ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಮಧುರವಾದ ಗೀತೆಯನ್ನು ಆಕಾಶವಾಣಿಯಲ್ಲಿ ಆಲಿಸಿದೆ..

ಗೋಪಾಲ ವಾಜಪೇಯಿ

ಇವೊತ್ತು ಮುಂಜಾನೆ ನಾನು ಮನ್ನಾ ಡೇ ಹಾಡಿದ, ಅರ್ಥಪೂರ್ಣ ಸಾಹಿತ್ಯದ ‘ಜಯತೆ ಜಯತೆ ಜಯತೆ…. ಸತ್ಯಮೇವ ಜಯತೆ…’ ಎಂಬ ಒಂದು ಮಧುರವಾದ ಗೀತೆಯನ್ನು ಆಕಾಶವಾಣಿಯಲ್ಲಿ ಆಲಿಸಿದೆ. ಇಡೀ ದಿನ ಅದೇ ಗುಂಗಿನಲ್ಲಿ ಸಂಚರಿಸಿದೆ. ‘ಮಾರ್ಗದರ್ಶಿ’ ಚಿತ್ರಕ್ಕಾಗಿ ಕು. ರಾ. ಸೀತಾರಾಮ ಶಾಸ್ತ್ರಿ ಅವರು ಬರೆದ, ಜಯದೇವ ರಾಗ ಸಂಯೋಜನೆಯ ಈ ಗೀತೆಯ ಒಂದೊಂದು ಸಾಲೂ ನಿಜಕ್ಕೂ ಮಾರ್ಗದರ್ಶಿಯೇ… ಅದರ ಕೆಲವು ಸಾಲುಗಳು ಇಲ್ಲಿವೆ. ——- ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವಾ… ——- ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ. ——- ಮಧುರ ಭಾವ ತುಂಬಿದಂಥ ಮನಸೇ ದೇವ ಮಂದಿರ ಸಾತ್ವಿಕನಿಗೆ ನಿಲುಕದಂಥ ನಿಧಿಯೇ ಇಲ್ಲ ಬಲ್ಲಿರ? ——- ಸರಳಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ ——- ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ?  ]]>

‍ಲೇಖಕರು G

4 May, 2012

3 Comments

  1. Patali

    In fact Mannadey ‘s kannada pronunciation,,deva “Karama kanda” nimigobbarige preethi,,,,,

  2. ಪ್ರದ್ಯುಮ್ನ

    ಈ ಹಾಡು ಕಲ್ಪವೃಕ್ಷ ಚಿತ್ರದ್ದು….

  3. ಟಿ.ಕೆ.ಗಂಗಾಧರ ಪತ್ತಾರ

    ಈ ಹಾಡು ಮಾರ್ಗದರ್ಶಿ ಚಿತ್ರದ್ದಲ್ಲ. ಕಲ್ಪವೃಕ್ಷ ಚಿತ್ರದ್ದು. ಬೆಂಗಳೂರಿನಲ್ಲಿಯೇ ನೆಲೆಸಿದ್ದು ಇತ್ತೀಚೆಗೆ 90ನೇ ವಯಸ್ಸಿನಲ್ಲಿ ನಿಧನರಾದ ಶಾಸ್ತ್ರೀಯ ರಾಗಾಧಾರಿತ ಚಿತ್ರಗೀತೆಗಳನ್ನು ಹಾಡುವುದರಲ್ಲಿ ಜನಪ್ರಿಯರಾದ ಮನ್ನಾಡೆಯವರು ಹಾಡಿದ ಗೀತೆಯಿದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading