ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: `ಕ್ಲಿಕ್' ಸದ್ದಿನ ಲಯ

ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ

ನಿನ್ನ, ದಿಟ್ಟಿಸಿ
ನೋಡಿದಾಗಲೇ
`ಕ್ಲಿಕ್’ ಸದ್ದಿನ ಲಯ ಕೇಳಿದ್ದು

ಸದ್ದು ಎಷ್ಟು ಹಳೆಯದಾದರೂ
ಅಚ್ಚಳಿಯದೇ ಉಳಿದಿದೆ
ಕಿವಿಯಂಚಿನಲ್ಲೇ,
ನೀ ಅಚ್ಚೊತ್ತಿದ್ದ ನೆರಳು
ಹೃದಯಂತರಾಳದಲ್ಲಿ
ಸದಾ ಹಸಿರಾಗಿ ನಗುತ್ತಿದೆ

ಸ್ಮಾರ್ಟ್ ಫೋನ್ ಗಳ
ಹಾವಳಿಯಲ್ಲಿ, ತಂತ್ರಜ್ಞಾನದ
ವೇಗದಲಿ ನೀ
ಕಳೆದು ಹುದುಗಿ
ತುಕ್ಕು ಹಿಡಿದಿದ್ದರೂ,
ಕಳೆಗುಂದಿಲ್ಲ ನಿನ್ನ ಛಾಪು
ಸುಕ್ಕಾಗಿಲ್ಲ ನಿನ್ನ ಸೊಕ್ಕು
ಬೇಕು, ನೀನಿನ್ನೂ ಬೇಕು

ಥರೇವಾರಿ ಲೆನ್ಸ್ ಗಳ
ಆಕರ್ಷಕ ಕಣ್ಣರೆಪ್ಪೆಗಳ
ಪಿಳಿಪಿಳಿ ಸದ್ದುಗಳಲ್ಲಿ
ಅಡಗಿ ಕೂತಿದ್ದ ಕ್ಯಾಮರಾ,
ನೀ ಎಂದೆಂಗೂ ಅಮರ
ಅಮರ ಅಮರ ಅಮರ

 

‍ಲೇಖಕರು Admin

23 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading