ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ : ಅದೆಷ್ಟು ಧಿಮಾಕೆ..?

ಗೀತಾ ಹೆಗ್ಡೆ 

ನನ್ನಜ್ಜಿ ಬಾಯಿ ಸದಾ ಕೆಂಪು
ಕಾರಣ ಹೇಳಬೇಕಾ?
ಅದು ನಿನ್ನಂತೆ!

ಒಳಗಿರುವ ಎಲೆ ಅಡಿಕೆ camera
ಜಗಿದೂ ಜಗಿದೂ ನಜ್ಜು ಗುಜ್ಜಾಗಿಸಿ
ಕೆಂಪು ಲಾವಾರಸ ಹೊರ ಸೂಸಿದ ತುಟಿ ಬಣ್ಣ
ಮುಖ ಸುಕ್ಕು ಶಿವನ ಪಾದ ಸೇರಿದ ಹಲ್ಲು
ವಸಡೊಂದೇ ಆಧಾರ ಅಗಿಯಲು.

ನೀ ಬಿಡು
ಅದಾವ ತಾತನ ಕಾಲದವಳೊ?
ನೋಡು ಹೇಗಾಗಿದೀಯಾ
ಮಣ್ಣಲ್ಲಿ ಹೊರಳಾಡಿದೆಯಾ?
ಇಲ್ಲ ಯಾವ ಮೂಲೆ ಲಟಾರಿ ಟ್ರಂಕಲ್ಲಿ
ತುಕ್ಕು ಹಿಡಿದು ಜಡವಾಗಿ ಕೂತಿದ್ದೆ?
ಅದೇಗೆ ಸಿಕ್ಕೆ?
ಯಜಮಾನನಿಗೆ ನೀ ಸಿಕ್ಕ ವೇಳೆ
ಕುಣಿದಾಡುವಷ್ಟು ಖುಷಿ ಆಗಿರಬೇಕಲ್ಲವೆ?

ಅದು ಹಾಗೆ
ಈಗಿನ ಮಂದಿ ಹೊಸ ಮನೆಗೆ
ಹಳೆ ಕುಸುರಿ ಬಾಗಿಲು ಮಂಚ ತಂದಿಟ್ಟು
ಬಂದವರ ಮುಂದೆ ಬೀಗುವುದಿಲ್ಲವೆ?
ಬಿಡು ನೀನೂ ಹಾಗೆ.

ಈಗ ನನ್ನ ಕಣ್ಣೆದುರು ಬಂದು
ಸವಾಲು ಹಾಕಿ ಸೊಟ್ಟ ಮೂತಿ
ಓದಲು ನಂಗೊತ್ತಿಲ್ಲದ ಇಂಗ್ಲಿಷ್ ಹೆಸರು,
ಮಾಸಲು ಬಣ್ಣ
ತುಕ್ಕು ಹಿಡಿದ ದೇಹ
ಎಲ್ಲಾ ಪ್ರದಶಿ೯ಸಿ
ಕೈಕಾಲು ನೆಟ್ಟಗೆ ಇಲ್ಲದಿದ್ದರೂ
ನೀ ಹಳೆ ಕಾಲದವಳಾದರೂ
ಅದೆಷ್ಟು ಧಿಮಾಕೆ
ನನ್ನ ಅಜ್ಜಿ ತರ!

ಪರವಾಗಿಲ್ಲ ಬಿಡು ನನಗೇನು ಬೇಜಾರಿಲ್ಲ
ನೀ ಮಾತ್ರ ಒಮ್ಮೆ ನನ್ನ ದೇಹ ಕ್ಲಿಕ್ಕಿಸು
ನಿನ್ನಲ್ಲಿ ನಾ ಸೇರಿ
ನಿನ್ನ ಗುಡಾಣವೆಲ್ಲ ಸುತ್ತಾಡಿ
ಬೇಕಾದರೆ ಆಯಿಲ್ ಬಾತ್ ಮಾಡಿಸಿ
ಸವೀ೯ಸ್ ಚಾಜು೯  ಏನೂ ಬೇಡ
ಫೋಟೋ ಮಾತ್ರ ಕ್ಲಿಕ್ ಆದರೆ ಸಾಕು
ಕ್ಷಣ ಕ್ಷಣವೂ ನೋಡಿ
ನಾನೂ ಕುಣಿದಾಡುವೆ
ನಿನ್ನ ಯಜಮಾನನಂತೆ
ಓಕೇನಾ?

‍ಲೇಖಕರು Admin

19 October, 2016

0 Comments

Trackbacks/Pingbacks

  1. ಕ್ಲಿಕ್ ಆಯ್ತು ಕವಿತೆ : ಅದೆಷ್ಟು ಧಿಮಾಕೆ..? | | Sandhyadeepa…. - […] http://avadhimag.online/2016/10/19/%e0%b2%95%e0%b3%8d%e0%b2%b2%e0%b2%bf%e0%b2%95%e0%b3%8d-%e0%b2%86%e0%… […]
  2. ಕ್ಲಿಕ್ ಆಯ್ತು ಕವಿತೆ : ಅದೆಷ್ಟು ಧಿಮಾಕೆ..? | – Sandhyadeepa…. - […] http://avadhimag.online/2016/10/19/%e0%b2%95%e0%b3%8d%e0%b2%b2%e0%b2%bf%e0%b2%95%e0%b3%8d-%e0%b2%86%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading