ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಇಡ್ಲಿಯಿಂದಾಗಿ ಏನೆಲ್ಲಾ….

 

idli cover kannadaಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ

ವಿಠ್ಠಲ ವೆಂಕಟೇಶ ಕಾಮತ್
ಸಾಹಿತ್ಯ ಪ್ರಕಾಶನ
ಕೊಪ್ಪೀಕರ್ ಬೀದಿ ಹುಬ್ಬಳ್ಳಿ- ೫೮೦೦೨೦
ಫೋನ್ -೦೮೩೬-೨೩೬೭೬೭೬

vittal venkatesh kamath orchid hotelsಇದು ಇಡ್ಲಿಯ ಒಳಗಿಂದಲೇ ಎದ್ದು ಬಂದ ಆತ್ಮವಿಶ್ವಾಸದ ಕಥೆ. ಅಮ್ಮ ಮಾಡುತ್ತಿದ್ದ ಮಲ್ಲಿಗೆಯಷ್ಟು ಹಗುರವಾದ ಇಡ್ಲಿಯಿಂದಲೇ ಜಗತ್ತು ಸುತ್ತುವಂತಾದ, ಅನೇಕ ದೇಶಗಳಿಗೆ ಇಡ್ಲಿ ರುಚಿ ಉಣಬಡಿಸಿದವರ ಆತ್ಮಕಥೆ ಇದು. ,

ಇಡ್ಲಿಯಿಂದ ಆರಂಭವಾಗಿ ಜಗತ್ತಿನ ಅತ್ಯುತ್ತಮ ಎಕೋ ಹೋಟೆಲ್ ಎಂಬ ಪ್ರಶಸ್ತಿ ಗಿಟ್ಟಿಸಿದ ಆರ್ಕಿಡ್  ಸಮೂಹದ ಹೋಟೆಲ್ ಸರಣಿಯನ್ನು ಹುಟ್ಟು ಹಾಕಿದ ಕಥೆ. ಬದುಕುವ ಆಸೆಯನ್ನೇ ಕುಗ್ಗಿಸಿದ ವಾತಾವರಣದಿಂದ ಎದ್ದು ಜಗತ್ತಿನ ಪ್ರಮುಖರಲ್ಲೊಬ್ಬರಾದವರ ಕಥೆ. ವಿಠ್ಠಲ ವೆಂಕಟೇಶ ಕಾಮತ್ ತಮ್ಮ ಎದ್ದು ಬಂದ ಕಥೆಯನ್ನು ಕಟ್ಟಿಕೊಟ್ಟ ಕೃತಿಯೇ ‘ಇಡ್ಲಿ ಆರ್ಕಿಡ್ ಮತ್ತು  ಆತ್ಮಬಲ’. ಇದು ಒಂದು ರೀತಿಯಲ್ಲಿ ಕಾಮತ್ ಹೋಟೆಲ್ ಬೆಳೆದು ಬಂದ ಕಥೆಯೂ ಹೌದು.

‘ಇಡ್ಲಿ ಆರ್ಕಿಡ್ ಆಣಿ ಮಿ’  ಎಂಬ ಹೆಸರಿನಲ್ಲಿ ಮರಾಠಿಯಲ್ಲಿ ಬೆಳಕು ಕಂಡ ಕೃತಿ ಈಗ ಕನ್ನಡಕ್ಕೆ ಬಂದಿದೆ. ಅಕ್ಷತಾ ದೇಶಪಾಂಡೆ ಕೃತಿಯ ಸೊಗಸನ್ನು ತುಂಬಾ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಕಾಮತರ ಅಮ್ಮ ಓದಿದ್ದು ಕನ್ನಡ ಪ್ರಾಥಮಿಕ ಶಾಲೆಯಲ್ಲಿ. ಹಾಗಾಗಿ ಅಮ್ಮ ಕನ್ನಡದಲ್ಲೇ ಈ ಕೃತಿ ಓದುವಂತಾಗಲಿ ಎಂಬ ಆಶಯ ಈ ಅನುವಾದದ ಹಿಂದಿದೆ.

ಈ ಕೃತಿಯ ಹೆಸರಲ್ಲಿ ಇಡ್ಲಿಯೂ ತೂರಿಬಂದದ್ದೇಕೆ? ವಿಠ್ಠಲ ವೆಂಕಟೇಶ ಕಾಮತರೇ ವಿವರಿಸುವುದು ಹೀಗೆ….

idli book maratiidli book englishಇನ್ನು ನನ್ನ ಪುಸ್ತಕದ ಹೆಸರಿನ ಬಗ್ಗೆ ಅನೇಕರಿಗೆ ಕುತೂಹಲವಿರಬಹುದು. ಆದರೆ ಅದರ ಬಗ್ಗೆಯೇ ಹೇಳುತ್ತೇನೀಗ. ಅದಕ್ಕೂ ಮುನ್ನ ನನ್ನ ತಾಯಿಯಕೈರುಚಿಯ ಬಗ್ಗೆ ಸ್ವಲ್ಪ! ಎಲ್ಲಿಂದೆಲ್ಲಿಗೆ ಅನ್ನಬೇಡಿ. ಓದಿದಾಗ ನಿಮಗೆ ತಿಳಿಯುತ್ತದೆ. ನನ್ನ ತಾಯಿಯ ಕೈರುಚಿಯಂತೂ ಅಹಾಆಕೆ ಅನ್ನಪೂರ್ಣೆಯೇ ಸರಿ. ಆಕೆ ತಯಾರಿಸಿದ ಇಡ್ಲಿಯನ್ನು ಒಮ್ಮೆ ತಿಂದಾತ ಅದರ ರುಚಿಯನ್ನು ಜೀವನದುದ್ದಕ್ಕೂ ಮರೆಯುವುದಿಲ್ಲ.

ನನ್ನ ತಾಯಿ ಎಂಬ ಕಾರಣಕ್ಕೆ ಆಕೆಯನ್ನು ಹೊಗಳುತ್ತಿದ್ದೇನೆ ಅಂದುಕೊಳ್ಳ ಬೇಡಿ. ಆದರೆ ಇಡ್ಲಿ ತಯಾರಿಸುವುದರಲ್ಲಿ ಆಕೆಯ ಸಮಾನರಾದವರು ಜಗತ್ತಿನಲ್ಲಿ ಹುಟ್ಟೇ ಇಲ್ಲ ಅನ್ನಬಹುದು. ಇಂದಿಗೂ ಕೂಡಾ ಆಕೆಗೆ ಎಪ್ಪತ್ತು ದಾಟಿದ್ದರೂ ಅಷ್ಟೆ ಮೃದುವಾದ ಇಡ್ಲಿಗಳನ್ನು ತಯಾರಿಸಬಲ್ಲಳು.

ನಮ್ಮ ಪರಿಚಿತರಲ್ಲಿ, ನೆಂಟರಿಷ್ಟರಲ್ಲಿ ಯಾರಿಗಾದರೂ ರುಚಿಕರವಾದ ಇಡ್ಲಿಗಳನ್ನು ತಿನ್ನುವುದಿದ್ದರೆ, ವಿಶೇಷವಾಗಿ ಗರ್ಭಿಣಿಯರು, ಅಮ್ಮನಿಗೆ ಗಂಟು ಬೀಳುತ್ತಾರೆ. ಆಕೆಯಿಂದಲೇ ನಾನು ಇಡ್ಲಿ ತಯಾರಿಸಲು ಕಲಿತು ಜಗತ್ತಿನಾದ್ಯಂತ ಹೆಸರುವಾಸಿ ಮಾಡಿದೆ. ಯುರೋಪನಲ್ಲಂತೂ ಇಡ್ಲಿಯನ್ನು ರೈಸ್ ಪುಡ್ದಿಂಗ್ ಹಾಗೂ ಚಟ್ನಿಯನ್ನು ಕೊಕೊನಟ್  ಸಾಸ್ ಎಂದು ಹೇಳಿ ಮಾರಿದ್ದೇನೆ. ನಮ್ಮ ಕಾಮತರನ್ನು ಎಲ್ಲಾ ಇಡ್ಲಿವಡಾಸಾಂಬಾರ್ ಮಾರುವವರು ಎಂದು ಹಾಸ್ಯ ಮಾಡುತ್ತಾರೆ.

ಆದರೆ ಇಡ್ಲಿಯಿಂದಲೇ ನಾನು ಜಗತ್ತನ್ನೆಲ್ಲ ಸುತ್ತಿ ಬಂದಿದ್ದೇನಲ್ಲದೆ ಆರ್ಕಿಡ್ನಂತಹ ಅಷ್ಯಾ ಖಂಡದ ಪ್ರಥಮ ಎನ್ನಬಹುದಾದಂಥ ಪರಿಸರಕ್ಕೆ ಬೆಲೆ ಕೊಡುವಂತಹ ಹೋಟೆಲನ್ನು ಕಟ್ಟಿರುವೆ. ಇಂತಹ ಇಡ್ಲಿಯ ಉಪಕಾರವನ್ನು ನಾನು ಮರೆಯುವುದೆಂತು? ಅದಕ್ಕೆ ನನ್ನ ಪುಸ್ತಕದ ಹೆಸರನ್ನು ಇಡ್ಲಿಯಿಂದ ಆರಂಭಿಸಿದ್ದೇನೆ.

‍ಲೇಖಕರು admin

12 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading