ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕೃತಿ -ಒಂದು ಕಲಾ ಕೃತಿ

oil-che.jpgbook_cover_page_1.jpg

ಇಲ್ಲೊಂದು ಕೃತಿಯಿದೆ-ಕಲಾಕೃತಿಯೂ ಇದೆ. ಎರಡೂ ಸುದೇಶ್ ಮಹಾನ್ ರಚನೆ. ಚೆ ಗೆವಾರ ಸುದೇಶರ ಪ್ರೀತಿಯ ಹೀರೋ. ಜಿ ಎನ್ ಮೋಹನ್ ಕ್ಯೂಬಾ ಪ್ರವಾಸ ಕಥನ ಬರೆದಾಗ ಅದರ ಮುಖಪುಟಕ್ಕಾಗಿ ಕುಂಚ ಕೈಗೆತ್ತಿಕೊಂಡರು. ಒಂದು ಪುಸ್ತಕಕ್ಕೆ ಬರೆದ ಕಲೆ ಬರೆದವರನ್ನೇ ಕಾಡುವುದು ಅಪರೂಪ. ಆದರೆ ಇಲ್ಲಿ ಹಾಗಾಗಲಿಲ್ಲ. ಸುದೇಶ್ ಈ ಕೃತಿ ಬರೆದ ಹಲವಾರು ವರ್ಷಗಳ ನಂತರವೂ ಆ ಮುಖಪುಟದ ಗುಂಗಿನಲ್ಲಿದ್ದರು. ತೈಲ ವರ್ಣ ರಚಿಸಲು ಮುಂದಾದಾಗ ಬೆನ್ನು ಬಿದ್ದು ಆ ಮುಖಪುಟಕ್ಕಾಗಿ ಬರೆದ ಚಿತ್ರ ತರಿಸಿಕೊಂಡರು. ಅವರು ಬರೆದ ಚೆ ಗೆವಾರ ತೈಲ ಕೃತಿಯೂ ಇಲ್ಲಿದೆ.

‍ಲೇಖಕರು avadhi

13 February, 2008

1 Comment

  1. ರವಿ ಅಜ್ಜೀಪುರ

    ನಾನು ಜಿ ಎನ್ ಮೋಹನ್ ಅವರ ನನ್ನೊಳಗಿನ ಹಾಡು ಕ್ಯೂಬಾ ಓದಿದಾಗ
    ಒಳಗಿನ ಹೂರಣದಷ್ಟೇ ಕಾಡಿದ್ದು ಅದರ ಮುಖಪುಟ. ಇಂದಿಗೂ ನನ್ನ ಅಚ್ಚುಮೆಚ್ಚಿನ
    ಪುಸ್ತಕ ಯಾವುದೆಂದು ಕೇಳಿದರೆ ಅದು ನಹಾಕ್ಯೂ ನೆ. ಕ್ಯುಬಾದಂತಹ
    ಪುಟ್ಟ ರಾಷ್ಟ್ರ ಕಿರಾತಕ ಅಮೆರಿಕಾಗೆ ಸೆಡ್ಡ ಹೊಡೆದು ನಿಂತದ್ದಿದೆಯಲ್ಲ ನಿಜಕ್ಕೂ
    ಅದು ಗ್ರೇಟ್.
    ಇನ್ನು ನನ್ನ ಚೆ. ಆತ ನಿಜಕ್ಕೂ ನನ್ನ ಹೀರೋ. ಆತನ ಸಿಗಾರಿನ ಹುಚ್ಚು, ಆಸ್ತಮಾದ
    ನಂಟು, ಬಂದೂಕಿನ ನಡುವೆಯೇ ಹುಟ್ಟಿದ ಹೋರಾಟ ಚೆ ನನ್ನು ನನ್ನಂಥವರ ಮನಸ್ಸಿಗೆ
    ತಂದು ನಿಲ್ಲಿಸಿದೆ. ಆತ ಕ್ಯೂಬಾದ ಕನಸು ಹೇಗೋ ಹಾಗೆ ಜಗತ್ತಿನ ಎಲ್ಲಾ ಹೋರಾಟ
    ಗಾರರ ಕಸುವೂ ಹೌದು. ಅಂತಹ ಹೋರಾಟದ ಕಸುವನ್ನ, ತ್ಯಾಗವನ್ನ ನಮ್ಮ ಮಡಿಲಿಗೂ ತಂದು ಹಾಕಿದ
    ಮೋಹನ್ ಅವರಿಗೆ ನಾನು ಎಂದಿಗೂ ಋಣಿ.
    ಅಚ್ಟೇ ಚಂದಾಗಿ ನನ್ನ ಹೀರೋನನ್ನ ಬಿಡಿದಿ ಸುದೇಶ್ ಗು.
    ಎರಡು ವರುಷದ ಹಿಂದೆ ಚೆ ಯನ್ನ ಹಾಕ್ಕೊಂಡು ಒಂದು ಹೊಸ ವರುಷದ ಶುಭಾಶಯ
    ಪತ್ರ ಮಾಡಿದ್ದೆ. ಗೆಳೆಯರೆಲ್ಲ ಮೆಚ್ಚಿಕೊಂಡಿದ್ದರು. ಚೆ ಯಾರೆಂದೇ ಗೊತ್ತಿಲ್ಲದವರು
    ಈತ ಯಾರು ಅಂತ ಕೇಳಿ ಒಂದು ಕುತೂಹಲಗೊಂಡಿದ್ದರು.
    ನನ್ನ ಪ್ರಕಾರ ಚೆ ಪರಮ ಕುತೂಹಲವೇ!
    ಎಂದಾದರೂ ಸಿಕ್ಕಿದರೆ ಅದನ್ನು ಅವಧಿಯ ಮಡಿಲಿಗೆ ಹಾಕಿಯೇನು.
    ಮತ್ತೆ ಎಲ್ಲಾ ನೆನಪಿಸಿದ್ದಕ್ಕೆ ಥ್ಯಾಂಕ್ಸ್.
    ನಿಮ್ಮ ,ರವಿ ಅಜ್ಜೀಪುರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading