ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಬ್ಬ ಅಜ್ಞಾತ ಮಹಾಪುರುಷ

 

ಗೌರವ ಸಂಪಾದಕರ ಮಾತು

ವಿ.ಎಂ. ಕುಮಾರಸ್ವಾಮಿ

ಅಜ್ಞಾತ ಮಹಾಪುರುಷ. ಒಂದು ವ್ಯಕ್ತಿತ್ವವನ್ನು ಹೀಗೆಪ್ರಶಂಸಿದವರು ಮಹಾಕವಿ ಕುವೆಂಪು. ಕುವೆಂಪು ಅಂತಹ ಪ್ರಜ್ಞಾವಂತರ ಲೇಖನಿಯಲ್ಲಿಹಳ್ಳಿಗಾಡಿನ ರೈತಾಪಿಯೊಬ್ಬ ಇಂಥಾ ಪ್ರಶಂಸಾ ನುಡಿ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ಒಳಹೊಕ್ಕು ಅರಿತಾಗಲೇ ಗೊತ್ತಾಗುವುದು. ಹೌದು, ಅವರು ನಿಜಕ್ಕೂ ಮಹಾ ಪುರುಷ.

ಆದರೆ, ಅವರು ಅಜ್ಞಾತರಾಗಿ ಉಳಿದರಲ್ಲಾ! ಎಲ್ಲಿ ದೊಡ್ಡ ಹುದ್ದ್ದೆ ಇರುವುದಿಲ್ಲವೋ, ಬಹಿರಂಗ ಪ್ರಚಾರವಾಗಲೀ, ರಾಜಕೀಯ ಪ್ರಭೆಯಾಗಲೀ ಇರುವುದಿಲ್ಲವೋ, ಅಂತಹ ವ್ಯಕ್ತಿತ್ವಗಳು ಆಂತರಿಕವಾಗಿ ಎಷ್ಟೇ ಸತ್ವಯುತರಾಗಿದ್ದರೂ ಸ್ಥಳೀಯತೆಯನ್ನು ಮೀರಿದ ಪ್ರಚಾರ ಪಡೆಯುವುದು, ಸುದೂರ ಜನಮಾನಸದಲ್ಲಿ ಉಳಿಯುವುದು ಕಷ್ಟ. ಅಲಿಗೆ ಗಣಪೈಯನಾಯಕರಾಗಲೀ , ಪುಟ್ಟಯ್ಯನಾಯಕರಾಗಲೀ ಆ ಕಾಲದ ತಮ್ಮ ಸುತ್ತಿನ ಬದುಕು, ವಿಚಾರಗಳನ್ನು ಕುರಿತು ಒಂದು ಪುಸ್ತಕವನ್ನಾದರೂ ಬರೆದಿದ್ದರೆ ಸಾಂಸ್ಕೃತಿಕ ಚರಿತ್ರೆಯಲ್ಲಿ ಅವರ ಹೆಸರು ಬೇರೆಯದೇ ರೀತಿ ದಾಖಲಾಗುತ್ತಿತ್ತು, ಉಳಿಯುತ್ತಿತ್ತು, ಮಾನ್ಯವಾಗುತ್ತಿತ್ತು. ಅಕ್ಷರ ಲೋಕವು ಮೌಖಿಕ ಚೈತನ್ಯಕ್ಕೆ ಕೊಟ್ಟ ಮಾನ್ಯತೆ ಇದು! ಇದು ಗೊತ್ತಿದ್ದರೂ, ಸಂಘ ಸಂಸ್ಥೆಗಳು ನಮ್ಮ ಗ್ರಾಮೀಣ, ದೇಸೀ ಸತ್ವ ಸಂಪನ್ನರನ್ನು ಈಗಲೂ ಬಹುವಾಗಿ ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

ನಾನು ನೆನಪಿನ ದೋಣಿಯಲ್ಲಿ’ಪುಸ್ತಕ, ದೇವಂಗಿ ರಾಮಣ್ಣಗೌಡರ ಹಾಗೂ ಮಾನಪ್ಪನವರ ಪುಸ್ತಕಗಳನ್ನು ಓದುತ್ತಿದ್ದಾಗ ಅಲಿಗೆ ಪುಟ್ಟಯ್ಯನಾಯಕರ ಹೆಸರು ನನ್ನ ಗಮನಕ್ಕೆ ಬಂತು. ವಿಶೇಷವಾಗಿನೆನಪಿನ ದೋಣಿಯಲ್ಲಿ’ ಮೊದಲ ಪುಟದಲ್ಲೇ ಈ ವ್ಯಕ್ತಿಯ ಉಲ್ಲೇಖ ಇರುವುದು ಅಚ್ಚರಿಯಾಗಿ, ಇವರ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಬಂತು. ಆಗನನ್ನ ಸಹಜ ಹವ್ಯಾಸದಂತೆ ಗಣಕದಲ್ಲಿ ಹುಡುಕುತ್ತಿದ್ದಾಗ ಒಕ್ಕಲಿಗ ವೇದಿಕೆಯಿಂದ ಕೆ.ಹೆಚ್. ರಾಮಯ್ಯ ಅವರ ಸಂಸ್ಮರಣ ಸಮಾರಂಭವೊಂದನ್ನು ಮಾಡಿರುವ ಸಂಗತಿಯನ್ನು ಮೈಸೂರಿನ ಶ್ರೀಮತಿ ಯಮುನ ಎಂಬುವರು ದಾಖಲಿಸಿದ್ದು ಕಂಡು ಬಂತು. ಅವರನ್ನು ದೂರವಾಣಿ ಮೂಲಕ ಸಂಪಕರ್ಿಸಿದಾಗ ಅವರ ತಂದೆ ಶ್ರೀ ಡಿ. ಲಕ್ಕಪ್ಪ ಎಂಬುವರು ಅಲಿಗೆಯ ಶಾಲೆಯಲ್ಲಿ ಆರೇಳು ವರ್ಷ (1955-60ರ ಸುಮಾರಿನಲ್ಲಿ) ಶಿಕ್ಷಕರಾಗಿದ್ದ ಅಂಶ ಬೆಳಕಿಗೆ ಬಂತು. ಆ ಎಳೆಯನ್ನು ಹಿಡಿದು ಮುಂದಕ್ಕೆ ಹೋದಾಗ ನನಗೆ ನಿಜಕ್ಕೂ ಸಂಭ್ರಮ ಉಂಟಾಯಿತು. ಅಲಿಗೆ ಮನೆತನದಹಿರಿಮೆ-ಗರಿಮೆಗಳು ನನ್ನನ್ನು ದಂಗುಬಡಿಸಿದ್ದವು.

ಅಲಿಗೆ ಪುಟ್ಟಯ್ಯ ನಾಯಕರನ್ನು, ಮನೆತನದ ಸಾಮಾಜಿಕ, ಸಾಂಸ್ಕೃತಿಕ ಹಿರಿಮೆಯನ್ನು ಇಂದಿನವರಿಗೂ ವ್ಯಾಪಕವಾಗಿ ಪರಿಚಯಿಸಬೇಕು,ಮುಂದಿನವರಿಗೂ ಉಳಿಸಬೇಕು ಎಂಬ ಬಯಕೆ ನ್ನನದಾಯಿತು. ಅವರ ಬಗ್ಗೆ ಸಿಕ್ಕ ಸಿಕ್ಕ ಎಲ್ಲಾ ದಾಖಲೆಗಳನ್ನು ಕಲೆ ಹಾಕುತ್ತಿದ್ದಾಗ, ಕುವೆಂಪು ಕವನಗಳ ಸಂದರ್ಭವನ್ನು ಕುರಿತು ಬ್ಲಾಗಿನಲ್ಲಿ ಬರೆಯುತ್ತಿದ್ದ, ಕಿರಿಯ ಮಿತ್ರ ಸತ್ಯನಾರಾಯಣನ ಲೇಖನವೊಂದರಲ್ಲಿ ಅಲಿಗೆ ಪುಟ್ಟಯ್ಯನಾಯಕರ ಮತ್ತು ಕುವೆಂಪು ಅವರ ಸಂಬಂಧಗಳ ಬಗ್ಗೆ ಇದ್ದ ವಿವರಗಳು ನನ್ನ ಗಮನಸೆಳೆದವು. ಅಲಿಗೆ ಪುಟ್ಟಯ್ಯನಾಯಕರ ಬಗೆಗೆ ಒಂದು ಪುಸ್ತಕವನ್ನು ಸಿದ್ಧಪಡಿಸುವುದಕ್ಕೆ ನಾಣು ಆತನ ಬೆನ್ನು ಹತ್ತಿದೆ.

ಆತನನ್ನು ಹಿಂದಿಟ್ಟುಕೊಂಡು ಪೋನ್, ಈಮೇಲ್ ಮೂಲಕ ಸಾಕಷ್ಟು ಚಚರ್ಿಸಿ, ಆತನನ್ನು ಅಲಿಗೆಗೆ ಒಮ್ಮೆ ಕಳುಹಿಸಿ, ನಂತರ ನಾನು ಭಾರತಕ್ಕೆ ಬಂದಾಗ,ಹ.ಕ.ರಾಜೇಗೌಡ, ಗೋವಿಂದರಾಜು ಮತ್ತು ನಾನು ಸತ್ಯನಾರಾಯಣ ಕಾರಿನಲ್ಲಿ ಕುಪ್ಪಳಿ, ಅಲಿಗೆ, ಅಮ್ಮಡಿ, ಹಿರಿಕೊಡಿಗೆ, ದೇವಂಗಿ, ಹೊಸಕೇರಿ ಮೊದಲಾದ ಪ್ರದೇಶಗಳಲ್ಲಿ ಸಾಕಷ್ಟು ಕ್ಷೇತ್ರಕಾರ್ಯ ನಡೆಸಿದವು. ನೂರಾರು ಜನರನ್ನು ಸಂಪಕರ್ಿಸಿದೆವು. ಅಂತಿಮವಾಗಿ ನನ್ನ ತೀವ್ರ ಆಸಕ್ತಿಯ ಫಲವಾಗಿ ಈ ಕೃತಿ ರೂಪುಗೊಂಡಿದೆ. ಪುಟ್ಟಯ್ಯ ನಾಯಕರನ್ನು ಕಂಡು ಕೇಳಿದವರು, ಒಡನಾಡಿದವರು ತಮ್ಮ ನೆನಪುಗಳನ್ನು ಹೆಕ್ಕಿ ದಾಖಲಿಸಿದ ಸಂಗತಿಗಳು ಇಲ್ಲಿ ಸಂಚಯಗೊಂಡಿವೆ.

ಹೀಗೊಂದು ಪುಸ್ತಕ ದಾಖಲೆ ಮಾಡಬೇಕೆಂಬ ನನ್ನ ಆಸಕ್ತಿ,ಪರಿಶ್ರಮದಲ್ಲಿ ಹಲವರು ಸಹಭಾಗಿಯಾಗಿ ಶ್ರಮಿಸಿದ್ದಾರೆ. ನಾವು ಹೋದಲ್ಲಿ ಆಯಾಮನೆತನದ ತಾಯಂದಿರು ಪ್ರೀತಿಯಿಂದ ಸತ್ಕರಿಸಿದ್ದಾರೆ. ಅಂತಹವರ ಸಂಖ್ಯೆ ನೂರನ್ನು ದಾಟುತ್ತದೆ! ಅವರೆಲ್ಲರ ಹೆಸರನ್ನು ಹೇಳದೆ, ಎಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.

ಎಲ್ಲಾದರು ಇರು

ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ

ಕನ್ನಡವೇ ನಿತ್ಯ!

ಎಂಬ ಕುವೆಂಪು ಅವರ ಸಾಲುಗಳಿಗೆ ಅನ್ವಯವಾಗುವಂತೆ 2004 ರಿಂದ ಕನ್ನಡಕ್ಕಾಗಿ, ಕನ್ನಡದ ಅಭಿವೃದ್ದಿಗಾಗಿ, ಕನ್ನಡದ ಉಳಿವು-ಬೆಳವಣಿಗೆಗಾಗಿ “ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ ಈ-ಕವಿ” ಪ್ರಪಂಚದಾದ್ಯಂತ ಕನ್ನಡಿಗರನ್ನು ಅಂತಜರ್ಾಲದ ಮುಖೇನ ಒಗ್ಗೂಡಿಸಿ ಕನ್ನಡದ ಪರ ಧನಿ ಎತ್ತುವ ಮೂಲಕ ಕನ್ನಡ ತಾಯಿಯ ಸೇವೆಯನ್ನು ಮಾಡುತ್ತಾ ಬಂದಿದೆ.

ಹಲವು ಜನರು ಒಬ್ಬರಿಂದ ಒಬ್ಬರಿಗೆ ಈ-ಕವಿ ದ್ಯೆಯೋದ್ದೆಶಗಳನ್ನು ಕೇಳಿ ತಾವು ಸಹ ಸಕ್ರಿಯವಾಗಿ ಭಾಗವಹಿಸಲು ಮುಂದಾಗಿ ಇಂದು ಕನರ್ಾಟಕದ ರಾಜ್ಯದಲ್ಲಿ ನೆಲೆಯೂರುತ್ತಾ ಬಂದಿದ್ದು, ಸಕರ್ಾರದ ಮಟ್ಟದಲ್ಲಿ ಹೋರಾಟ ಮಾಡಿ ಗಮನ ಸೆಳೆದು ಕನ್ನಡದ ಹಾಗು ರಾಜ್ಯದ ಅಭಿವೃದ್ಧಿಗೆ ಮುನ್ನಡೆಯುತ್ತಿದೆ.

ಈ-ಕವಿಯ ಸಾಧನೆಗಳು ಹಲವಾರು ಶಾಲಾ-ಮಕ್ಕಳಿಗೆ ವೇತನ ಭರಿಸುವುದು, ಪುಸ್ತಕ-ಲೇಖನಿಗಳು, ಸಮವಸ್ತ್ರ ವಿತರಣೆ ಹಾಗು ವಿದ್ಯಾಥರ್ಿಗಳಿಗೆ ಕ್ರೀಧಾಭಿವೃದ್ದಿಗೆ ಉತ್ತೇಜನ ನೀಡುವುದು. ಕನ್ನಡ ತಂತ್ರಾಂಶದ ಬಗ್ಗೆ ಜನಜಾಗೃತಿ ಮೂಡಿಸುವುದು ಇತ್ಯಾದಿ

ಇದೀಗ ದೇಸೀ ಪುಸ್ತಕದ ಶ್ರೀ ನಾಗೇಶ ಅವರೊಂದಿಗೆ ಸೇರಿಕೊಂಡು, ಕನ್ನಡ ನಾಡಿನ ಆಗಿಹೋದ ಮಹನೀಯರ ಬಗ್ಗೆ ಪುಸ್ತಕಗಳನ್ನು ಬರೆಸಿ, ಪ್ರಕಟಿಸುವ ಮಹತ್ವದ ಯೋಜನೆಯನ್ನು ಸಾಕಾರಗೊಳಿಸುತ್ತಿದೆ. ಈ-ಕವಿ ವ್ಯಕ್ತಿಚಿತ್ರ ಮಾಲೆ ಎಂಬ ಸರಣಿಯಲ್ಲಿ ಮೊದಲಿಗೆ ಅಲಿಗೆ ಪುಟ್ಟಯ್ಯನಾಯಕರ ಪುಸ್ತಕ ಪ್ರಕಟವಾಗುತ್ತಿದೆ. ಸಹಕಾರ ನೀಡುತ್ತಿರುವುದಕ್ಕೆ ಸೃಷ್ಟಿ ನಾಗೇಶ ಅವರಿಗೆ ಕೃತಜ್ಞತೆಗಳು.

ದಿನಾಂಕ 29-12-2012 ರಂದು ಕುಪ್ಪಳಿಯಲ್ಲಿ ನಡೆಯುವ ಕುವೆಂಪು ಜನ್ಮದಿನ ಸಮಾರಂಭದಲ್ಲಿ ಈ ಕೃತಿ ಬಿಡುಗಡೆಯಾಗುತ್ತಿದೆ. ಸಹಕರಿಸಿದ, ಸಹಕರಿಸುತ್ತಿರುವ ನನ್ನೆಲ್ಲಾ ಸ್ನೇಹಿತರಿಗೆ, ಹಿತೈಷಿಗಳಿಗೆ ನಾನು ಋಣಿ.

 

 

‍ಲೇಖಕರು G

27 December, 2012

1 Comment

  1. shanthi k.a.

    nimma kaalaji mechchuvantaddu. shubhavaagali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading