ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವನ ಸಂಕಲನದ ಮೊದಲ ಪ್ರತಿ ಕೈ ಸೇರಿತು.

ಅಳಿಸಲಾಗದ ಲಿಪಿಯನ್ನು ಬರೆಯಬಾರದು ಎಂದಿದ್ದಾನೆ ಅಲ್ಲಮಪ್ರಭು. ಅದೇಕೆ ನೆನಪಾಯ್ತೋ ಗೊತ್ತಿಲ್ಲ. ಇವತ್ತು ಸಂಜೆ ನನ್ನ ಕವನ ಸಂಕಲನದ ಮೊದಲ ಪ್ರತಿ ನನ್ನ ಕೈ ಸೇರಿತು. ಇಂಟರ್ ನೆಟ್, ಟ್ವೀಟರ್,ಫೇಸ್ ಬುಕ್, ಆಕು೯ಟ್ ಮುಂತಾದ ಮಣ್ಣು ಮಸಿ ತಂತ್ರಜ್ಞಾನದಲ್ಲಿ ಏನೆಲ್ಲಾ ಓದಿದರೂ ಕೈಯಲ್ಲಿ ಹಿಡಿದು ಪುಸ್ತಕ ನೋಡುವುದೇ ಬೇರೆ ರೀತಿಯ ಖುಷಿ. ಆ ಅಕ್ಷರ, ಆ ಕಲಾವಿದ ಬಿಡಿಸಿದ ರೇಖೆಗಳು, ಆ ಪುಸ್ತಕದ ಗಮಲ ವಾಸನೆಯ ಮಜವೇ ಬೇರೆ. ಇನ್ನೇನು ಪುಸ್ತಕ ಬಂದೇ ಬಿಡುತ್ತೆ ಅಂದುಕೊಂಡರೂ 5 ತಿಂಗಳೇ ಕಳೆದು ಹೋಯಿತು. ಅಂದ ಹಾಗೆ ಫೆಬ್ರವರಿ 20 ಕ್ಕೆ ಬೆಂಗಳೂರಿನಲ್ಲಿ ನಂದೂ ಸೇರಿದಂತೆ 3 ಲೇಖಕರ ಪುಸ್ತಕ ಬಿಡುಗಡೆಯಾಗಲಿದೆ. ಇದು ಹೊರೆತುಪಡಿಸಿದರೆ ಒಂದಷ್ಟು ಸಾಂಸ್ಕೖತಿಕ ಬರೆಹಗಳಿವೆ. ಕಥೆಗಳೂ ಇವೆ. ಎಲ್ಲವೂ ಒಟ್ಟಾಗಿ ಬರಲಿದೆ. ಉಗಮ ಶ್ರೀನಿವಾಸ್ ]]>

‍ಲೇಖಕರು G

1 February, 2012

1 Comment

  1. armanikanth

    shubhavaagali sir.february 20 randu bheti aagona haagaadre…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading