ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿಂಙಣ್ಣನವರ ಮನೆಯಲ್ಲೊಂದು ಮದ್ಯಾಹ್ನ

DSC01420__1_

ಪ್ರಜ್ಞಾ ಮತ್ತೀಹಳ್ಳಿ

ಮೊನ್ನೆ ಫೆಬ್ರುವರಿ ತಿಂಗಳಿನಲ್ಲಿ ನಾನಲ್ಲಿಗೆ ಹೋಗಿದ್ದೆ. ಕಾಸರಗೋಡಿನಿಂದ ಬದಿಯಡ್ಕಕ್ಕೆ ಹೋಗಲಿಕ್ಕೆ ಬೇಕಾದಷ್ಟು ಬಸ್ಸುಗಳಿವೆ. ಬದಿಯಡ್ಕದಲ್ಲಿ ಇಳಿದು ಯಾರನ್ನು ಕೇಳಿದರೂ ಕಿಂಙಣ್ಣ ರೈ ಅವರ ಬಗ್ಗೆ ವಿವರ ಹೇಳುತ್ತಾರೆ. ಎಲ್ಲಾ ಆಟೊದವರಿಗೂ ಅವರ ಮನೆ ಗೊತ್ತು. ಇಕ್ಕೆಲದಲ್ಲೂ ದಟ್ಟ ಕಾಡು ತುಂಬಿರುವ ಮಣ್ಣು ರಸ್ತೆಯಲ್ಲಿ ಆಟೊ ಓಡಿ ಒಂದು ಇಳಿಜಾರಿನಲ್ಲಿರುವ ಗೇಟಿನೆದುರು ನಿಂತಿತು. ಹಳೆಯ ಗೇಟಿನ ಮೇಲೆ ಕವಿತಾ ಕುಟೀರ ಅಂತ ಬರೆದದ್ದು ನೋಡಿದೊಡನೆ ಒಂಥರ ಥ್ರಿಲ್ ಅನ್ನಿಸಿತು.
ದೊಡ್ಡ ದೊಡ್ಡ ಮರ-ಗಿಡ-ಬಳ್ಳಿಗಳು ತುಂಬಿದ ವಿಶಾಲ ಕಂಪೌಂಡಿನಲ್ಲಿ ಹಳೆಯ ಹೆಂಚಿನ ಮನೆಯಿತ್ತು. ಒಳ ಹೋದರೂ ಬೊಗಳುವ ನಾಯಿಗೆ ಹೆದರಿ ಅಲ್ಲೇ ನಿಂತೆ. ತೋಟದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಂದಂತೆ ಕಾಣುವ ಸಣ್ಣ ಪ್ರಾಯದ ಹೆಣ್ಣು ಮಗಳೊಬ್ಬಳು ಬಂದರು. ನಾನು ಹೀಗೀಗೆ ಕನರ್ಾಟಕದಿಂದ ಬಂದಿದ್ದೇನಂತ ಪರಿಚಯ ಹೇಳಿಕೊಂಡೆ. ಇದು ಅವರು ಮೊದಲು ವಾಸಿಸುತ್ತಿದ್ದ ಮನೆಯೆಂತಲೂ ಇತ್ತೀಚೆಗೆ ಎದುರಿಗೆ ಹೊಸದಾಗಿ ಕಟ್ಟಿಸಿರುವ ಮತ್ತೊಬ್ಬ ಮಗನ ಮನೆಯಲ್ಲಿ ಇರುತ್ತಾರೆಂತಲೂ ಹೇಳಿದರು.
DSC01399
ಇದು ಅವರ ಹಳೆಯ ಮನೆಯಾದ್ದರಿಂದ ನಾನೊಮ್ಮೆ ಒಳಗೆಲ್ಲ ನೋಡುತ್ತೇನೆಂದು ವಿನಂತಿಸಿಕೊಂಡೆ. ಆಕೆ ಒಳಗೆ ಕರೆದರು. ಹೋದೆ. ನಮ್ಮಲ್ಲಿ ಜಗಲಿ ಎಂದು ಕರೆಯುವ ಹಜಾರದಲ್ಲಿ ದೊಡ್ಡ ಬರೆಯುವ ಮೇಜು-ಕುಚರ್ಿ ಕಾಣಿಸಿತು. ಸುತ್ತಲೂ ಗಾಜಿನ ಕಪಾಟುಗಳಲ್ಲಿ ಪುಸ್ತಕ ತುಂಬಿತ್ತು. ಗೋಡೆಯ ತುಂಬಾ ಅವರು ಪ್ರಶಸ್ತಿ ಸ್ವೀಕರಿಸುವ ಬಗೆ-ಬಗೆ ಫೋಟೊಗಳು. ಸಾಕಷ್ಟು ಫೊಟೊ ತೆಗೆದುಕೊಂಡೆ. ಅಂಗಳದಲ್ಲಿ ಎತ್ತರದ ಮರವೊಂದಕ್ಕೆ ಎಂಥದೊ ಹಸಿರು ಬಂದಳಿಕೆ ಬೆಳೆದು ವಿಚಿತ್ರವಾಗಿ ಕಾಣುತ್ತಿತ್ತು. ಕನ್ನಡ ಭಾಷೆಯ ಸ್ಥಿತಿಯ ಪ್ರತಿನಿಧಿಯಂತಿರುವ ಅದರ ಫೊಟೊ ತೆಗೆದು ಎದುರಿನ ಮನೆಗೆ ಹೋದೆ. ಇತ್ತೀಚೆಗೆ ಒಂದು ವರ್ಷದ ಮೇಲಾಯಿತು ಕಿಂಙಣ್ಣ ರೈ ಅವರು ಇಲ್ಲಿರಲು ಪ್ರಾರಂಭಿಸಿ. ಸೊಸೆ ಗೀತಾ ನಗುಮುಖದ ಸ್ಫುರದ್ರೂಪಿ ಮಹಿಳೆ. ಬಹಳ ಆತ್ಮೀಯವಾಗಿ ಸ್ವಾಗತಿಸಿ ಹಾದರ್ಿಕವಾಗಿ ಹರಟಿದರು. ಅವರಿಗೆ ಎಷ್ಟು ಜನ ಅತಿಥಿಗಳು ಬಂದರೂ ಬೇಸರವಿಲ್ಲ.
DSC01403
ಇತ್ತೀಚೆಗೆ ಮಾವನವರಿಗೆ ಕಿವಿ ಅಷ್ಟಾಗಿ ಕೇಳುವುದಿಲ್ಲ, ಜ್ಞಾಪಕ ಶಕ್ತಿ ಕಡಿಮೆಯಾಗಿದೆ, ಹೊರಗೆ ಬರುವುದಿಲ್ಲ ಎಂದೆಲ್ಲ ವಿವರಿಸಿ ಒಳಗಿನ ಕೋಣೆಗೆ ಕರೆದೊಯ್ದರು. ಕನ್ನಡದ ಧೀಮಂತ ಹೋರಾಟಗಾರ ಬಿಳಿಯ ಪಂಜೆಯುಟ್ಟು, ಬಿಳಿಯ ಅಂಗಿ ಧರಿಸಿ ಕುಚರ್ಿಯಲ್ಲಿ ಕೂತಿದ್ದರು. ಬಗ್ಗಿ ನಮಸ್ಕಾರ ಮಾಡಿದೆ. ಹೆಸರೇನು ಅಂತ ಕೇಳಿದರು. ಹೇಳಿದೆ. ತಕ್ಷಣ ಹಾಗಂದರೆ ಬುದ್ಧಿವಂತಿಕೆ ಅಂತ ಅರ್ಥ ಎಂದು ಹೇಳಿದರು. ಮುಂದುವರೆದು ನನ್ನ ಹೆಸರು ಕಿಂಙಣ್ಣ ಅಂತ ಹಾಗೆಂದರೆ ಸಣ್ಣವ ಅಂತ ಅರ್ಥ ಎಂದರು. ನಾನು ತಕ್ಷಣ ಸಣ್ಣವ ಎಂಬುದು ನಿಮ್ಮ ಹೆಸರಲ್ಲಷ್ಟೇ ಇದೆ. ಆದರೆ ನಿಮ್ಮ ವ್ಯಕ್ತಿತ್ವದಲ್ಲಿ, ಸಾಧನೆಯಲ್ಲಿ ದೊಡ್ಡತನವೇ ತುಂಬಿದೆ. ನೀವು ಇಡೀ ಕನ್ನಡ ಜಗತ್ತಿಗೇ ದೊಡ್ಡವರು ಎಂದೆ. ಅವರಿಗೆ ತಿಳಿಯಿತೊ ಇಲ್ಲವೊ ಗೊತ್ತಾಗಲಿಲ್ಲ. ಸೊಸೆಯ ಕಡೆ ತಿರುಗಿ ಇವರಿಗೆ ಕುಡಿಯಲು ಕೊಟ್ಟೆಯಾ ಅಂತ ಕೇಳಿದರು. ಹೌದು ಜ್ಯೂಸು ಕುಡಿದೆ ಅಂತ ಹೇಳಿದೆ. ಅವರ ಫೊಟೊಗಳನ್ನು ತೆಗೆದುಕೊಂಡೆ. ನನ್ನ ಊರು ಧಾರವಾಡ ಅಂತ ಕೇಳಿದೊಡನೆ ಹಳೆಯ ನೆನಪುಗಳಿಂದ ಧಾರವಾಡಕ್ಕೆ ಬಂದ ಕುರಿತು ಹೇಳಿದರು. ಅಷ್ಟಾಗುವಾಗ ಮತ್ತೆ ಎಂಥದೊ ಮರೆವು. ಮತ್ತೊಮ್ಮೆ ನನ್ನ ಹೆಸರು ಕೇಳಿದರು. ತಕ್ಷಣ ಅದರ ಅರ್ಥ ಹೇಳಿದರು. ಸೊಸೆಯ ಕಡೆ ತಿರುಗಿ ಬಾಯಾರಿಕೆಗೆ ಏನು ಕೊಟ್ಟೆ ಅಂತ ಕೇಳಿದರು. ಅವರು ಕೊಟ್ಟಿದ್ದೇನೆ ಅಂತ ಹೇಳಿದರು. ಸೊಸೆ ಒಂದು ಲೋಟ ಹಾಲು ತಂದು ಅವರಿಗೆ ಕುಡಿಯಲು ಕೊಟ್ಟರು. ಸಣ್ಣ ಮಗುವಿನ ಹಾಗೆ ಕುಡಿದರು.
ಬದುಕಿಡೀ ಕನ್ನಡದ ಪ್ರೀತಿ, ಛಲ ತುಂಬಿಕೊಂಡು ಹೋರಾಡಿದ ಕಟ್ಟಾಳು ನೂರರ ಹೊಸ್ತಿಲಲಿ ಪುಟ್ಟ ಮಗುವಿನಂತೆ ಪಿಳಿಪಿಳಿ ನೋಡುತ್ತ ಕೂತಿದ್ದರು. ಕೇರಳ ಸರ್ಕಾರ ಹೇಗೆ ತಮ್ಮನ್ನು ದೂರ ಇಟ್ಟಿದೆ, ಕರ್ನಾಟಕ ಸರ್ಕಾರ ಕೂಡ ಹೇಗೆ ತಮ್ಮನ್ನು ಕಡೆಗಣಿಸಿದೆ, ತಾವು ಅತಂತ್ರರಾಗಿರುವ ಕುರಿತು ಅವರ ಮಗ ವಿವರಿಸಿದರು. ಅದಾಗಲೇ ಇಳಿ ಮದ್ಯಾಹ್ನ. ನನಗೆ ಮಂಗಳೂರಿಂದ ರಾತ್ರಿ ಬಸ್ಸು ಹಿಡಿದು ಊರಿಗೆ ಬರುವುದಿತ್ತು. ಬೀಳ್ಕೊಡುವ ಹೊತ್ತಿಗೆ ಮತ್ತೆ ಗೀತಾ ಬೊರ್ನವಿಟಾ ಮಾಡಿದ್ದರು. ಬೇಡ, ಬೇಢ ಅಂದರೂ ಕೇಳದೇ ಅವರ ಪುಸ್ತಕಗಳನ್ನು ಕೊಟ್ಟರು. ಹಳೆ ಪರಿಚಯದ ನೆಂಟರ ಮನೆಗೆ ಹೋಗಿ ಬಂದಷ್ಟು ಆತ್ಮೀಯ ನೆನಪುಗಳನ್ನು ಹೊತ್ತುಕೊಂಡು ಹೊರಟೆ. ಜೂನದಲ್ಲಿ ಅವರ ಹುಟ್ಟು ಹಬ್ಬ ಆಚರಿಸುತ್ತೇವೆ ಖಂಡಿತಾ ಬನ್ನಿ ಅಂದರು. ಏರು ದಾರಿಯಲ್ಲಿ ತಿರುತಿರುಗಿ ನೋಡುತ್ತಾ ಕೈ ಬೀಸುತ್ತಾ ಬಂದದ್ದು ಇನ್ನೂ ತಾಜಾ ನೆನಪಾಗಿ ಉಳಿದಿದೆ.

‍ಲೇಖಕರು G

11 August, 2015

1 Comment

  1. lakshmikanth itnal

    ಆಪ್ತತೆಯೇ ಸೂಸುವ ಬರಹ,. ತಮ್ಮ ನೆನಪುಗಳು ಅದೆಷ್ಟು ಪ್ರಾಮಾಣಿಕ. ತಾವು ಅವರ ಹಳೆಯ ಮನೆಯನ್ನು ನೋಡುತ್ತೇನೆಂದ ಕೂಡಲೇ ತಮ್ಮ ಆತ್ಮದರಿವು ನನಗೂ ಆಯಿತು. ಅದು ನನಗೂ ಮೆಚ್ಚುಗೆ. ಹೌದು, ಅದು ಅವರು ಕಳೆದ ಗಳಿಗೆಗಳ ಮೆಲುಕುಗಳ ಗೂಡು. ಕಿತನೇ ದಾಸ್ತಾಂ ಪಡೇಂ ಹೈಂ ವಹಾಂ.. ..ಕಿಂಐಣ್ನ ಅವರ ಹೆಸರು ಕನ್ನಡವಿರುವವರೆಗೂ ಜೀವದಿಂದಿರುವ ಹೆಸರು. …ವಂದನೆಗಳು ಪ್ರಜ್ಞಾಂ ಜಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading