ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇರಳದ ‘ರಂಗ’ದಲ್ಲಿ ಕಿರಣ್ ಭಟ್

ಕಿರಣ್ ಭಟ್

ಇಟ್ಫಾಕ್ 2026

ಕೇರಳದ ತ್ರಿಶೂರಿನಲ್ಲಿ ‘ಕೇರಳದ ಅಂತರ್ರಾಷ್ಟ್ರೀಯ ನಾಟಕೋತ್ಸವ’ ಪ್ರಾರಂಭವಾಗಿದೆ. ಏಳು ದಿನಗಳ ಈ ನಾಟಕೋತ್ಸವದಲ್ಲಿ ಎಂಟು ಅಂತರ್ರಾಷ್ಟ್ರೀಯ ನಾಟಕಗಳು, ಭಾರತದ ಬೇರೆ ಬೇರೆ ಭಾಷೆಗಳ ಎಂಟು ನಾಟಕಗಳು, ಎಂಟು ಮಲಯಾಳಂ ನಾಟಕಗಳು ಹೀಗೆ ಇಪ್ಪತ್ನಾಲ್ಕು ನಾಟಕಗಳ ನಲವತ್ತೆಂಟು ಪ್ರದರ್ಶನಗಳು ಐದು ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಸಂಗೀತ ಕಾರ್ಯಕ್ರಮಗಳಿಗಾಗಿ ವಿಶೇಷ ವೇದಿಕೆಯಿದೆ. ರಂಗ ಸಂವಾದಗಳು ನಡೆದಿವೆ.

ಪ್ರತಿ ವರ್ಷವೂ ಒಂದೊಂದು ಆಶಯದೊಂದಿಗೆ ನಡೆಯುವ ಈ ನಾಟಕೋತ್ಸವದ ಈ ವರ್ಷದ ಆಶಯ ‘Voices in the silence’ – ‘ಮೌನದೊಳ ಗಣ ಧ್ವನಿಗಳು‘ ಇದು ದಮನಿತ ಕಥನಗಳು, ಅಂಚಿನಲ್ಲಿರುವ ಧ್ವನಿಗಳು ಮತ್ತು ಕಲಾತ್ಮಕ ಪ್ರತಿರೋಧದ ಮೇಲೆ ಕೇಂದ್ರೀಕೃತವಾಗಿದೆ. ಯುವಶಕ್ತಿ, ವಿದ್ಯಾರ್ಥಿ ಕೇಂದ್ರೀತವಾದ ವೈವಿಧ್ಯ ತುಂಬಿದ ಆಸಾಂಪ್ರದಾಯಿಕವಾದ ಪ್ರದರ್ಶನಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಂಯೋಜಕರು ಹೇಳಿಕೊಂಡಿದ್ದಾರೆ

ದನಿಯಡಗಿಸಿದ ಪ್ರಸಂಗ

27 ನೆಯ ತಾರೀಕು ಪ್ಯಾಲಸ್ಟೈ ನ್ ನ ನಾಟಕ ‘Last Play in Gaza’ ಪ್ರದರ್ಶಿತವಾಗಬೇಕಿತ್ತು. ಆದರೆ ನಾಟಕ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾವನ್ನು ನಿರಾಕರಿಸಲಾಯ್ತು. ಸಂಯೋಜಕರ ಪ್ರಕಾರ ಎಲ್ಲ ಅಂತರ್ರಾಷ್ಟ್ರೀಯ ನಾಟಕಗಳಿಗೂ ಕೇಂದ್ರ ಸರಕಾರದಿಂದ ‘ರಾಜಕೀಯ ಒಪ್ಪಿಗೆ’ ದೊರಕಿತ್ತು. ನಿರಾಕರಿಸಲು ಕಾರಣಗಳು ತಿಳಿಯುತ್ತಿಲ್ಲ ಎನ್ನುತ್ತಾರೆ. ನಾಟಕ ಪ್ರದರ್ಶನಗೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ.

ಪ್ಯಾಲಸ್ಟೈನ್ ನ ಜನತೆಯೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ನಾಟಕ ಆಗಬೇಕಾದ ಜಾಗದಲ್ಲೇ ಕವಿಗೋಷ್ಠಿ ಏರ್ಪಡಿಸಲಾಯ್ತು.

‍ಲೇಖಕರು avadhi

30 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading