ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ವಿ ತಿರುಮಲೇಶ್: ಜಲ್ಲಿಕಟ್ಟು, ಕಂಬಳ, ಕೋಳಿ ಅಂಕ ವಿಕೃತ ಸಂತೋಷದ ಕ್ರೀಡೆ

ಇದು ಜುಗಾರಿ ಕ್ರಾಸ್ 

ಚರ್ಚೆಗೆಂದೇ ಇರುವ ವೇದಿಕೆ 

ಕೆ ವಿ ತಿರುಮಲೇಶ್ ಅವರು ತಮ್ಮ ನೋಟವನ್ನು ಮಂಡಿಸಿದ್ದಾರೆ 

ನಿಮ್ಮ ಅಭಿಪ್ರಾಯ ಏನು?

avadhimag@gmail.com ಗೆ ಕಳಿಸಿ 

ಚರ್ಚೆಗೆ ಆಹ್ವಾನ 

ಕೆ.ವಿ.ತಿರುಮಲೇಶ್

ಜಲ್ಲಿಕಟ್ಟು, ಕಂಬಳ, ಕೋಳಿ ಅಂಕ ಮುಂತಾದ ಕ್ರೀಡೆಗಳಿಗೆ ಪರಂಪರೆ ಇರಬಹುದು; ಆದರೆ ಅವು ಮೂಕ ಪ್ರಾಣಿಗಳಿಗೆ ಅನಗತ್ಯ ಹಿಂಸೆ ನೀಡಿ ಮನುಷ್ಯರು ವಿಕೃತ ಸಂತೋಷವನ್ನು ಪಡುವಂಥ ಕ್ರೀಡೆಗಳು.

ಪರಂಪರೆ ಎನ್ನುವುದೇ ಸಮರ್ಥನೆಗೆ ಕಾರಣವಾದರೆ ಇಂದಿನ ಸಮಾಜ ಕೈಬಿಟ್ಟಂತಹ ಅನೇಕ ಅಸಹನೀಯ ಆಚರಣೆಗಳನ್ನು (ಉದಾ: ಮೃಗಯಾ) ಮತ್ತೆ ಸಂಸ್ಕೃತಿಯ ಹೆಸರಿನಲ್ಲಿ ಆಚರಣೆಗೆ ತರಬೇಕಾಗುತ್ತದೆ. ಸಮೂಹಸನ್ನಿಗೆ ಒಳಗಾಗಿ ಮನುಷ್ಯರು ವಿವೇಕವನ್ನು ಕಳೆದುಕೊಳ್ಳಬಾರದು.

ಹೀಗೆಂದಾಗ ಕುದುರೆ ರೇಸಿನ ಉದಾಹರಣೆಯನ್ನು ಕೊಡಲಾಗುತ್ತದೆ- ಅದು ಶ್ರೀಮಂತರ ಆಟ, ಅದನ್ನು ಒಪ್ಪುತ್ತೀರಿ; ಗ್ರಾಮೀಣರ ಆಟಕ್ಕೆ ಅಡ್ಡಿಪಡಿಸುತ್ತೀರಿ ಮುಂತಾಗಿ ಆಪಾದಿಸಲಾಗುತ್ತದೆ.

ಅದರೆ ಇಲ್ಲಿ ಗಮನಿಸಬೇಕಾದ ವಿಷಯವಂದರೆ ಈ ಪ್ರಾಣಿಗಳ ವಿಕಸನ ಚರಿತ್ರೆ: ಇವುಗಳನ್ನು ಮನುಷ್ಯರು ಗೃಹೀಕರಣಗೊಳಿಸಿದ್ದು (domestication) ವಿವಿಧ ಗೃಹೋಪಯೋಗಿ ಉದ್ದೇಶಗಳಿಗಾಗಿ: ಕೋಣ ಗದ್ದೆ ಉಳುವುದಕ್ಕೆ, ಎಮ್ಮೆ ಹಾಲಿಗೆ; ಕುದುರೆ ಸವಾರಿ ಮಾಡುವುದಕ್ಕೆ; ಕೋಳಿ ಮಾಂಸಕ್ಕೆ..

ಆದ್ದರಿಂದ ಕುದುರೆ ಓಡಿಸುವುದು ಸರಿ (ಆದರೆ ಹಿಂಸಾತ್ಮಕವಾಗಿ ಅಲ್ಲ), ಕೋಣ ಓಡಿಸುವುದು ಸರಿಯಲ್ಲ (ಕೋಣ ಓಡುವುದಕ್ಕೆ ಇವಾಲ್ವ್ ಆಗಿಲ್ಲ); ಕೋಳಿಯನ್ನು ತಿನ್ನಬಹುದು,  ಆದರೆ ಅವುಗಳನ್ನು ಪರಸ್ಪರ ಕಚ್ಚಾಡಿಸಿ, ಕೊಲ್ಲಿಸಿ ಆನಂದಿಸುವುದು ಸರಿಯಲ್ಲ.

ಯೋಚಿಸಿ ನೋಡಿ: ಮನುಷ್ಯರನ್ನು ಒತ್ತಾಯವಾಗಿ ನಾಲ್ಕು ಕಾಲಿನ ಸ್ಪರ್ಧೆಗೆ  ಇಳಿಸಿದರೆ ಹೇಗೆ?

ಈ ಸಮೂಹ ಸನ್ನಿ ಹೀಗೇ ಮುಂದುವರಿದರೆ ನಮ್ಮ ಸಮಾಜ ಹಂದಕ್ಕೆ ಸರಿಯುವುದರಲ್ಲಿ ಸಂಶಯವಿಲ್ಲ. ಮನರಂಜನೆಗೆ ಮನುಷ್ಯರಿಗೆ ಅನೇಕ ಅಹಿಂಸಾತ್ಮಕವಾದ ಆಟಗಳಿರುವಾಗ ಈ ಹಿಂಸನ ವಿಧಾನಗಳೇ ಯಾಕೆ?

‍ಲೇಖಕರು admin

30 January, 2017

6 Comments

  1. ರಘುನಾಥ

    ಮನುಷ್ಯನಹಿಂಸಾನಂದವೇಕಾರಣ

  2. Ananda Prasad

    ಕಂಬಳ, ಕೋಳಿ ಅಂಕ, ಜಲ್ಲಿಕಟ್ಟು ಇವೆಲ್ಲವೂ ಅನಾಗರಿಕ ಕ್ರೀಡೆಗಳಾಗಿದ್ದು ನಾಗರಿಕ ಸಮಾಜಕ್ಕೆ ಇವುಗಳು ಭೂಷಣವಲ್ಲ. ಇಂಥ ಕ್ರೀಡೆಗಳನ್ನು ಸಂಸ್ಕೃತಿಯ ಹೆಸರಿನಲ್ಲಿ ಸಮರ್ಥಿಸುವುದು ಆಘಾತಕಾರಿ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಸಮಾಜಕ್ಕೆ ನೀತಿ ಪಾಠ ಹೇಳಬೇಕಾದ ಧರ್ಮಾಧಿಕಾರಿಗಳು, ಸ್ವಾಮೀಜಿಗಳು ಇವುಗಳ ಸಮರ್ಥನೆಗೆ ನಿಂತಿರುವುದು. ಮನುಷ್ಯ ವಿಕಾಸ ಹೊಂದುತ್ತಾ ಮೇಲ್ಮಟ್ಟಕ್ಕೆ ಹೋಗಬೇಕೇ ಹೊರತು ಇದ್ದಲ್ಲೇ ಇರುವುದು ಅಥವಾ ಕೆಳಮಟ್ಟಕ್ಕೆ ಇಳಿಯುವುದು ವಿಕಾಸ ಎನಿಸಿಕೊಳ್ಳುವುದಿಲ್ಲ. ಕಂಬಳ, ಕೋಳಿ ಅಂಕ, ಜಲ್ಲಿಕಟ್ಟು ಇವೆಲ್ಲ ಮನುಷ್ಯನ ಸುಗಮ ಜೀವನಕ್ಕೆ ಅನಿವಾರ್ಯವಾದ, ಅಗತ್ಯವಾದ ಕ್ರಿಯೆಗಳೇನೂ ಅಲ್ಲ. ಜನಸಾಮಾನ್ಯರನ್ನು ಬಾಧಿಸುವ ಎಷ್ಟೋ ವಿಷಯಗಳು ಇರುವಾಗ ಅವುಗಳನ್ನು ಬಿಟ್ಟು ಇಂಥ ಕ್ಷುಲ್ಲಕ ವಿಷಯಗಳಿಗೆ ಹೋರಾಡುವುದು ದುರಂತ. ನಮ್ಮ ಸಮಾಜಕ್ಕೆ ಮಾರ್ಗದರ್ಶಕರೇ ಇಲ್ಲದಂತಾಗಿಹೋಗಿರುವುದು ಶೋಚನೀಯ.

  3. Ashalatha, Mangaluru

    ಸರ್, ತಾವು ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ. ಮನುಷ್ಯರ ಸಂತೋಷಕ್ಕಾಗಿ ಹಲವಾರು ಮನರಂಜನೆಗಳಿರುವಾಗ, ಈ ರೀತಿಯ ಹಿಂಸಾತ್ಮಕ ಕ್ರೀಡೆ ನಮಗೆ ಬೇಕೇ?

  4. ಅಕ್ಕಿಮಂಗಲ ಮಂಜುನಾಥ

    ಈ ಮೂರು ಕ್ರೀಡೆಗಳಲ್ಲಿ ಕೋಳಿ ಅಂಕವನ್ನು ನೋಡಿದ್ದೇನೆ.
    ಇದರಲ್ಲಿ ಕೋಳಿಗಳನ್ನು ಕಾದಾಡಲು ಬಿಟ್ಟು ಆನಂದ ಪಡುವುದೊಂದೇ ಇವರ ಉದ್ದೇಶವಲ್ಲ. ಇವುಗಳ ಜೊತೆಗೆ ದರ್ಫ ದೌರ್ಜನ್ಯವೂ ಅತಿರೇಕಕ್ಕೆ ಹೋಗಿರುವುದೂ ಉಂಟು. ಇದರಿಂದ ಅನೇಕ ಜನರು ಪಾಪರ್ ಆಗಿರುವುದೂ ಇದೆ. ಬಡಿದಾಡಿ ಕೈಕಾಲು ಮುರಿದುಕೊಂಡು ಪ್ರಾಣ ಕಳೆದುಕೊಂಡವರೂ ಇದ್ದಾರೆ. ಈ ಕ್ರೀಡೆಗಳನ್ನು ನಿಷೇಧ ಮಾಡುವುದೇ ಒಳಿತು.

  5. V.R.Carpenter

    ತಿರುಮಲೇಶ ಸರ್ ಅವರ ಅಭಿಪ್ರಾಯ ಸರಿಯಾಗಿದೆ. ಅವರು ಹೇಳುವಂತೆ ಎಲ್ಲಾ ಅನಾಚರಣೆಗಳನ್ನು ಪರಂಪರೆಯನ್ನು ಉಳಿಸುವ ಭರದಲ್ಲಿ ಮರುಸ್ಥಾಪನೆಗೊಳಿಸಿದರೆ ಸಮಾಜ ಹೇಗಿರಬಹುದೆಂಬ ಕಲ್ಪನೆ ಯಾರಿಗಾದರೂ ಇದೆಯೇ?

  6. Sarala

    ee ella acharanegalu kaalamanadalli ello shuruvaagi samprayada hesaru paDedive. ee reetiya hisamtmaka acharanegalannu bittu hosadada mattu hechchu arthavatthada (more meaningful) acharanegalannu prarambisi, hosa parampare yaake prarambisabiradu? Are we so uncreative? Why are we not evolving creatively???

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading