ಕೂಸಿನ ಮುಗ್ದ ನಗುವನ್ನೂ

ಆಡುವ ಚಿಣ್ಣರ ತುಂಟತನವನ್ನು

ಹಸೆಮಣೆ ಏರಿರುವ ವಧು ವರರನ್ನು

ಹಿರಿಯರ ಮುದಿ  ಸುಕ್ಕುಗಳನ್ನು

ನನ್ನ ನೆನೆಪಿನಲ್ಲಿ ಸ್ಥಬ್ದಗೊಳಿಸಬಲ್ಲೆ.

 

ಆದರೆ ಅದಕ್ಕಿಂತ ಮುಂದುವರೆದು

ನನ್ನಲ್ಲಿರುವ

ಈ ಸ್ಥಬ್ದ ಚಿತ್ರಗಳನ್ನು

ಯಾವಾಗ ಬೇಕಾದರೂ

ನೆನೆಪಿನ ಪೋಲ್ದರಿನಿಂದ

ಹೊರಗೆಳೆದು ನೋಡಬಹುದು.

ದೊಡ್ಡದು ಮಾಡಬಹುದು.

ಚಿಕ್ಕದು ಮಾಡಬಹುದು

ಒಂದು ಹಂತದ ವರೆಗೆ

ಕತ್ತಲೆಯಲ್ಲಿದ್ದವರಿಗೆ ಬೆಳಕ ಚೆಲ್ಲಬಹುದು

ಕರಿಯರನ್ನು ಬಿಳಿಯರನ್ನಾಗಿ ಮಾಡಬಹುದು

ದೂರವಿದ್ದವರನ್ನು ಹತ್ತಿರತರಬಹುದು

ಮೊಡವೆಯ ಹುಡುಗಿಯ ಗಲ್ಲ

ನುಣುಪಾಗಿಸಬಹುದು

ಮಸಕಾದ ಅಜ್ಜಿಯ ಹಣೆಯ

ಕುಂಕುಮದಿಂದ ಸಂತುಷ್ಟ ಗೊಳಿಸಬಹುದು

ಹರಿದ ಅಂಗಿಯ ಯಜಮಾನನಿಗೆ

ಕೋಟು ತೊಡಿಸಿ ನಗಿಸಬಹುದು

ತಾಜಮಹಲ್ ನೋಡದೆ ಅದರ ಮುಂದೆ

ನಿಂತ ಹಾಗೆ  ಬೆರಗುಗೊಳ್ಳಬಹುದು

ಅಸ್ಪಷ್ಟತೆಗೆ ಸ್ಪಷ್ಟ ರೂಪ ಕೊಡಬಹುದು

ನೆನೆಪುಗಳಿಗೆ ಯಾವಾಗ ಬೇಕೊ

ಆವಾಗ ಸಾಣೆ ಹಿಡಿಯಬಹುದು

 

ಹಾಗೆಯೇ…

ಬಳಿಯಿದ್ದವರನ್ನು ದೂರ ಸರಿಸಬಹುದು

ಸರಿಯಿದ್ದವರ ಮುಖಕ್ಕೆ ಮಸಿಬಳಿಯಬಹುದು

ಯಾರ ಯಾರದೊ ಖಾಸಗಿ ಒಳ ನೋಟಗಳು

ನೋಟುಗಳಿಗಾಗಿ ಸಾರ್ವಜನಿಕವಾಗಬಹುದು

ಯಾರದೋ ಬಚ್ಚಲು ಮನೆಯ ಚಿತ್ರ

ಇನ್ನಾರದೊ ಮಲಗುವ ಕೋಣೆಯ ಶೋಭಿಸಬಹುದು

ಗೊತ್ತಿಲ್ಲದವನ ಪಲ್ಲಂಗದ ಮೇಲೆ ಹುಡುಗಿ

ತನಗೆ ಗೊತ್ತಿಲ್ಲದೇ ಕುಳಿತಿರಬಹುದು

ಬಡ ಹುಡುಗರ ಹಸಿದ ಹೊಟ್ಟೆ

NGOಗಳಿಗೆ ದುಡ್ಡು ಮಾಡುವ ಯಂತ್ರದಂತೆ ಕಾಣಿಸಬಹುದು

ಕೆಲವು ದೇಶಗಳ ಸ್ಲಮ್ಮುಗಳು

ಹಲವು ದೇಶಗಳಿಗೆ ಮನರಂಜನೆ ಒದಗಿಸಬಹುದು

ದೊಡ್ಡಣ್ಣನೆಂಬೊ ದೇಶ ದಶಕಗಳಿಂದ ಸುಳ್ಳು ಹೊಸೆಯಬಹುದು

 

ಪರಿವರ್ತನೆ ಜಗದ ನಿಯಮ

ಅಭಿವೃದ್ಧಿ ಭವದ ಮಂತ್ರ

ಆದರೆ ಅದರ ಜೊತೆಗೆ

ದುರ್ಬುದ್ಧಿಗಳೂ ಬೆಳೆಯುವದು

ಯಾರ ತಂತ್ರ?

ಹೇಳಜ್ಜ..

‍ಲೇಖಕರು Admin

23 October, 2016

1 Comment

  1. Anonymous

    Very nicely written

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading