ಇಲ್ಲೊಂದು ಕೌತುಕದ ಸಂಗತಿ ಇದೆ: ಹೆಗ್ಗೋಡಿನ ಬಳಿಯ ಮುಂಡಿಗೇಸರ ಎಂಬ ಊರಿನ ಸುತ್ತಲಿನ ಗುಡ್ಡ, ಬೆಟ್ಟ, ಬೇಣ, ಅಡಿಕೆತೋಟಗಳಿಗೆ ಅದೆಂಥದೊ ಕೀಟಸೈನ್ಯವೊಂದು ಲಗ್ಗೆ ಹಾಕಿದೆಯಂತೆ.

ಗಿಡಮರಗಳ ಹಸುರೇ ಕಾಣದಷ್ಟು ಗಾಢವಾಗಿ, ಕೋಟಿಸಂಖ್ಯೆಯಲ್ಲಿ ಎಲ್ಲಿಂದ ಬಂದವೊ, ಏಕೆ ಬಂದವೊ ಏನೂ ಗೊತ್ತಿಲ್ಲ ಎಂದು ರಂಗಕಮಿ೯ ಕಿಟ್ಟಣ್ಣ ಸೋಜಿಗಪಡುತ್ತಿದ್ದಾರೆ. ಅವು ಏನನ್ನೂ ತಿನ್ನುತ್ತಿಲ್ಲ, ಯಾರನ್ನೂ ಕಚ್ಚುತ್ತಿಲ್ಲ. ಆದರೆ ಯಾರಿಗೂ ನಿಶ್ಚಿಂತೆಯಿಂದ ಓಡಾಡಲು ಬಿಡುತ್ತಿಲ್ಲ.

ಹಿಂದೆಂದೋ ನೆಲದಡಿಯಲ್ಲಿ ಮೊಟ್ಟೆಯಿಟ್ಟ ಕೀಟಸಂತತಿಯೊಂದು ಈಗೆಲ್ಲೋ ಭೂತಲದಿಂದ ಮೇಲೆದ್ದು ಬಂದಿವೆ. ಇವೆಲ್ಲವೂ ಮಿಲನಗೊಂಡು ಒಂದೊಂದು ಕೀಟವೂ ನೆಲದಾಳದಲ್ಲಿ ನೂರಾರು ಮೊಟ್ಟೆಗಳನ್ನಿಟ್ಟರೆ, ಮುಂದೆ ಯಾವುದೋ ವಷ೯ ಅವುಗಳ ಸಂತತಿ ಈಗಿಗಿಂತ ಅಷ್ಟುಪಟ್ಟು ಹೆಚ್ಚಾಗಿ ಮೇಲೆದ್ದು ಬರಬಹುದು. ಹಿಂದೆ ಹೀಗಾಗಿತ್ತು ಎಂದು ಆಗ ನೆನಪಿಸಿಕೊಳ್ಳಲು ಈ ಸಾಕ್ಷ್ಯವನ್ನು ಇಲ್ಲಿ ಜೋಡಿಸುತ್ತಿದ್ದೇನೆ.
ಈ ಕೀಟಗಳಿಗೆ ಯಾವುದಾದರೂ ನೈಸಗಿ೯ಕ ವೈರಿಗಳಿವೆಯೇ ಎಂದು ತುತಾ೯ಗಿ ಹುಡುಕಬೇಕಾದ ಅಗತ್ಯವಿದೆ. ಗೊತ್ತಿದ್ದವರು ತಿಳಿಸಿ. ಅಥವಾ ಸನಿಹದ ಕೀಟತಜ್ಞರಿಗೆ ತಿಳಿಸಿ.







ee keeta kaatada keetaleya bagge keats-kavi padyavanneneadaroo baredirabahude? Heggodina subbannanavara granthalayadalli idu iddirabahude? idannu patte maadidavarige Jnaana-Keeta prashasti kooda needabahudu !!narayan raichur
ಶ್ರೀ ನಾಗೇಶ್ ಹೆಗ್ಗಡೆಯವರೇ,
ನನ್ನ ಅಭಿಪ್ರಾಯದಂತೆ ಇವು ದೀರ್ಘಾವದಿಯ ಜನ್ಮಚಕ್ರವಿರುವ ಕೀಟಗಳಿರಬಹುದು; ತನ್ನಿಂತಾನೇ ಹೊರಟುಹೋಗುತ್ತವೆ
ಅಂದುಕೊಳ್ಳುತ್ತೇನೆ. ನನ್ನ ಮನಸ್ಸಿನಲ್ಲಿ ಸ್ಟೀಫನ್ ಜೆ. ಗೋಲ್ಡ್ ಬಿದಿರು ಮತ್ತು ಸಿಕಾಡಾ (ಮಿಡಿತೆ) ಲೈಫ್ ಸೈಕ್ಲ್ ಕುರಿತು ಬರೆದ ಲೇಖನವೊಂದು ನೆನಪಿಗೆ ಬರುತ್ತದೆ. ನೀವಂದ ಕೀಟಗಳಿಗೆ ಪ್ರಾಕೃತಿಕವಾದ ಭಂಜಕಗಳು ಇದ್ದೇ ಇರುತ್ತವೆ; ಅವು ತಿಂದು ತಣಿಯಲಿ, ಮತ್ತೂ ಮಿಕ್ಕಿರಲಿ ಎಂಬ ಕಾರಣಕ್ಕೆ ಈ ಕೀಟಗಳು ವಿಪುಲವಾಗಿ ಉತ್ಪತ್ತಿಯಾಗುತ್ತಿರಬಹುದು; ಮೈಗ್ರೇಶನ್ ಇನ್ನೊಂದು ಕಾರಣವಿರಬಹುದು. ನಾನೇನೂ ಕೀಟತಜ್ಞನಲ್ಲ, ಕೇವಲ ಆಸಕ್ತ.
ಕೆ.ವಿ.ತಿರುಮಲೇಶ್