ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಮತ್ತು ತೆಲಂಗಾಣ

ಕನ್ನಡಗಳ ಮತ್ತು ತೆಲಂಗಾಣದ ಸಮಸ್ಯೆ, ಏಕೀಕರಣ ಇತ್ಯಾದಿ

ಸುರೇಶ್ ನಾಗಲಮಡಿಕೆ

ಒಂದು ಭಾಷೆಯನ್ನು ಮಾತನಾಡುವ ಜನರ ಸಮಸ್ಯೆಗಳು ಹಾಗೂ ಆ ಭಾಷೆಯ ಸಮಸ್ಯೆಗಳನ್ನು ಬೇರೆ ಬೇರೆಯಾಗಿ ನೋಡಬೇಕೇ? ಅಥವಾ ಒಂದಾಗಿ ನೋಡಬೇಕೆ. ಬರೀ ಭಾಷೆಯ ಅಭಿವೃದ್ದಿಯನ್ನು ಮಾತ್ರ ಗಮನಿಸಿದರೆ ರಾಜಕೀಯ, ಸಾಮಾಜಿಕ, ಆಥರ್ಿಕ ಸಮಸ್ಯೆಗಳನ್ನು ಅಲ್ಲಗಳೆದಂತೆ ಆಗುವುದಿಲ್ಲವೇ? ಎಂಬ ಪ್ರಶ್ನೆಯೂ ಮೂಡುತ್ತದೆ. ಈ ಬಗೆಯ ಪ್ರಶ್ನೆಗಳು ಹೊಸವಲ್ಲ. ಆಯಾ ಸಂದರ್ಭದಲ್ಲಿ ತಕ್ಕ ಉತ್ತರಗಳನ್ನು ಅಯಾ ಭಾಷಾತಜ್ಞರು ಕಂಡುಕೊಂಡು ಬರುತ್ತಿದ್ದಾರೆ, ಭಾರತಕ್ಕೆ ಸ್ವತಂತ್ರ ದೊರೆತ ಮೇಲೆ ಸಮಸ್ಯೆ ಉಧ್ಬವಿಸಿದ್ದು ರಾಜ್ಯಗಳ ಏಕೀಕರಣದ್ದು. ಅಲ್ಲಿಯೂ ಕೂಡಾ ಭಾಷೆಯನ್ನು ಗುರಿಯಾಗಿಸಿಕೊಂಡು ವಿಂಗಡಣೆ ಮಾಡಲಾಯಿತು.
ಆದರೆ ತೆಲಂಗಾಣದ ಸಮಸ್ಯೆ ನೋಡುತ್ತಿದ್ದರೆ ಈ ನಿಯಮವು ಪಕ್ಕಕ್ಕೆ ಜಾರುತ್ತಿದೆ. ರಾಜಕೀಯ ಮತ್ತು ಸಂವಿಧಾನಗಳ ಸೂಚನೆ ಒಂದು ಪ್ರದೇಶಕ್ಕೆ ಯಾವ ಬಗೆಯಲ್ಲಿ ಅನುಕೂಲವಾಗಬಲ್ಲವು ಎಂಬುದನ್ನು ಗಮನಿಸಬೇಕಾಗುತ್ತದೆ. ಬಹುಶ: ಕನ್ನಡದಲ್ಲಿ ಈ ಬಗೆಯ ಸಮಸ್ಯೆಗಳನ್ನು ಮೊದಲು ಎದುರಿಸಿದವನು ಕವಿರಾಜಮಾರ್ಗಕಾರ. ಸಾಮ್ರಾಜ್ಯ ವಿಸ್ತರಣೆಯ ಕುರಿತು ಭಾಷೆ ಮತ್ತು ರಾಜಕಾರಣವನ್ನು ಪ್ರಭುಧ್ಧವಾಗಿ ಆಲೋಚಿಸಿದವನು ಶ್ರೀವಿಜಯ. ಕೆ. ವಿ ಸುಬ್ಬಣ್ಣ ಅವರು ಏಕೀಕರಣದ ಚಿಂತನ ಕ್ರಮವು ನಮುಲ್ಲಿ ಅಪ್ರಜ್ಞಪೂರ್ವಕವಾಗಿ ನಡೆದಿದ್ದು ಅದು ನೃಪತುಂಗನ ಕಾಲದಿಂದಲೇ ಪ್ರಾರಂಭವಾಯಿತು ಎನ್ನುತ್ತಾರೆ.

ನೃಪತುಂಗನ ಕಾಲದಲ್ಲಿ ಈ ಸಾಮ್ರಾಜ್ಯ ಪ್ರದೇಶ ರಾಜ್ಯ ಭಾಷಾರಾಜ್ಯಗಳ ಯುಗಕ್ಕೆ ಪರಿವರ್ತನೆಗೊಳ್ಳಲು ಮೊದಲಿಟ್ಟಿತು ಈ ಹೊಸ ಯುಗದ ಹರಿಕಾರನಾಗಬೇಕಾದ ನೃಪತುಂಗನು ಹಿಂದಿಗಿಂತ ತೀರಾ ಬೇರೆಯೇ ಆದ ರಾಜಕಾರಣದ ತಾತ್ವಿಕತೆ ಅನುಷ್ಠಾನ ಮಾರ್ಗಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಶ್ರೀ ವಿಜಯನ ಲಕ್ಷ್ಯವಿರುವುದು ಇಂಥ ಮೌಲಿಕ ಚಿಂತನ ಮತ್ತು ವಿವೇಕಗಳಲ್ಲಿ ಎಂದು ಹೇಳುತ್ತಾರೆ. ಏಕೀಕರಣ ಮತ್ತು ಕನ್ನಡಗಳ ಸಮಸ್ಯೆಗಳ ಕುರಿತು ಈಗಾಗಲೇ ಸಾಕಷ್ಟು ವಿಮರ್ಶಕರು ಚಾರಿತ್ರಿಕವಾಗಿಯೂ ಮತ್ತು ಭಾಷಿಕವಾಗಿಯೂ ಚಚರ್ೆ ಮಾಡಿದ್ದಾರೆ. ಕವಿರಾಜಮಾರ್ಗ ಕೃತಿಯು ಒಂದು ರೀತಿಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಗಂಭೀರ ದಾಖಲೆಗಳನ್ನು ಒದಗಿಸುತ್ತಾ ಬಂದಿರುವುದನ್ನು ಕಾಣುತ್ತೇವೆ. ಕನರ್ಾಟಕ ಏಕೀಕರಣಗೊಂಡು ಐವತ್ತು ವರ್ಷಗಳೇ ಕಳೆದರು ಬೇರೆ ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಬಂದಿವೆ. ಶಿಕ್ಷಣದ ವಲಯದಲ್ಲಿ ಇಂದಿಗೂ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ತರಲು ಸಾಧ್ಯವಾಗುತ್ತಿಲ್ಲ. ಭಾಷಾನೀತಿಯನ್ನು ಕುರಿತು ಸಾಕಷ್ಟು ಬಾರಿ ಮಾತಾಡಿದ್ದೇವೆ. ಜನಪದರ ಭಾಷೆಗಳನ್ನು ನಿರ್ಲಕ್ಷ್ಯೆಗೆ ಗುರಿ ಮಾಡುತ್ತಾ ಬರುತ್ತಿದ್ದೇವೆ. ಎಲ್ಲಾ ರಾಜ್ಯಗಳ ಜನ ಭಾಷೆಗಳು ಬೇರೊಂದು ಪ್ರಭುತ್ವ ಭಾಷೆಗಳೊಂದಿಗೆ ಗುದ್ದಾಡುತ್ತಲೇ ಬರುತ್ತಿವೆ.
ಆಶ್ಚರ್ಯವೆಂದರೆ ಮಧ್ಯಕಾಲೀನ ಸಾಹಿತ್ಯದ ತನಕ ಕನ್ನಡ ಬಾಷೆ ಎದುರಿಸಿದ ಸಮಸ್ಯೆಗಳು ಕಡಿಮೆ ಎನಿಸುವುದಿಲ್ಲವೆ. ? ನಮಗೆ ಕುಮಾರವ್ಯಾಸ, ವಚನಕಾರರು, ದಾಸರು ಬಳಸಿದ ಭಾಷೆ ಕಷ್ಟವಾಗುತ್ತಿಲ್ಲ. ಪಂಪ ರನ್ನರು ಬಳಸಿದ ಬಾಷೆ ಸಾಮಾಜಿಕವಾಗಿತ್ತೆ ಎಂಬುದು ಬೇರೆ ಪ್ರಶ್ನೆ. ಆದರೆ ವಚನಕಾರರು ಮತ್ತು ದಾಸರು ಜನರ ಮಧ್ಯೆ ಇರುವ ಭಾಷೆಯನ್ನು ಸ್ವೀಕರಿಸಿದರು. ಹಾಗೆ ನೋಡಿದರೆ ಕನ್ನಡ ಭಾಷೆ ಮಧ್ಯಕಾಲೀನ ಸಂದರ್ಭದಲ್ಲಿ ಅಧಿಕಾರದ ಭಾಷೆಯಾಗಿ ರೂಪುಗೊಂಡಿರಬೇಕು. ಬ್ರಿಟಿಷರು ಮಧ್ಯಕಾಲದ ಕೊನೆಯ ಭಾಗದಲ್ಲಿ ಬಂದರೂ ಕನ್ನಡವನ್ನು ಅವರು ಸ್ವೀಕರಿಸಿದ ಬಗೆ ಬೇರೆಯೆಲ್ಲವೇ, ಈ ಹಿನ್ನೆಲೆಯಲ್ಲಿ ಕೆ.ವಿ ನಾರಯಣ ಅವರು ಐವತ್ತು ವರ್ಷಗಳ ಏಕೀಕರಣದ ಅವಧಿಯಲ್ಲಿ ನಾವು ಎರಡು ಘಟ್ಟಗಳಲ್ಲಿ ಗಮನಿಸಬೇಕು. 1956 ರಿಂದ 81 ರ ವರೆಗೆ ಮೊದಲ ಘಟ್ಟ ಅನಂತರದ ಅವಧಿ ಎರಡನೇ ಘಟ್ಟ. ಮೊದಲ ಘಟ್ಟದಲ್ಲಿ ಇಪ್ಪತ್ತೈದು ವರ್ಷಗಳು ಕಳೆದರೂ ಕನ್ನಡದ ಜನಮನವೂ ಆತಂಕದ ಗಳಿಗೆಗಳನ್ನು ಎದುರಿಸಿದ್ದು ಕಡಿಮೆ ಎಂದಿದ್ದಾರೆ.

ಅಂದರೆ ಏಕೀಕರಣದ ನಂತರ ಕನ್ನಡ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣಗಳೇನು ? ರಾಜಕೀಯವೇ ? ಜನಸಮುದಾಯಯೇ ? ಈ ಪ್ರಶ್ನೆ ಕೇವಲ ಕನರ್ಾಟಕದಲ್ಲಿ ಮಾತ್ರ ಉದ್ಭವಿಸಿಲ್ಲ. ದಕ್ಷಿಣದ ಬೇರೆ ರಾಜ್ಯಗಳಿಗೂ ಚಾಚಿಕೊಂಡಿದೆ. ಪ್ರಸ್ತುತ ಆಂದ್ರದ ತೆಲಂಗಾಣದ ಸಮಸ್ಯೆಯೇ ಚಾಲ್ತಿಯಲ್ಲಿದೆ. ಇಲ್ಲಿ ಬಹಳ ಮುಖ್ಯವಾದ ಅಂಶವೆಂದರೆ ಹೈದರಬಾದ್ ಕನರ್ಾಟಕವೆಂದು ಕರೆಸಿಕೊಳ್ಳುವ ಪ್ರದೇಶಗಳೆಲ್ಲವೂ ಇಂದಿಗೂ ಭಾಷೆಯ ಅಸ್ಥಿತ್ವಕ್ಕೆ ಹೋರಾಡುತ್ತಲೇ ಇವೆ. ಈ ಪ್ರದೇಶಗಳೆಲ್ಲವೂ ಅಭಿವೃದ್ದಿಯ ಪ್ರಶ್ನೆಯನ್ನು ಮತ್ತೆ ಮತ್ತೆ ಮುಂದಿಡುತ್ತವೆ. ಅರವತ್ತರ ದಶಕದಿಂದ ತೆಲಂಗಾಣದ ಪ್ರದೇಶಗಳು ಈ ವಿಚಾರಕ್ಕೆ ಕೂಗಾಡುತ್ತಿವೆ. ಈ ಪ್ರದೇಶಗಳೆಲ್ಲವೂ ಬಹುತೇಕ ನಿಜಾಮರು ರಜಾಕರರು ಆಳಿದ ಪ್ರದೇಶಗಳು. ಭಾರತಕ್ಕೆ ಸ್ವತಂತ್ರ ದಕ್ಕಿದ ಮೇಲೂ ಇವರು ಈ ಪ್ರದೇಶಗಳನ್ನು ಬಿಟ್ಟು ಕೊಟ್ಟಿರಲಿಲ್ಲ. ಮುಸ್ಲಿಂ ಜನಸಮುದಾಯಗಳೂ ಸೇರಿದಂತೆ ನಿಜಾಮರನ್ನು ರಜಾಕರರನ್ನು ವಿರೋಧಿಸಿದ್ದು ಚರಿತ್ರೆ ಪುಟಗಳಲ್ಲಿ ದಾಖಲಾಗಿವೆ. ಭಾಷಿಕವಾಗಿ ಉದರ್ು-ತೆಲುಗು, ಉದರ್ು-ಕನ್ನಡ ಸೋದರ ಭಾಷೆಗಳಾಗಿ ಇಲ್ಲಿ ಕೆಲಸ ಮಾಡಿವೆ. ನಮ್ಮ ಅನೇಕ ಪಠ್ಯಗಳು, ಚಲನಚಿತ್ರಗಳು ಇದಕ್ಕೆ ಸಾಕ್ಷಿಯಾಗಿವೆ.
ಆದರೆ ಪ್ರಶ್ನೆ ಇರುವುದು ನಿಜಾಮರ ಆಳ್ವಿಕೆಯನ್ನು ರದ್ದುಗೊಳಿಸಿದ ಸಕರ್ಾರಗಳು ತದನಂತರದಲ್ಲಿ ಈ ಪ್ರದೇಶಗಳನ್ನು ನಡೆಸಿಕೊಂಡ ಬಗೆ ಹೇಗೆ ? ಭಾಷಿಕವಾಗಿ ಮಾತ್ರ ನೋಡಿದರೆ ಸಾಕೆ ? ಜನಸಂಖ್ಯೆಯ ಬೇರೆ ಮಾರ್ಗಗಳಾದ ಅವರ ಬದುಕನ್ನು ಇವರು ಸರಿಯಾದ ರೀತಿಯಲ್ಲಿ ನೋಡಲಿಲ್ಲವೆ ? ಎಂಬುದು ಆಂಧ್ರದ ಜನತೆ ಮಾತ್ರವಲ್ಲದೇ ದಕ್ಷಿಣ ಭಾರತದ ಜನರು ನೆನೆಸಿಕೊಳ್ಳಬೇಕಾದ ಹೆಸರು ಪೊಟ್ಟಿ ಶ್ರೀ ರಾಮುಲು. ಏಕೀಕರಣದ ಸಂದರ್ಭದಲ್ಲಿ ಆಂಧ್ರಕ್ಕೆ ಇನ್ನಿಲ್ಲದ ಹಾಗೆ ಹೋರಾಟ ಮಾಡಿದರು ತೆಲಂಗಾಣದ ಹೋರಾಟದ ಬಿಸಿಯಲ್ಲಿ ಈತನನ್ನು ಮರೆತು ಚಚರ್ಿಸುತ್ತಿದ್ದೇವೆ. ಸಮೈಕ್ಯ ಆಂಧ್ರವನ್ನು ತರುವುದಕ್ಕೆ ಪೊಟ್ಟಿ ಶ್ರೀ ರಾಮುಲು ಸಾಕಷ್ಟು ಶ್ರಮಿಸಿದ್ದಾರೆ. ಅಂದು ಕೂಡಾ ತೆಲಂಗಾಣದ ಸಮಸ್ಯೆ ಇತ್ತು ಆದರೆ ಅವರು ನಿರ್ವಹಿಸಿದ ಬಗೆ ಬೇರೆಯಾದದು. 60 ರ ದಶಕದಲ್ಲಿ ತೆಲಂಗಾಣದ ಹೋರಾಟದ ಸ್ವರೂಪವನ್ನು 70 ರ ದಶಕದ ನಂತರದ ತೆಲಂಗಾಣ ಹೋರಾಟದ ಸ್ವರೂಪಕ್ಕೂ ನಾವು ಭಿನ್ನತೆಗಳನ್ನು ಗುರುತಿಸಬೇಕಾಗಿದೆ. ಕೇಂದ್ರ ಸಕರ್ಾರಗಳು ದಕ್ಷಿಣ ಭಾರತದ ವಿಚಾರ ಬಂದಾಗ ತಳೆಯುವ ಜಾಣ ತೀಮರ್ಾನಗಳೂ ನಮ್ಮ ಮುಂದಿವೆ.
60 ರ ದಶಕದ ತೆಲಂಗಾಣದ ಹೋರಾಟಗಳು ಅಭಿವೃದ್ಧಿಯ ಹಿನ್ನಲೆಯನ್ನು ಹೆಚ್ಚು ಬೆನ್ನಿಗಂಟಿಸಿಕೊಂಡಿದ್ದವು. 70 ರ ದಶಕದ ನಂತರದಲ್ಲಿ ಇಲ್ಲಿ ಹೆಚ್ಚು ಕೆಲಸ ಮಾಡಿದ್ದು ರಾಜಕಾರಣವೇ ಎನ್ನಬಹುದು, ಶ್ರೀ ಸಾಮಾನ್ಯನ ಹೆಜ್ಜೆಗುರುತುಗಳ ಚರಿತ್ರೆಯನ್ನು ಸಕರ್ಾರಗಳು ಗಂಭೀರವಾಗಿ ಸ್ವೀಕರಿಸಲಿಲ್ಲ ತೆಲಂಗಾಣ ಹೋರಾಟವೆಂದರೆ ಅದು ವಿಧ್ಯಾಥರ್ಿಗಳ ಪ್ರವೇಶವೇ ಅಧಿಕವಾಗಿತ್ತು. ತೆಲಂಗಾಣದ ಸಮಸ್ಯೆಗಳು ಸೀಮಾಂಧ್ರದಲ್ಲಿ ಇಲ್ಲವೇ ? ರಾಯಲ ಸೀಮೆಯ ಅನೇಕ ಜಿಲ್ಲೆಗಳು ಅಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿವೆ. ಸಮೈಕ್ಯ ಆಂಧ್ರದ ಬಗ್ಗೆ ಜವಾಬ್ದಾರಿಯಿಂದ ಮಾತನಾಡುವವರೆಲ್ಲಾ ಗಮನಿಸಬೇಕಾದ್ದು ಆ ಭಾಷೆಯ ಚರಿತ್ರೆಯು ಹೆಜ್ಜೆಗುರುತುಗಳನ್ನು, ಗುರುಜಾಚ, ಅರುದ್ರ ಮುಂತಾದವರು ಸಾಹಿತ್ಯದಲ್ಲಿ ಎನ್. ಟಿ ರಾಮರಾವ್ ರಂಥವರು ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ.
ಆಂಧ್ರ ಬೇರೆ ಬೇರೆಯಾಗುವುದರಿಂದ ರಾಜಕೀಯವಾಗಿ ಆಥರ್ಿಕವಾಗಿ ಲಾಭವಾಗಬಹುದೆಂದು ನಿಲುವು ಎಷ್ಟರಮಟ್ಟಿಗೆ ವಾಸ್ತವ. ಕೇಂದ್ರ ಸಕರ್ಾರದ ಈ ನಿಲುವಿನಿಂದ ದೇಶದ ಇತರ ರಾಜ್ಯಗಳಿಗೆ ನೀಡಿದ ಸಂದೇಶಗಳು ಯಾವುವು? ಎಂಬ ಪ್ರಶ್ನೆಗಳು ಉಧ್ಬವಿಸುತ್ತವೆ. ಪ್ರಾರಂಭದಲ್ಲಿ ಕ್ರೀಡೆಯಲ್ಲೂ ಕೂಡಾ ಈ ವಗರ್ೀಕರಣವನ್ನು ನೋಡಬಹುದು. ಆಂಧ್ರಪ್ರದೇಶದ ಕ್ರಿಕೆಟ್ ಕನರ್ಾಟಕದಂತೆ ಒಂದು ರಣಜಿ ತಂಡವಿಲ್ಲ. ಬದಲಾಗಿ ಅಲ್ಲಿ ಹೈದರಬಾದ್ ತಂಡ, ಆಂದ್ರ ತಂಡಗಳೆಂದು ಮಾಡಲಾಗಿದೆ ಇವೆಲ್ಲಾ ಅವರಲ್ಲಿ ಬಿತ್ತಿದ ತಾರತಮ್ಯಗಳೇ ಆಗಿವೆ. ಇಷ್ಟಕ್ಕೂ ಆಂಧ್ರ ವಿಭಜನೆಯಾಗಬರದೆಂಬ ನಿಲುವು ಶ್ರೀ ಸಾಮಾನ್ಯರಲ್ಲೇ ಹೆಚ್ಚಿನದಾಗಿದೆ. ಇದೇ ಶ್ರೀ ಸಾಮನ್ಯರ ಜೇಬುಗಳಿಂದ ಕೋಟಿಗಟ್ಟಲೆ ಸಂಪಾದಿಸುವ ಚಲನಚಿತ್ರ ನಟರು ಯಾಕೋ ಮೌನವಾಗಿದ್ದಾರೆ. ಇಬ್ಬಂದಿತನ ಇವರನ್ನು ಕಾಡುತ್ತಿದೆಯೇ ? ಅಥವಾ ಜಾಣ ಮೌನವೋ ತಿಳಿಯುತ್ತಿಲ್ಲ. ಈ ಬಗೆಯ ಸಮಸ್ಯೆಗಳು ನಮ್ಮಲ್ಲೂ ಇವೆ, ಹೈದರಬಾದ್ ಕನರ್ಾಟಕ ಈಗಲೂ ಅಭಿವೃದ್ದಿಗಾಗಿ ಒತ್ತಾಯಿಸುತ್ತಲೇ ಇದೆ. ಕೊಡಗು ಪ್ರೆತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇಡುತ್ತಲೇ ಬಂದಿದೆ. ಇದಲ್ಲದೆ ಕನರ್ಾಟಕದ ಬಹುಪಾಲು ಪ್ರದೇಶಗಳ ಜನರು ದ್ವಿಭಾಷಿಕರಾಗಿದ್ದಾರೆ. ಆದರೆ ಇವರ ಅಸ್ಥಿತ್ವ ಮತ್ತು ಅಭಿಮಾನದ ಬಗ್ಗೆ ಕೆಲವು ರಾಜಕೀಯ ಪಕ್ಷಗಳಿಗೆ ತೀವ್ರ ಅಸಮಧಾನ ಇದ್ದಂತಿದೆ.
ಕನ್ನಡ ಮಾತನಾಡುವ ಅನೇಕರು ಆಂಧ್ರ , ಮಹಾರಾಷ್ಟ್ರ ಕೇರಳ ರಾಜ್ಯಗಳಲ್ಲಿ ಇದ್ದಾರೆ ಭಾಷಾವಾರು ಪ್ರಾಂತ್ಯ ವಿಂಗಡಣೆ ಆದ ನಂತರ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇದನ್ನು ಅರಿತೇ ಲೋಹಿಯಾ ಅವರು 1966 ರಲ್ಲಿ ಅಂತ ಪ್ರದೇಶಗಳನ್ನು ದ್ವಿಭಾಷಾಪ್ರದೇಶಗಳೆಂದು ಘೋಷಣೆ ಮಾಡಬೇಕೆಂದು ಹೇಳಿದ್ದರು. ದುರಂತವೆಂದರೆ ಲೋಹಿಯಾರವರ ಮಾತುಗಳನ್ನು ನಮ್ಮ ಯಾವುದೇ ದಕ್ಷಿಣ ಭಾರತದ ಸಕರ್ಾರಗಳು ಗಂಭೀರವಾಗಿ ತೆಗೆದುಕೊಂಡಿಲ್ಲ. ಇಂದಿಗೂ ವಾರಕ್ಕೊಮ್ಮೆ ದಿನಪತ್ರಿಕೆಗಳಲ್ಲಿ ಬೇರೆ ರಾಜ್ಯಗಳ ಕನ್ನಡಿಗರು ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಉದಾ: ಆಂಧ್ರದ ಅನಂತಪುರ ಜಿಲ್ಲೆಯೊಂದರಲ್ಲೇ ಕನ್ನಡದ ಸುಮಾರು 40 ಪ್ರಾಥಮಿಕ, ಪ್ರೌಢಶಾಲೆಗಳು ಇರುವುದನ್ನು ಕಾಣಬಹುದು. ಹಾಗಾಗಿ ಯಾವುದೇ ಒಂದು ಭಾಷೆಯ ಹಿಂದೆ ಸಮುದಾಯ ಸಂಸ್ಕೃತಿ ಅಡಗಿರುವುದನ್ನು ರಾಜಕೀಯ ಶಕ್ತಿಗಳು ಕಂಡುಕೊಳ್ಳಬೇಕಾಗಿದೆ, ಭೌಗೋಳಿಕವಾಗಿ ಪ್ರದೇಶಗಳನ್ನು ಸೀಳುವುದರಲ್ಲಿ ಅರ್ಥವಿಲ್ಲ. ಅವರ ಮಾನಸಿಕ ಏಕೀಕರಣಕ್ಕಾಗಿ ದುಡಿಯಬೇಕಾಗಿದೆ.

‍ಲೇಖಕರು G

9 October, 2013

2 Comments

  1. Anonymous

    thumba chennagi bandide

  2. dr. purushothama

    sri nagalamadieke ravaru barediruva lekana thumba chennagidhe

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading