ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರೇಗೌಡ ದಂಪತಿಗಳ ಕಥೆ ಕೇಳಿ

ಕೃಷಿ ಮಾಧ್ಯಮ ಕೇಂದ್ರದ ಹೊಸ ಪುಸ್ತಕ ‘ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕು: ಕರೇಗೌಡ ದಂಪತಿಯ ಸೂತ್ರ’ ಹಾಸನ ಸಮೀಪದ ಪುಣ್ಯಭೂಮಿ ಸಂಸ್ಥೆಯಲ್ಲಿ ಆಯೋಜಿಸಲಾಗಿರುವ ‘ಜೈವಿಕ ಮೇಳ’ದಲ್ಲಿ (ಜನವರಿ 30 ಹಾಗೂ 31ರಂದು) ಬಿಡುಗಡೆಯಾಗಲಿದೆ. ಕಾಮ್ ಫೆಲೋ ಪೂರ್ಣಿಮಾ ತೀರ್ಥಮಲ್ಲೇಶ್ ಅವರು ಬರೆದಿರುವ ಈ ಪುಸ್ತಕ ಸಕಲೇಶಪುರ ತಾಲೂಕಿನ ಕೊಂತನಮನೆಯ ಕರೇಗೌಡ-ಯಶೋದ ದಂಪತಿಯ ಪರಿಸರಸ್ನೇಹಿ ಒಕ್ಕಲುತನದ ಮೇಲೆ ಬೆಳಕುಚೆಲ್ಲುತ್ತದೆ. ಕಳೆದ ಒಂದೂವರೆ ದಶಕದಿಂದ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಪರಿಸರಸ್ನೇಹಿ ಒಕ್ಕಲುತನ ಮಾಡುತ್ತಿರುವ ಈ ದಂಪತಿ ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕನ್ನು ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡವರು. ಆಹಾರ ಭದ್ರತೆಗೆ ಭತ್ತ-ತರಕಾರಿಗಳು, ಆರ್ಥಿಕ ಮುನ್ನಡೆಗೆ ಕಾಫಿ-ಏಲಕ್ಕಿ ವಾಣಿಜ್ಯ ಬೆಳೆಗಳು, ಇವುಗಳ ನಡುವೆ ಸ್ವಂತ ದುಡಿಮೆ ಇವರ ವ್ಯವಸಾಯ ಬದುಕನ್ನು ನೆಮ್ಮದಿಯ ಹಾದಿಯಲ್ಲಿ ಮುನ್ನಡೆಸುತ್ತಿವೆ. ಇದು ರಾಸಾಯನಿಕರಹಿತ ಕೃಷಿಕ್ಷೇತ್ರದಲ್ಲಿನ ಮೌನಸಾಧಕರ ಅನುಭವಗಳಿಗೆ ಕನ್ನಡಿ ಹಿಡಿಯುವ ಕೇಂದ್ರದ ಪ್ರಯತ್ನದಲ್ಲಿ ಐದನೇ ಪುಸ್ತಕ.    ]]>

‍ಲೇಖಕರು G

23 January, 2011

2 Comments

  1. bhadravathi

    ಶೀರ್ಷಿಕೆ ನೋಡಿ ದೊಡ್ಡ ಅಕಥೆ ಇರಬಹುದು ಎಂದು ಇಣುಕಿದಾಗ ಪುಸ್ತಕದ ಪರಿಚಯ. ನಾನಿರುವ ಸ್ಥಳದಲ್ಲಿ (ಸೌದಿ ಅರೇಬಿಯಾ) ಸಿಗದು, ಭಾರತಕ್ಕೆ ಬಂದಾಗ ಕೊಳ್ಳಬೇಕು. ಕೃಷಿ ಬದುಕು ಒಂದು ಸಾರ್ಥಕ ಬದುಕೇ ಸರಿ, ಅದರ ಮೇಲೆ ಅತಿಯಾಸೆಗೆ ಬೀಳದೆ ಸಾವಯವ ಕೃಷಿ ನಡೆಸುವವರಂತೂ ಧನ್ಯರು, ಪ್ರಶಂಸಾರ್ಹರು. ಇವರು ಬೆಳೆದ ಫಸಲಿಗೆ ಸ್ವಲ್ಪ ಬೆಲೆ ಹೆಚ್ಚಾದರೂ ಹೆಚ್ಚು ಚೌಕಾಸಿ ಮಾಡದೆ ಕೊಂಡು ಕೊಳ್ಳುವ ಮೂಲಕ ಈ ರೀತಿಯ ಕೃಷಿಗೆ ಪ್ರೋತ್ಸಾಹ ನೀಡಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading