ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಚೌಕಟ್ಟಿನೊಳಗೆ ಹಿಡಿದಿಟ್ಟಿದ್ದೇನೆ..

     naveen-soraba

ನವೀನ ಸೊರಬ

ನನ್ನ ಸ್ಥಿತಿಯ ಬಗ್ಗೆ
ಕರುಣೆ ಬೇಡ ಗೆಳತಿ
ನನ್ನ ಸೌಂದರ್ಯಾಭಿರುಚಿ
ಅಂತಿಂಥದ್ದಲ್ಲ ಗೊತ್ತಾ
ಒಂದೇ ಕಣ್ಣಲ್ಲಿ ಪ್ರೀತಿ ವಿಶ್ವಾಸವನ್ನು
ದ್ವೇಶ ಅಸೂಯೆಯನ್ನು ಕ್ಲಿಕ್ಕಿಸಿದ್ದೇನೆ
ಕಂಡದ್ದು ಕಂಡ ಹಾಗೇ
ವಸ್ತುನಿಷ್ಠವಾಗಿ ನನ್ನ
ಚೌಕಟ್ಟಿನೊಳಗೆ ಹಿಡಿದಿಟ್ಟಿದ್ದೇನೆ..

ಲಾವೋಸಿನ ಸಿಡಿಯದ ಬಾಂಬು
ಬಾಮಿಯಾನ್ ಬುದ್ಧ
ಟರ್ಕಿಯ ತೀರದ ಮಗು
ದಲೈ ಲಾಮಾ ನಗು
ಕಚ್ಛಾ ತೈಲದ ಸಂಪತ್ತು
ಉಗ್ರರು ಕುಯ್ದಿಟ್ಟ ಕತ್ತು
ಕಂಡದ್ದು ಕಂಡ ಹಾಗೇ
ನನ್ನ ಚೌಕಟ್ಟಿನೊಳಗೆ…

ಬಿರಿಯುವ ಬೀಜ;ಹೊರಡುವ ಚಿಗುರು
ತೂಗುವ ಹಣ್ಣು; ಹರಡುವ ಹಸಿರು
ತುಂಬಿ ನಿಂತ ಫಸಲು;ಅಸ್ಥಿಪಂಜರದ ಹಸಿವು
ಕಾವೇರಿ ಹರಿದಿದ್ದು ; ಬೆಂಕಿ ಉರಿದಿದ್ದು
ಕಂಡದ್ದು ಕಂಡ ಹಾಗೆ
ನನ್ನ ಚೌಕಟ್ಟಿನೊಳಗೆ..

ನನ್ನ ದುಸ್ಥಿತಿಗೆ ಮರುಗ ಬೇಡ ಗೆಳತಿ
ನನ್ನ ಅಭಿರುಚಿ ಅಂತಿಂಥದ್ದಲ್ಲ..

‍ಲೇಖಕರು Admin

24 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading