ಪ್ರಜಾವಾಣಿಯಲ್ಲಿ ದೀರ್ಘ ಕಾಲ ಪತ್ರಕರ್ತೆಯಾಗಿದ್ದ ಕುಸುಮಾ ಶಾನಭಾಗ್ ಕನ್ನಡ ಸಾಹಿತ್ಯ ಲೋಕ ಪ್ರೀತಿಸಿದ ‘ಭಾರತೀಸುತ’ರ ಮಗಳು. ಜನಪರ ಕಾಳಜಿಯಿಂದ ಪತ್ರಿಕೋದ್ಯಮದೊಂದಿಗೆ ಗುರುತಿಸಿಕೊಂಡ ಕುಸುಮಾ ಅವರ ಹೊಸ ಕಾದಂಬರಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಕುಸುಮಾ ಶಾನುಭಾಗ ಮಹಿಳಾಲೋಕದ ಅಂಕುಡೊಂಕುಗಳನ್ನು ಚಿಕಿತ್ಸಕ ದೃಷ್ಟಿಯಿಂದ ಕಾಣಬಲ್ಲರು. ಪತ್ರಕತರ್ೆಯಾಗುವ ಮುನ್ನ ಸ್ವಯಂ ಸೇವಾ ಸಮಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ಗ ಲೈಂಗಿಕ ಕಾರ್ಯಕತರ್ೆಯರ ಬದುಕನ್ನು ಆಳವಾಗಿ ಅಭ್ಯಸಿಸಿದವರು. ಅಲ್ಲಿನ ಕ್ರೌರ್ಯದಿಂದ ತಲ್ಲಣಗೊಂಡರು. ಒಮ್ಮೆ ಅಧ್ಯಯನಕ್ಕೆ ಹೋಗಿದ್ದಾಗ ಸಿಟ್ಟಿಗೆದ್ದ ತಲೆ ಹಿಡುಕರು ಅವರನ್ನು ಎರಡನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದರು. ಇಂತಹ ಭಯಾನಕ ಅನುಭವ ಅವರನ್ನು ಹಿಮ್ಮೆಟ್ಟಿಸಲಿಲ್ಲ. ತಮ್ಮ ಅಧ್ಯಯನ ಮುಂದುವರೆಸಿದರು. ಅಲ್ಲಿನ ಮಹಿಳೆಯರ ನರಕ ಸದೃಶ್ಯ ಜೀವನ ‘ಕಾಯಕ ಕಾರ್ಪಣ್ಯ’ವಾಗಿ ಹೊರಬಂತು. ನಂತರ ಬಂದದ್ದು ಸಣ್ಣ ಕತೆಗಳ ಸಂಕಲನ. ಲಿಂಗ ತಾರತಮ್ಯದಿಂದಾಗಿ ಮಹಿಳೆ ಅನುಭವಿಸಬೇಕಾದ ಮಾನಸಿಕ ಹಿಂಸೆ ಅವರ ಬಹುಪಾಲು ಕತೆಯ ವಸ್ತು ಆಯಿತು.

‘ಮಣ್ಣಿಂದ ಎದ್ದವರು’ ಕುಸುಮಾ ಅವರ ಚೊಚ್ಚಲ ಕಾದಂಬರಿ. ಹೆಣ್ಣಿನ ಶೋಷಣೆಯ ವಿವಿಧ ಆಯಾಮಗಳು ಇಲ್ಲಿ ರುಪುಗೊಂಡಿದೆ. ದೇವರ ಭಟ್ಟರ ಕಾವೇರಿ ಆಸ್ತಿಯಲ್ಲಿ ಪಾಲು ಕೇಳಿ ಪಡೆದದ್ದು ಅಕ್ಷಮ್ಯ ಅಪರಾಧವಾಗಿ ಕಂಡು ಹಲವು ಅಡಚಣೆಗೆ ಈಡಾಗಬೇಕಾಯಿತು. ಇದೆಲ್ಲವನ್ನೂ ಎದುರಿಸಿ ಎದ್ದು ನಿಂತ ರೋಚಕ ಕತೆ ಇದು.
ಕಾಲ ಬದಲಾಗಿದೆ ನಿಜ. ಆದರೆ ಹೆಣ್ಣಿನ ಬದುಕಿನಲ್ಲಿ ಅದು ಏನಾದರೂ ಗುಣಾತ್ಮಕ ಬದಲಾವಣೆ ತಂದಿದೆಯೇ? ಕಾವೇರಿಯ ಮಾತಿನಲ್ಲೇ ಹೇಳುವುದಾದರೆ ‘ಅಜ್ಜಿ ಆಗ ಅನುಭವಿಸಿದ ಕಷ್ಟಕ್ಕೂ ನಾನು ಈಗ ಅನುಭವಿಸುತ್ತಿರುವ ಕಷ್ಟಕ್ಕೂ ವ್ಯತ್ಯಾಸ ಉಂಟ? ಇಲ್ಲವೇ ಇಲ್ಲ. ಒಂದೇ ರೀತಿ ಯಾಕೆ ಹೇಳು?…. ಹೆಂಗಸು ಹೇಳದೇ ಕಾರಣ. ನಮ್ಮ ಜನರು ಮಣ್ಣಿನ ಅಧಿಕಾರ ಹೆಣ್ಣಿಗೆ ಕೊಡೋದಿಲ್ಲ. ಅವಳಾಗಿ ತಗೊಂಡ್ರೆ ಒಪ್ಪಿಕೊಳ್ಳೋಕೂ ತಯಾರಿಲ್ಲ. ಅವಳೀಗೆ ಸ್ವಂತಿಕೆ ಇದ್ರೆ …..ಉಸಿರು ಉಸಿರಿಗೂ ಹೋರಾಡಬೇಕು.’ ಇಡೀ ಕಾದಂಬರಿಯ ತಿರುಳು ಈ ಮಾತಿನಲ್ಲಿದೆ.
ಏನಾದರೂ ಆಗಲಿ, ಕಾವೇರಿಯ ಬದುಕು ಸುತ್ತಲಿನವರಿಗೆ ಧೈರ್ಯ ತುಂಬುವಂತಹದ್ದಾಗಿದೆ. ಮಹಿಳಾ ಹಕ್ಕು ಮತ್ತು ಜಾತಿ ವಿನಾಶದ ಆಶಯ ಹೊಂದಿರುವ ಕೃತಿ ಇದು. ಈ ಕಾದಂಬರಿಗಾತರ್ಿಗೆ ಶುಭ ಹಾರೈಸುತ್ತಾ; ಮುನ್ನುಡಿ, ಹಿನ್ನುಡಿ ಸಂಸ್ಕೃತಿಗೆ ಒಗ್ಗದೆಂದರೂ ಇದನ್ನು ಬರೆಸಿದ ಗೆಳತಿ ಕುಸುಮಾ ಶಾನುಭಾಗ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಎಚ್.ಎಲ್. ಕೇಶವಮೂರ್ತಿ
ಬೆನ್ನುಡಿಯಿಂದ





ನೋವಿನಲ್ಲಿ ಮಿಂದೆದ್ದವರಿಂದ ಮಾತ್ರ ಮಣ್ಣಿಂದ ೆದ್ದವರು ಕಾದಂಬರಿ ಬರೆಯಲು ಸಾಧ್ಯ. ಹ್ಯಾಟ್ಸಫ್್ ಮೇಡಂ!