ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಒಳ್ಳೆಯ ಪತ್ರಿಕೆಗಳು, ನಿಯತಕಾಲಿಕಗಳು ಮುಚ್ಚುತ್ತಿವೆ. ಪುಸ್ತಕದ ಅಂಗಡಿಗಳು ಬಾಗಿಲು ಹಾಕುತ್ತಿವೆ.ಅಂದು ಬೆಂಗಳೂರಿನ ಪ್ರಿಮಿಯರ್ ಬುಕ್ ಹೌಸ್. ನಾಚಿಕೊಳ್ಳುವುದನ್ನು ಬಿಟ್ಟು ನಾವೇನು ಮಾಡಬಲ್ಲೆವು?
ಶ್ರೀ ಅಶೋಕವರ್ಧನ ಅವರು ನಾನು ನೋಡಿರುವ ಅತ್ಯಂತ ತತ್ವನಿಷ್ಠ, ಪ್ರಾಮಾಣಿಕ ವ್ಯಕ್ತಿಗಳಲ್ಲಿ ಒಬ್ಬರು. ಪುಸ್ತಕವ್ಯಾಪಾರಿಯಾಗಿ ಮಾತ್ರವಲ್ಲ, ಮನುಷ್ಯರಾಗಿ ಕೂಡ. ಅನಿಸಿದ್ದನ್ನು ಹೇಳುವ ಅವರ ಧೈರ್ಯ ಅಪರೂಪದ್ದು. ಅವರ ವಿಷಾದ ಮತ್ತು ಕೋಪ ನಮ್ಮೆಲ್ಲರದೂ ಆಗಬೇಕು. ಆಗುವುದಿಲ್ಲ.
ಅವರ ಮುಂದಿನ ಬಾಳು ಚಂದವಾಗುವುದೆಂದು ನನಗೆ ಗೊತ್ತು. ಖಾಲಿಯಾಗುವುದು ಅವರಲ್ಲ, ಮಂಗಳೂರು.
-ಎಚ್ ಎಸ್ ರಾಘವೇಂದ್ರ ರಾವ್
]]>
ಕರ್ನಾಟಕಕ್ಕೆ ಇದು ಕೆಟ್ಟ ಕಾಲ..
ನಿಮಗೆ ಇವೂ ಇಷ್ಟವಾಗಬಹುದು…





ಒಳ್ಳೆಯದು ಉಳಿಯದಿದ್ದರೆ ನಮಗೆ ಉಳಿಗಾಲವಿಲ್ಲ. ಈ ತರಹದ ಬೆಳವಣಿಗೆಗಳು ಸಾಹಿತ್ಯಕ್ಕೆ ಮಾರಕ. ಈಗಾಗಲೇ ಪುಸ್ತಕ ಪ್ರಕಟಣೆ ದೊಡ್ಡ ಧಂದೆಯಾಗಿ, ರಾಶಿ ರಾಶಿಯಾಗಿ ಬೀಳುತ್ತ ಒಳ್ಳೆಯ ಪುಸ್ತಕಗಳೂ, ಒಳ್ಳೆಯ ಪ್ರಕಾಶಕರೂ, ಉತ್ತಮ ಅಭಿರುಚಿಯ ಪುಸ್ತಕದ ಅಂಗಡಿಯವರೂ ಕಾಣೆಯಾಗುತ್ತಿದ್ದಾರೆ.
ಮಂಗಳೂರಿನ ಅತ್ರಿ ಪುಸ್ತಕ ಮಳಿಗೆ ಬಗೆಗೂ ಇದೇ ಅಭಿಪ್ರಾಯ ಬಂದಿತ್ತು.
ಲೇಖನ ಬರೆದ ಜಾಗೃತಿಗೆ ಕಾರಣರಾದ ಗುರುಗಳಿಗೆ ಧನ್ಯವಾದಗಳು.
ಇಂದ್ರಕುಮಾರ್ ಎಚ್.ಬಿ.
ದಾವಣಗೆರೆ 9986465530