ನಿನ್ನೆ ’ಅವಧಿ’ಯಲ್ಲಿ ಎಂ ಎಸ್ ಶ್ರೀರಾಂ ಬರೆದ ’ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ’ ಲೇಖನಕ್ಕೆ ಬಂದ ಮತ್ತೊಂದು ಪ್ರತಿಕ್ರಿಯೆ ಇಲ್ಲಿದೆ
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ
ಅಕ್ಕಿಮಂಗಲ ಮಂಜುನಾಥ
ಪ್ರಿಯ ಮಿತ್ರರೇ –
ಲೇಖನ ಓದಿದೆ. ಈ ಹಿಂದೆಯೂ ಒಂದು ರೂಪಾಯಿ ಅಕ್ಕಿಯ ಬಗ್ಗೆ ಹಲವಾರು ಬುದ್ಧಿ ಜೀವಿಗಳು ಹಲವಾರು ಲೇಖನಗಳನ್ನು ಪ್ರಕಟಿಸಿರುವುದನ್ನೂ ಕಂಡಿದ್ದೇನೆ.
ಏಕೋ ಕೋಟಿ ಗಟ್ಟಲೆ ನುಂಗಿ ನೀರು ಕುಡಿವವರ ಬಗ್ಗೆಯಾಗಲಿ , ದುಡಿಯದೆಯೇ ಪ್ರಪಂಚದೆಲ್ಲ ವೈಭೋಗಗಳನ್ನೂ ಸವಿಯುವವರ ಬಗ್ಗೆಯಾಗಲಿ ಚಕಾರವೆತ್ತದೆ,
ಎಲ್ಲರೂ ಪುಕ್ಕಟೆ ಅಕ್ಕಿ ತಿಂದು ಸೋಮಾರಿತನ ಬೆಳೆಸಿಕೊಂಡು ಬಿಡುತ್ತಾರೆಂಬ ದಾಟಿಯಲ್ಲಿಯೇ ವಿಮರ್ಶಿಸಿರುವುದನ್ನು ಕಂಡಿದ್ದೇನೆ.
ಇಂದಿನ ದುಬಾರಿ ಕಾಲದಲ್ಲಿ ನಾಲ್ಕಾರು ಕೆ.ಜಿ. ಅಕ್ಕಿಯನ್ನು ದುಡಿಯುವವನಿಗೆ ಕೊಟ್ಟರೆ ಅವನೇನೂ ಟಾ ಟಾ , ಬಿರ್ಲಾ ರಂತೆ ಕೊಬ್ಬಿ ಹೋಗಲಾರ.ಒಬ್ಬ ಸಿರಿವಂತನಾದವನು ಮನೆಯ ಹೊರಗಿರುವ ನಾಯಿಗೆ ಒಂದು ದಿನಕ್ಕೆ ಖರ್ಚು ಮಾಡುವಷ್ಟೂ ಸಹ ಬಡವನಾದವನು ತನ್ನ ಇಡೀ ಒಂದು ಸಂಸಾರಕ್ಕೆ ಖರ್ಚು ಮಾಡಲಾರ. ಹೆಚ್ಚೆಂದರೆ ತಿಂಗಳಿಗೆ ನೀಡುವ ಎಲ್ಲಾ ದಾಸ್ತಾನು ಸೇರಿದರೂ ಆ ಒಂದು ನಾಯಿಗೆ ಖರ್ಚಾಗುವುದಕ್ಕಿಂತಲೂ ಕಡಿಮೆಯೇ.
ಕೃಷಿಯಿಂದ ಬದುಕುವ ಜನಕ್ಕೆ ಬಡತನವೆಂಬುದು ಒಂದು ಬಗೆಹರಿಯದ ಜಾಢ್ಯದಂತೆಯೇ ಆವರಿಸಿಕೊಂಡು ಬಿಟ್ಟಿದೆ.
ಅವರ ಜೀವನ ಕೇವಲ ಬೇಸಾಯವನ್ನು ಅವಲಂಬಿಸಿರುವ ಕಾರಣವೋ, ಸದಾ ತುಳಿಯುತ್ತಲೇ ಮೇಲೇರುತ್ತಿರುವ ಸ್ವಹಿತಾಸಕ್ತಿಗಳ ವಿರುದ್ಧ ಹೋರಾಡಲು ಅಸಮರ್ಥನಾದ ಕಾರಣವೋ ಅಥವಾ ಸಮಾಜದ ಜುಟ್ಟನ್ನು ಬಿಗಿಯಾಗಿ ಹಿಡಿದುಕೊಂಡು ಆಡಿಸುತ್ತಿರುವ ಅಧಿಕಾರಿ ವರ್ಗದ ದುರಾವರ್ತನೆಗಳೇ ಕಾರಣವೋ .ಅಂತೂ ಯಾವುದೊಂದೂ ಅರ್ಥವಾಗದ ಆತ, ಬಡತನ ರೇಖೆಗಿಂಥ ಮೇಲೇಳಲು ಸಾಧ್ಯವೇ ಇಲ್ಲವೇನೋ ಎಂಬ ಮಟ್ಟಿಗೆ ಪಾತಾಳ ತಲುಪಿ ಬಿಟ್ಟಿದ್ದಾನೆಂದರೆ ಎಂಥವರಿಗೂ ಆಶ್ಚರ್ಯವಾಗದೆ ಇರದು. ಲೋಕದ ಜನಕ್ಕೆ ಇವರನ್ನು ತಮ್ಮ ಸಮಕ್ಕೆ ನೋಡುವ ಮತ್ತು ಸೇರಿಸಿಕೊಳ್ಳುವ ದೃಷ್ಟಿಕೋನವೇ ಇಲ್ಲವೇನೋ !

ಇಪ್ಪತ್ತೊಂದನೆ ಶತಮಾನದ ಈ ದಿನ ಮಾನದಲ್ಲಿ ಇಷ್ಟೊಂದು ಮುಂದುವರೆದ ಈ ವಿಜ್ಞಾನದ ಯುಗದಲ್ಲಿ ಅನ್ನ ಬೆಳೆಯುವ ವ್ಯಕ್ತಿ ಹಸಿವೆಗೆ ಅಳುತ್ತಾನೆಂದರೆ, ರೋಗ ರುಜಿನಗಳಿಂದ ನರಳುತ್ತಾನೆಂದರೆ , ತೊಡಲು ಬಟ್ಟೆಗೆ ಪರದಾಡುತ್ತಾನೆಂದರೆ , ಸರಿಯಾದ ವಸತಿಯಿಲ್ಲದೆ ಮಳೆಗೆ ಚಳಿಗೆ ಬಿಸಿಲಿಗೆ ದೇಹವೊಡ್ಡಿ ಬೇಯುತ್ತಾನೆಂದರೆ
ನಮ್ಮ ಸಮಾಜ ಅದೆಷ್ಟು ಅಧೋಗತಿಗಿಳಿದಿದೆಯೆಂದು ಪ್ರತಿಯೊಬ್ಬರೂ ಯೋಚಿಸ ಬೇಕಾದ ವಿಚಾರ.
ಈ ವಿಜ್ಞಾನೀಕರಣ ಕೆಲಸಕ್ಕೆ ಬಾರದ ದೂಳಿಗೇ ಸಮ ಎಂದೆನಿಸದೆ ಇರದು.
ಬಿಸಿಲು ಮಳೆ ಚಳಿ ಗಾಳಿ ದೂಳೆನ್ನದೆ ದಿನವೆಲ್ಲಾ ದುಡಿದು ಸಾಕುತ್ತಿರುವ ಇವರ ಬಗ್ಗೆ -ಇಷ್ಟು ಕರುಣೆ, ಇಷ್ಟು ಕನಿಕರ, ಇಷ್ಟು ಕಾಳಜಿಯೂ ಇರಬೇಡವೇ ? ಅಕಸ್ಮಾತ್ ಅನ್ನದಾತ ಮೇಲೆ ಬಂದು ಉದ್ಧಾರವಾಗಿ ಬಿಟ್ಟರೆ, ದುಡಿಯದೆ ಸೋಮಾರಿಯಾಗಿ, ಮುಂದೊಂದು ದಿನ ತಾವೆಲ್ಲಾ ಹಸಿವಿನಿಂದ
ಸತ್ತೇ ಹೋಗಿಬಿಡುತ್ತೇವೆಂಬ ಸಹಜ ಆತಂಕ ಕಾರಣವಿರಬಹುದೇ ?
ಅಧಿಕಾರಿ ವರ್ಗದಲ್ಲಿರುವವರ ಮುಂದೆ ಕಟ್ಟ ಕಡೆಯ ವ್ಯಕ್ತಿಯಾಗಿ ನಿಲ್ಲುವ ಇವರ ದುಡಿಮೆಯಿಂದಲೇ ತಮ್ಮ ಹೊಟ್ಟೆ ತಣ್ಣಗಿರುತ್ತದೆಂದಾಗಲಿ, ತಮ್ಮೀ ಐಷಾರಾಮಿ ಜೀವನಕ್ಕೆ ಕಾರಣ ಕರ್ತ ಅವನೇ ಎಂಬ ಅರಿವಾಗಲೀ ಬರಲೊಲ್ಲದೇಕೆ ?
ಚಂದ್ರನ ದಾಟಿ ಮಂಗಳನ ಮೀಟಿರುವ ಉಪಗ್ರಹಕ್ಕೆ ಹಿಡಿ ಅಕ್ಕಿ ರೂಪಿಸಿಕೊಡಲು ಸಾದ್ಯವಾದೀತೇ ? ಐಷಾರಾಮಿ ಜೀವನಕ್ಕೆ ಬಳಸುವ ಯಾವುದಾದರೂ ಒಂದೇ ಒಂದು ವಸ್ತು ನಿಮ್ಮ ಹಸಿವನ್ನು ತಣಿಸುವ ತಾಕತ್ತು ಹೊಂದಿದೆಯೇ ?
ರೈತ ಬೆಳೆದು ನೀಡುವ ಎಲ್ಲಾ ಸಾವಿರಾರು ಪದಾರ್ಥಗಳು ಸಿಕ್ಕದೇ ಇದ್ದ ಸಂಧರ್ಭ ಬಂದರೆ . ..ಒಂದು ಕ್ಷಣ ಯೋಚಿಸಿ ನೋಡಿ.
ಅನ್ನದಾತ ಪ್ರಪಂಚಕ್ಕೆ ಅನಿವಾರ್ಯವೋ ಅಲ್ಲವೋ ಅಂಥ.
ಇಂಥ ಅನ್ನದಾತನಿಂದು ಹಸಿವಿನಿಂದ ಅಳುತ್ತಿದ್ದಾನೆ.ಸೂಕ್ತವಾದ ವಸತಿ ಇಲ್ಲದೆ ಕುಗುರುತ್ತಿದ್ದಾನೆ. ಈ ಕಾಲದ ಎಲ್ಲಾ ಅನಾರೋಗ್ಯಕ್ಕೆ ತುತ್ತಾಗಿ ಮರಗುತ್ತಿದ್ದಾನೆ.
ತಾಲೂಕಾಫೀಸೆಂಬ (ಎಲ್ಲಾ ) ಅಧಿಕಾರದ ಅಡಿಯಾಳಾಗಿ ಅಲ್ಲಿನೆಲ್ಲಾ ಅಧಿಕಾರಿಗಳ ವಿಷ ವರ್ತುಲದೊಳಗೆ ಸಿಲುಕಿ ನರಳಾಡುತ್ತಿದ್ದಾನೆ.
ಒಟ್ಟಿನಲ್ಲಿ ಈ ಬದುಕಿನಿಂದ ಒಮ್ಮೆ ಮುಕ್ತವಾದರೆ ಸಾಕೆಂದು ಆಗಾಗ ತನ್ನ ಅಮೂಲ್ಯ ಜೀವನವನ್ನೇ ಚೆಲ್ಲಿ ಬಿಡುತ್ತಿದ್ದಾನೆ.
ಈಗ ಹೇಳಿ ? ಒಂದು ರೂಪಾಯಿಯ ಅಕ್ಕಿಯೆಂಬ ಬಿಕ್ಷೆಯ ಬಗ್ಗೆ ಮಾತಾಡುವವರೆಲ್ಲ ಒಮ್ಮೆ ಹಳ್ಳಿಗೆ ಬಂದು ಅನ್ನದಾತನ ಬದುಕಿನ ಒಳಗೊಮ್ಮೆ ಹಿಣಕಿ ಹಾಕಿ ಆಮೇಲೆ ಮಾತನಾಡಿ .ಈ ಮತಕ್ಕಾಗಿ ಆಮಿಷವೊಡ್ಡಿ ನೀಡುತ್ತಿರುವ ಇಂಥ ಸಣ್ಣ ಪುಟ್ಟ ಸವಲತ್ತುಗಳೂ ಇವರಿಗೆ ಬೇಡವೇ ? ಇದಿಷ್ಟೇ ಸಾಕೇ -ರೈತ ಅಥವ ದುಡಿಯುವ ವರ್ಗಗಳು ಬದುಕಲಿಕ್ಕೆ?
————————–
ಇವು ಯಾರ ಮೇಲಾಗಲಿ ದ್ವೇಷದಿಂದ ನುಡಿದ ಮಾತುಗಳಲ್ಲ.ಒಬ್ಬ ದುಡಿಯುವ ರೈತನಾಗಿ ನಾನು ಮತ್ತೆ ನನ್ನಂಥ ಅನೇಕರು ಅನುಭವಿಸುತ್ತಿರುವ ಕಷ್ಟಗಳನ್ನು ಮಾತ್ರ ಹೇಳಿಕೊಂಡಿದ್ದೇನೆ.
ವೈಯಕ್ತಿಕವಾಗಿ ಈ ನುಡಿಗಳಿಂದ ಯಾರಿಗಾದರೂ ನೋವಾದರೆ ಕ್ಷಮಿಸಿ.






Thanks for sharing the bare truth you explained sir. Always we used to read the opinion of the people who never been in the ground reality. The world has not made any justice for the people who work for the food what we eat!.
ನಿಮ್ಮ ಸಂಕಟಕ್ಕೆ ನಾವೆಲ್ಲರೂ ಹೊಣೆ…ಕ್ಷಮೆ ಇರ್ಲಿ.
‘ಭಾಗ್ಯ’ ಯೋಜನೆಗಳ ಬಗ್ಗೆ ಯಾಕೆ ಅಸಹನೆ ಬರುತ್ತಂದ್ರೆ, ರೈತನ ಸ್ವಾವಲಂಬಿತನವನ್ನ ಕಸಿದುಕೊಂಡು ದಾಸ್ಯಕ್ಕೆ ದೂಡೆತ್ತದೆಂಬ ಆಂಆತಂಕ.
yaavude poorvagrahagalillade tanna odala tuditavannaste tereditta baraha,estu janara manahokki kannu tereseetu!!!!!??????
neevu padara padaravaagi bidisitta raithana odalaalada novannu oduttha kannu ardravaayithu. ee bhaagyagalellaa nijavaada arharannu thalupuva kurithu namage samshaya. idannuu nungineeru kudiva ‘rajakaarana adhikaari’galu iddaarendu kelidde. intha bhaagyagalu nimmanthavarige sigali, nimma sankata svalpavaadaru neegali ennuvudu namma aashaya….s.p.vijayalakshmi
ಅನ್ನದಾತ, ವಿದ್ಯಾದಾತ, ಆರೋಗ್ಯದಾತ ಇದೆಲ್ಲಾ ಬೋಗಸ್ ಮಾತುಗಳು.
ಪ್ರತಿಯೊಬ್ಬ ಶ್ರಮಜೀವಿಗೂ ಅವನದೇ ಆದ ಬೆಲೆ ಇದೆ; ಮಾಡುವ ಕೆಲಸಕ್ಕೆ ಮನ್ನಣೆ, ಬೆಲೆ ಇರಬೇಕು. ಕೇವಲ …ಇಸಂ ಗಳಿಂದ ಏನನ್ನೂ ಮಾಡಲು ಆಗುವುದಿಲ್ಲ.
ಅನ್ನದಾತ ಎಂದು ಕರೆಯುವ ಮಾತಿನಲ್ಲಿ ರಾಜಕಾರಣದ ಸ್ವಾರ್ಥವಿದೆ; ಅದನ್ನು ಶ್ರಮಿಕ ರೈತ ಮೊದಲೇ ಗುರುತಿಸಿದ್ದರೆ ಯಾವತ್ತೋ ಉದ್ಧಾರ ಆಗಬಹುದಿತ್ತು.
ದುಡಿಯುವ ಪ್ರಜೆಗೆ ಯಾವ ಅಭಿದಾನವೂ ಬೇಡ; ಮಾಡುವ ಕೆಲಸಕ್ಕೆ ಸರಿಯಾದ ಪ್ರತಿಫಲ ದೊರಕಿಸಿಕೊಡುವ ವ್ಯವಸ್ಥೆ ರೂಪಿಸಿದರೆ ಸಾಕು.
ಆದರೆ ಮಾತಿನ ಮಂಟಪ ಕಟ್ಟುವ, ಆ ಮಂಟಪದಲ್ಲಿ ಎಲ್ಲಾ ಶ್ರಮಿಕರನ್ನೂ ಕೂಡಿಸಿ, ಅವರ ಹೆಸರಲ್ಲಿ ಕಾಸು ಮಾಡಿ, ವಿದೇಶಿ ಬ್ಯಾಂಕ್ ಗಳಲ್ಲಿ ಮುಚ್ಚಿಡುವ ಜನ ಮಂಟಪದೊಳಗಿನ ಶ್ರಮಿಕನಿಗೆ ಹೊಟ್ಟೆ ತುಂಬಿತಾ ಅಂತಲೂ ಯೋಚಿಸುವುದಿಲ್ಲ.
ಮಂಟಪದಲ್ಲಿ ಕೂರಬೇಕಾ ಅನ್ನುವ ಪ್ರಶ್ನೆ ಹೆಚ್ಚು ವಿದಿತ; ನಮ್ಮನ್ನು ಯಾವ ಹೆಸರಿಂದ ಕರೆದು ಮೋಸ ಮಾಡುತ್ತಾರೆ ಅನ್ನುವುದಲ್ಲ. ಹೆಸರೇ ಇಲ್ಲದಿದ್ದರೆ ಇನ್ನೂ ಚಂದ!
ಏನಂತೀರಿ?
ನನ್ನ ಲೇಖನಕ್ಕೆ ಸ್ಪಂದಿಸಿದ ಎಲ್ಲರಿಗೂ ವಂದನೆಗಳು.
manjunath avre u r right. andange ide bagayada akkiyannu badavarige sampuravagi talupada hage kelavu pattabadre hitasaktigalu vyavastita sanchu maduttive. karanatakada prati halliyallu ration akki maarikondu kobbidavara dodda padeye ide. partinitya yalla tllukugalu tahasiladar kacheriya yaduru e kuritu prati jilleyalli sarasari 2 rinda 3 patibhatnegalu aguttave. heggangala bilakke nuggi mele nintu visha haki sayiso gandasra korate ide sir. modlu aa kobbida heggangannu onige yaledu badidu sayaisbeku. aaga matra annabagya mattastu sartakavadeetu. anyway, annadatana hotte marugidare matra, adara shapa avana hotteyalli huttida raita virodhi maganannu bidalaradu.