
-ಮರಕಿಣಿ ನಾರಾಯಣ ಮೂರ್ತಿ
ಪುತ್ತೂರಿನ ಕಾಡಿನೊಳಗೆ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’.
ಕಾರ್ಕಳದ ಯಕ್ಷರಂಗಾಯಣದ ತಿರುಗಾಟದ ಪ್ರದರ್ಶನ, ವೆಂಕಟರಮಣ ಐತಾಳರ ಸಮರ್ಥ ನಿರ್ದೇಶನದಲ್ಲಿ ಚೆನ್ನಾಗಿ ಅಭಿನಯಿಸಿದರು.
ಸಿಂಗಾರಿ, ಖಾವಿಂದ…
ಎರಡು ಹಾಡುಗಳು ಮೆಲುಕು ಹಾಕುವಂತಿತ್ತು. ಗೀತದ ಬಗ್ಗೆ ಎರಡು ಮಾತಿಲ್ಲ. ಸಿಂಗಾರಿಯು ಹಾಡು ನರ್ತನಗಳಿಂದ ಖಾವಿಂದರ ಮನಸ್ಸನ್ನು ಮುದಗೊಳಿಸುವ ಸಂದರ್ಭದಲ್ಲಿ ಹಿನ್ನೆಲೆಯಲ್ಲಿನ ಪರದೆ ಚಲಿಸುತ್ತಿರುವ ಕಲ್ಪನೆ,(ಹೆಬ್ಬಾರರ ರೇಖೆಗಳನ್ನು ನೆನಪಿಸಿತು) ಆ ಹಾಡು ತುಂಬಾ ಇಷ್ಟವಾಯಿತು.

ನಾನು ದೈಹಿಕವಾಗಿ ಯಾರನ್ನೂ ಬಯಸದೆ, ಮಾನಸಿಕವಾಗಿ ನನ್ನ ಭಾವನೆಗಳನ್ನು ಹೊರಹಾಕುತ್ತಿರುವುದು ಎಂದು ಹೇಳುತ್ತಾ ಖಾವಿಂದರೊಂದಿಗೆ ತನ್ನ ಅಂತರಂಗವನ್ನು ಸಮರ್ಥವಾಗಿ ತೋಡಿಕೊಂಡ ಸಿಂಗಾರಿ…
ರಘುವಣ್ಣನ ಪ್ರಾಸ್ತಾವಿಕವಾದ ಎರಡು ಮಾತುಗಳು, ನಾಟಕದ ಬಗ್ಗೆ ತಂಡದ ಸದಸ್ಯರೊಬ್ಬರಿಂದ ಪರಿಚಯಾತ್ಮಕ ಮಾತುಗಳು ಸಮಯೋಚಿತವಾಗಿತ್ತು.
ಎಂದಿನಂತೆ ಊಟ. ಹಲಸಿನಕಾಯಿ(ಗುಜ್ಜೆ) ಸಾಂಬಾರು ವಿಶೇಷ.
‘ಎಮ್ಮ ಮನೆಯಂಗಳದಿ ಬೆಳೆದೊಂದು’ ಅಲ್ಲ ಕೆಲವು ಹಲಸನ್ನು… ಅಂತ ವಿಸೀಯವರ ಸಾಲುಗಳನ್ನು ವಿರೂಪಗೊಳಿಸುತ್ತಿದ್ದೇನೆ (ತಮ್ಮ ಮನೆಯಂಗಳದ ಮರದಿಂದ ಅಂತ ರಘುವಣ್ಣ ಹೇಳಿದರು)






0 Comments