ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಯವರೆಗು ಕಾಡುವ ಕಾಣದ ಸುಂದರಿ‌…

ರಾಸುಮ ಭಟ್

ಪ್ರೀತಿ ಎಂದರೆ ಕನಸು, ಮನದ ಬಾವನೆ ವ್ಯಕ್ತಪಡಿಸುವ ಸಾಧನ, ಎರಡು ಮನಸ್ಸುಗಳ ಮಿಲನ ಹೀಗೆ ಪ್ರೀತಿಯನ್ನು ವರ್ಣಿಸಲು ಪದಗಳು ಸಾಲದು, ಜೀವನದಲ್ಲಿ ನಿಜವಾದ ಪ್ರೀತಿ ಓಮ್ಮ ಮಾತ್ರ ಸಂಭವಿಸುತ್ತದೆ. ಮೊದಲ ಪ್ರೀತಿ ಎಂದಿಗು ಶಾಶ್ವತವಾಗಿರುತ್ತದೆ.

ನನ್ನ ಮೊದಲ ಪ್ರೀತಿಯ ಆರಂಭ ಬಸ್ಸ್ ನಲ್ಲಿ ಪ್ರಾರಂಭವಾಯಿತು, ಅದು 2007 ರ ಜುಲೈ ತಿಂಗಳು ಮಳೆಗಾಲದ ಸಮಯ ಹಾಲು ಬಣ್ಣದ , ನೀಳಕಾಯದ, ಕಣ್ಣನಲ್ಲೆ ಕೊಲ್ಲುವ ಸುಂದರಿಯನ್ನು ನೋಡಿದ ಮೊದಲ‌ ನೋಟದಲ್ಲೆ ಮನ ಸೆಳೆದಳು, ಆ ಮುಖ ಮುಚ್ಚಿದ ಚಲುವೆಯ ನೆನಪು ಕೊನೆಯವರೆಗು ಕಾಡುವುದು ನಿಶ್ಚಿತ ಎಂದು ಆಂದೆ ಅನಿಸಿತು.

ಬೆಳ್ಳೆಂಬೆಳಗೆ ಎದ್ದು ಕಾಲೇಜಿಗೆ ಹೋಗುವ ದಿನಗಳನ್ನು ನೆನೆದರೆ ಈ ಕ್ಷಣವು ರೋಮಾಂಚನವಾಗುತ್ತದೆ. ನನ್ನೂರಿನಿಂದ ಬಸ್ಸಿನಲ್ಲಿ ಪ್ರತಿ ದಿನ ಶಿವಮೊಗ್ಗಕ್ಕೆ ಕಾಲೇಜಿಗೆ ಹೋಗುವುದು ಆದಿನಗಳಲ್ಲಿ ಒಂದು ರೋಚಕ ಅನುಭವ , ಬಸ್ ಏರಿದ ಆರ್ಧಗಂಟೆಯ ನಂತರ ಆ‌ ನನ್ನ ಮುಖ ಮುಚ್ಚಿದ ಚಲುವೆಯು ಬಸ್ ಏರಿದರೆ ನಾನು ಶಿಲೆಯಂತೆ ನಿಶ್ಚಲನಾಗುತ್ತಿದ್ದನ್ನು ನೆನದರೆ ಈಗಲು ದೇಹದಲ್ಲಿ ರಕ್ತ ಸಂಚಾರ ನಿಂತ ಅನುಭವಾಗುತ್ತದೆ.

ಮೊದಲ ನೋಟದಲ್ಲೆ ಪ್ರೇಮ ಪಕ್ಷಿ ನಮ್ಮಬ್ಬಿರನ್ನು ಆಗಸಕ್ಕೆ ಕೊಂಡ್ಯೊತ್ತಿತು, ಇಬ್ಬರು ಬರಿ ಕಣ್ಣಲ್ಲೆ ಕುಶಲೋಪರಿ ವಿಚಾರಿಸುತ್ತಿದ್ದೆವು, ಮಾತನಾಡಲು ಇಬ್ಬರಿಗು ಮುಜುಗರ. ಬಸ್ ಹತ್ತಿದ ತಕ್ಷಣ ನನ್ನ ಬಳಿ ಬಂದು ನಿಲ್ಲುತ್ತಿದ್ದ ಆ ಸುಂದರಿಯ ಕಾಳಜಿ ಇಂದಿಗು ಯಾರು ತೋರಿಸದಿರುವುದು ನನ್ನ ದುರದೃಷ್ಟವೆ ಸರಿ.

ಪ್ರತಿ ಕ್ಷಣ ಆವಳದೆ ನೆನಪು ಈಗಲು ಕಾಡುತ್ತದ, ಅವಳು ನನ್ನ ಅವರಿಸಿದಳು ಎಂದರೆ ತಪ್ಪಾಗಲಾರದು, ಅವಳ ಮುಗ್ದ ನೋಟ ದಶಕ ಕಳೆದರು ಕಣ್ಣ ಮುಂದೆ ಮಿಂಚಿ ಮರೆಯಾಗುತ್ತದೆ. ಆ ಮುಖ ಮುಚ್ಚಿದ ಸುಂದರಿಯ ಬಳಿ ಓಮ್ಮ ಮಾತ್ರ ಮಾತನಾಡಿದ್ದು ಜೀವನ ಕಳೆಯುವಷ್ಟು ಸಾಕಾಯಿತೆಂಬ ಬಾವನೆ.

ತಂಗಿಯ ಜೊತೆ ಬರುತ್ತಿದ್ದ ನನ್ನ ಮುಖ ಮುಚ್ಚಿದ ಸುಂದರಿ ತಂಗಿಯ ಬಳಿ ಅವಳ ಬಾಷೆಯಲ್ಲಿ ನನ್ನ ಬಗ್ಗೆ ಹೇಳಿದ್ದು, ನನ್ನಡೆಗಿನ ಅವಳ ಅಪಾರ ಪ್ರೀತಿಯ ಮಾತುಗಳು ಪ್ರತಿಕ್ಷಣ ಪ್ರತ್ರಿಧ್ವನಿಯಂತೆ ಮಾರ್ದದನಿಸುತ್ತದೆ.ಹುಡುಗರು ಹುಡುಗಿಯ ಹಿಂದೆ ಹೋಗುವುದು ಮಾಮೂಲು, ಆದರೆ ನನ್ನ ವಿಷಯದಲ್ಲಿ ತುಸು ಬಿನ್ನ ನನ್ನ ಹಿಂದೆಯ ಬರುತ್ತಿದ್ದ ಮುಗ್ದ ಹುಡುಗಿಯ ಪ್ರೀತಿ ಪಡೆಯಲಾಗದ್ದಿದ್ದಕ್ಕೆ ನನಗೆ ದಿಕ್ಕಾರವಿರಲಿ.

ಅರ್ಥಿಕ ಆಭದ್ರತೆ, ತಂದೆಯ ಮೇಲಿನ ಅಪಾರ ಪ್ರೀತಿ, ಮದುವೆ ವಯಸ್ಸಿನ ಅಕ್ಕ, ಬೆಳೆಯುತ್ತಿದ್ದ ತಂಗಿ ಇವೆ ಮುಂತಾದ ಕಾರಣ, ಆ ನನ್ನ ಚಲುವೆಯ ಪ್ರೀತಿಯನ್ನು ಒಪ್ಪದಕ್ಜೆ ಇರುವ ಮುಖ್ಯ ಕಾರಣ.ಹೀಗೆ ಎರಡು ವರ್ಷಗಳು ಉರುಳಿದ್ದು ತಿಳಿಯಲೆಯಿಲ್ಲ. ಬರಿ ನೋಟದಲ್ಲೆ ಕುಶಲೋಪರಿ ವಿಚಾರಿಸುವುದಾಯಿತು.

ಆ ದಿನಗಳಲ್ಲಿ ಮೊಬೈಲ್ ನ ಬಳಿಕೆ ಸೀಮಿತ ವಾಗಿತ್ತು, ಇಂದಿನಂತೆ ಮೊಬೈಲ್ ಇದ್ದಿದ್ದರೆ ನನ್ನ ದೂರವಾಣಿ ಸಂಖ್ಯೆಯಾದರು ಅವಳಿಗೆ ನೀಡಿ ಸದಾ ಸಂಪರ್ಕದಲ್ಲಿದ್ದು, ಸ್ವಲ್ಪ ಸಮಯ ತೆಗದುಕೊಂಡು ಅವಳ ಪ್ರೀತಿಯನ್ನು ‌ಪಡೆಯಬಹುದ್ದಿತ್ತು. ಆದರೆ ಇಂದು ನನ್ನ ಬಳಿ ಮೊಬೈಲ್, ಆರ್ಥಿಕ ಭದ್ರತೆ ಎಲ್ಲವುಯಿದೆ. ಆದರೆ ಆ ಮುಖಮುಚ್ಚದ ಚಲುವೆ ನನ್ನ ಬಳಿಯಿಲ್ಲ.

ಕೇವಲ ಅವಳ ನೆನಪು ಮಾತ್ರ ನನ್ನ ಕೊನೆಯವರೆಗು ಶಾಶ್ವತವಾಗಿ ನನ್ನ ಮನಸ್ಸಿನಲ್ಲಿ ನೆಲೆಸಿರುತ್ತದೆ. ಅದು ಮಾರ್ಚ್ ತಿಂಗಳು 2009 ರ ಸಮಯ ಅವಳ ಕಾಲೇಜಿನ‌ ಕೊನೆಯ ದಿನಗಳು, ಅವಳ ಪ್ರೀತಿ ದಿನದಿಂದ ದಿನಕ್ಕೆ ಹೆಮ್ಮರದಂತೆ ಬೆಳೆಯತ್ತಾ ಸಾಗಿತು. ಆದರೆ ಪ್ರೇಮ ನಿವೇದನೆ ಕೈಗೆಟುಕದ ಮಾಯ ಜಿಂಕೆಯಂತೆ ಮರೆಯಾಯಿತು.

ಅದು ಮಾರ್ಚ್ 23 ರ ಸಂಜೆಯ ಸಮಯ ಅತ್ತ ರಾತ್ರಿಯು ಅಲ್ಲ ಇತ್ತ ಬೆಳಕು ಅಲ್ಲದ ಸಮಯ ಬಸ್ಸಿನಲ್ಲಿ ನಮ್ಮ ಕೊನೆಯ ಪ್ರಯಾಣ. ಅಂದು ಸಹ ಕಣ್ಣು ಮಾತ್ರ ಮಾತನಾಡಿತು. ಕೊನೆಯಲ್ಲಿ ಅವಳು ಇಳಿಯುವ ಸಮಯ ಬಂದಿತು ನನ್ನನ್ನು ದಾಟಿಕೊಂಡು ಹೋಗುವಾಗ ಹೊಟ್ಟೆಗೆ ಜೋರಾಗಿ ಗುದ್ದಿದ್ದು ನನಗೆ ಸಿಕ್ಕ ಕೊನೆಯ ಬಹುಮಾನ, ಅವಳು ಗುದ್ದಿದ ನೋವು ಈಗಲು ನನ್ನ ಅನುಭವಕ್ಕೆ ಬರುತ್ತದೆ.

ನಂತರ ಕೆಲಸ ದೊರೆಯಿತು ಆರ್ಥಿಕವಾಗಿ ಭದ್ರತೆ ದೊರೆತ ನಂತರ ಸತತ ಏಳು ವರ್ಷಗಳ ಹುಡುಕಾಡಿದರು ಅವಳ ವಿಳಾಸ ಪತ್ತೆಯಾಗಲಿಲ್ಲ, ಓಮ್ಮ ಅಕಸ್ಮಿಕವಾಗಿ ಗೆಳೆಯನೊಂದಿಗೆ ವ್ಯವಹಾರ ನಿಮಿತ್ತ ಒಬ್ಬರ ಮನೆಗೆ ತೆರೆಳಿದಾಗ ಆ ಮನೆ ಅದೆ ನನ್ನ ಚಲುವೆ ಮನೆಯೆಂದ ಗೊತ್ತಾದಾಗ ನನ್ನ ಸಂತೋಷಕ್ಕೆ ಪಾರವೆಯಿರಲ್ಲಿಲ್ಲ. ನನ್ನ ಬಗ್ಗೆ ತಾಯಿಯ ಬಳಿ ತಿಳಿಸಿದ್ದ ಸುಂದರಿಯ ಮುಖ ಮೊದಲ‌ ಬಾರಿ ನೋಡಿದ್ದು ನಮ್ಮ ಪರಿಚಯದ ಹತ್ತು ವರ್ಷಗಳ ನಂತರ ಅವಳ ಮುಖ ಆಲಿಯಾ ಭಟ್ ರನ್ನು ಹೋಲುತ್ತಿತ್ತು ಮತ್ತು ಅವಳು ಎರಡು ಮಕ್ಕಳ ತಾಯಿಯೆಂದು ತಿಳಿದ ನಂತರ ದುಖಃ ಕಟ್ಟೆ ಹೊಡೆಯಿತು .ಅದರೆ ಅವಳನ್ನು ನೋಡಿದ ನನಗೆ ಮೊತ್ತೊಮ್ಮೆ ಬದುಕಿದ ಅನುಭವವಾಯಿತು.

ಕೆಲವು ದಿನಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದಾಗ ಯಾವುದೊ ವಿಚಾರ ತಂಗಿಯ ಬಳಿ ಪ್ರಸ್ತಾಪಿಸಿದಾಗ ನನ್ನ ಪ್ರೀತಿಯ ವಿಷಯವನ್ನು ಹಂಚಿಕೊಂಡೆ, ಅಂದಿನ ದಿನ ನನ್ನ. ಮನಸ್ಸು ಸ್ವಲ್ಪ ಹಗುರವಾದಂತಹ ಅನುಭವ ನೀಡಿತು.ಈ ನನ್ನ ಪ್ರೀತಿಯ ಅನುಭವ ಸದಾ ಹಸಿರಾಗಿರಲೆಂದು ಈ ಅಂಕಣದ ಮೂಲಕ ಅಶೀಸುತ್ತೆನೆ.

ಇಂತಿ ನನ್ನ ಪ್ರೀತಿಯ ಆಲಿಯಾ ಭಟ್ ………………………………………..

‍ಲೇಖಕರು Admin

10 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading