
ಕಿರಣ್ ಗಾಜನೂರು
ಕನಸಿನ ‘ಓದುಮನೆ’ ಇಂದಿನಿಂದ ಆರಂಭಗೊಂಡಿದೆ. ಹಳ್ಳಿ ಮಕ್ಕಳಿಗೆ ವಾರಕ್ಕೆ ನಾಲ್ಕು ದಿನ ಇಂಗ್ಲಿಷ್, ಗಣಿತ ತರಗತಿಗಳು, ಸಣ್ಣ ಸಣ್ಣ ಮಕ್ಕಳ ಗ್ರಹಿಕೆಗೆ ನಿಲುಕುವ ವಿಜ್ಞಾನದ ಸಾಕ್ಷ್ಯ ಚಿತ್ರಗಳು ತೋರಿಸುವ ಯೋಜನೆ ಇದೆ..
ಹಳ್ಳಿ ಆಸಕ್ತ ಜನರಿಗೆ ಬೆಳಿಗ್ಗೆ ೬ ರಿಂದ ಎಂಟರ ತನಕ ದಿನಪತ್ರಿಕೆ ಓದಲು ಅವಕಾಶ ಮತ್ತು ಇಲ್ಲಿ ಲಭ್ಯ ಪುಸ್ತಕಗಳನ್ನು ಒದಗಿಸುವ ಕೆಲಸ ಆರಂಭವಾಗಲಿದೆ..
ಸದ್ಯಕ್ಕೆ ಮಲೆಗಳಲ್ಲಿ ಮದುಮಗಳು, ಕರ್ವಾಲೋ, ವಿಸ್ಮಯ ವಿಶ್ವ ಪುಸ್ತಕಗಳು ಹೊರ ಹೋಗಿವೆ..
ಸಣ್ಣ ಪ್ರಯತ್ನ ನಡೆಯುತ್ತಿದೆ.. ನಮ್ಮ ಹೆಜ್ಜೆ ಹಳ್ಳಿ ಕಡೆಗೆ..







Wonderful Initiative , which needs to be implemented in each and every village.