ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ : ಟಚ್ ಸ್ಕ್ರೀನ್ ಬೆಡಗಿ ಬಂದೊಡನೆ..

shivaprakash_h_mಶಿವಪ್ರಕಾಶ್ ಎಚ್ ಎಮ್ 
ಭೂತಕಾಲಕೆ ನೆನಪಾದೆ
ನೆನಪು ನೆನಪಿಸುತ ವರ್ತಮಾನವಾದೆ
ಭವಿಷತ್ ಎಚ್ಚರಿಸುವ ಇತಿಹಾಸವಾದೆ.
ಕಪ್ಪು ಬಿಳುಪಾದೆcamera
ಬಣ್ಣ ಬಣ್ಣದ ಚಿತ್ರವಾದೆ
ನೆರಳು ಬೆಳಕಿನ ಆಟವಾದೆ.
ಪಡೆದುಕೊಂಡಿರುವುದರ
ಹಾಗು
ಕಳೆದುಕೊಂಡಿರುವುದರ
ನಡುವೆ
ಕನ್ನಡಿಯಾದೆ.
ಕೊಬ್ಬಿದ ಕಬ್ಬಿಣದ ದೇಹ ನನ್ನದು,
ನಾಜೂಕಾದ ಟಚ್ ಸ್ಕ್ರೀನ್ ಬೆಡಗಿ ಬಂದೊಡನೆ,
ಮೂಲೆಗುಂಪಾದೆ… ತುಕ್ಕುಹಿಡಿದೆ… ಸಮಾಧಿಯಾದೆ.
ನಿನ್ನ ನಿನಪುಗಳಿಗೆ
ಹಸಿರು ಉಸಿರಾಗಿಸಿರುವೆ
ಅಷ್ಟು ಸಾಕು ನನಗೆ
ಇನ್ನು ನಿಶ್ಚಿಂತೆಯಿಂದ
ಚಿರನಿದ್ರೆಗೆ ಜಾರುವೆ.

‍ಲೇಖಕರು Admin

19 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading