ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರಣ್ಯದ ರಾಜಾನೆ

guhanew.jpgkdoll.jpgರಾಮಚಂದ್ರ ಗುಹಾ 

ಬೆಕ್ಕಿಗೆ ಒಂಭತ್ತು ಜೀವ ಎನ್ನುತ್ತಾರೆ. ವಿಷ್ಣುವಿಗೆ ಹತ್ತು ಅವತಾರಗಳು. ಆದರೆ ಶಿವರಾಮ ಕಾರಂತರಿಗೋ ಹದಿನಾರು ಕ್ಷೇತ್ರಗಳು. ರಾಷ್ಟ್ರೀಯತೆ, ಸಮಾಜ ಸುಧಾರಣೆ, ವಾಣಿಜ್ಯ, ಪತ್ರಿಕೋದ್ಯಮ, ಛಾಯಾಗ್ರಹಣ, ಅಭಿನಯ, ನೃತ್ಯ, ಚಿತ್ರಕಲೆ, ಸಂಗೀತ, ಸಿನೆಮಾ, ಶಿಕ್ಷಣದಲ್ಲಿನ ಪ್ರಯೋಗ, ಗ್ರಾಮೀಣ ಅಭ್ಯುದಯ, ವಿಜ್ಞಾನ ಪ್ರಸಾರ, ಕಾದಂಬರಿ, ನಾಟಕ ರಚನೆ ಮತ್ತು ಪರಿಸರವಾದ.

    *

ಶಿವರಾಮ ಕಾರಂತರು ಡಿಗ್ರಿ ಪಡೆದವರಲ್ಲ. ಆದರೆ ಅವರು ಏರಿದ ಎತ್ತರ ಮತ್ತು ಸಾಹಿತ್ಯ ಸಾಧನೆ ಎಂಟು ವಿಶ್ವವಿದ್ಯಾನಿಲಯಗಳನ್ನು ನಾಚಿಸಿತು. ಎಂಟು ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿದವು.

                                                     * 

ಕಾರಂತರ ಕೆಲವು ಅಭಿಮಾನಿಗಳು ಅವರನ್ನು ಕಡಲ ತೀರದ ಭಾರ್ಗವ ಎಂದು ಕರೆಯಲು ಇಷ್ಟಪಡುತ್ತಾರೆ. ಮೂಲತಃ ಇದು ಬ್ರಾಹ್ಮಣ ರೀತಿಯ ಬದುಕನ್ನು ಎತ್ತಿ ಹಿಡಿದ ಪರಶುರಾಮನಿಗೆ ಕೊಟ್ಟ ಹೆಸರು. ಇದಕ್ಕಿಂತ ನಾನು, ಶಾರದ ಪ್ರಸಾದ್ ಅವರು ಬಣ್ಣಿಸಿದಂತೆ “ದಕ್ಷಿಣ ಅರಣ್ಯದ ರಾಜಾನೆ” ಎಂದೇ ಕರೆಯಲು ಇಷ್ಟಪಡುತ್ತೇನೆ. ತಮ್ಮ ಸಾಧನೆಯ ಮೂಲಕ ಕಾರಂತರು ಇಡೀ ಆವರಣವನ್ನು ರಾಜಾನೆಯಂತೆ ಆವರಿಸಿಕೊಂಡರು. ರಾಜಾನೆಯಂತೆಯೇ ತಮಗಿಷ್ಟ ಬಂದಂತೆ ನಡೆದರು. ಅಷ್ಟೇ ಅಲ್ಲ, ರಾಜಾನೆಯಂತೆಯೇ ಆಗೀಗ ರೊಚ್ಚಿಗೇಳುತ್ತಿದ್ದರು.

‍ಲೇಖಕರು avadhi

14 July, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading