ಕರ್ನಾಟಕ ಲೇಖಕಿಯರ ಸಂಘಕ್ಕೆ ಸೆ.18ರಂದು ಚುನಾವಣೆ ನಡೆದು ಕವಯತ್ರಿ ಎಚ್.ಎಲ್.ಪುಷ್ಪಾ ಅವರು 62 ಮತಗಳಿಂದ ವಿಜೇತರಾಗಿದ್ದು, ಇಂದು ಅಂದರೆ ಅಕ್ಟೋಬರ್ 6, 2022ರಂದು ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀಮತಿ ವನಮಾಲ ಸಂಪನ್ನ ಕುಮಾರ ಅವರು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ ಲೇಖಕಿಯರ ಸಂಘದ ಕಚೇರಿಯಲ್ಲಿ ಸಂಘದ ಜವಾಬ್ದಾರಿಯನ್ನು ಪುಷ್ಪಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಿಂದಿನ ಅಧ್ಯಕ್ಷರಾಗಿದ್ದ ಡಾ.ವಸುಂಧರಾ ಭೂಪತಿ, ಸಂಧ್ಯಾರೆಡ್ಡಿ, ಹಿರಿಯ ಕವಯತ್ರಿಯರಾದ ಪ್ರತಿಭಾ ನಂದಕುಮಾರ್, ಡಾ.ಕೆ.ಷರೀಫಾ, ಭಾರತಿ ಹೆಗಡೆ ಮತ್ತಿತರರು ಹಾಜರಿದ್ದು ಪುಷ್ಪಾ ಅವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಪುಷ್ಪಾ ಅವರು ಮಾತನಾಡಿ ಕರ್ನಾಟಕ ಸಂಘಕ್ಕಾಗಿ ಸ್ವಂತ ನಿವೇಶನ ಹಾಗೂ ಸ್ವತಂತ್ರವಾದ ಕಟ್ಟಡ, ಸಭಾಂಗಣ ನಿರ್ಮಾಣದ ಕನಸು ನನ್ನದಾಗಿದೆ.
ಈ ಹಿಂದಿನ ಅಧ್ಯಕ್ಷರು ರೂಪಿಸಿರುವ ಈಗಲೂ ಅಗತ್ಯವಿರುವ ಕೆಲವು ಮಹತ್ವದ ಯೋಜನೆಗಳನ್ನು ಮುಂದುವರೆಸುವ ಚಿಂತನೆಯಿದೆ ಎಂದರು.











0 Comments