ನಾರಾಯಣ ಸ್ವಾಮಿ ನಾರಾಯಣ ಗೌಡ
18-08-2013 ರಂದು ಊರಿಗೆ ಹೋಗಿದ್ದೆ.ನಮ್ಮ ತಾಯಿಯವರ 11 ದಿನದ ತಿಥಿ ಆಚರಿಸಲು ಆಗ ನನಗೆ ಒಂದು ವಿಚಿತ್ರವಾದ ಸಂಗತಿ ನೆನಪಿಗೆ ಬಂತು.ನಾನು ಹಟ್ಟದ್ದು 15-02-1967 ಆ ದಿನ ನಮ್ಮ ತಂದೆ ಚುನಾವಣಾ ಕರ್ತವ್ಯದ ಮೇಲೆ ಮಾಲೂರು ತಾಲೂಕಿನ ನೆಲ್ಲಹಳ್ಳಿ ಎಂಬ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರಂತೆ ಮಾರನೆ ದಿನ ಬಂದು ನಾನು ಹಟ್ಟಿದ ದಿನ ಚಿತ್ರದಲ್ಲಿ ಕಾಣುವ ಹುಣೆಸೆ ಮರ ನೆಟ್ಟಿದ್ದಾರೆ.ಈಗ ನನಗೆ 45 ವರ್ಷ ಈ ಮರ ಬಹಳಷ್ಟು ವರ್ಷ ನನ್ನ ಎತ್ತರವೇ ಇತ್ತು,ನಾನು ಊರು ಬಿಟ್ಟ ನಂತರವೇ ಬೆಳೆಯಲು ಪ್ರಾರಂಬಿಸಿದಂತೆ ಕಾಣುತ್ತಿದೆ.ಕಾರಣ ಮೂರು ಬಂಢೆಗಲ್ಲುಗಳ ಮಧ್ಯೆ ಈ ಮರವನ್ನು ನೆಟ್ಟಿದ್ದಾರೆ. ಅವರು ಹೇಳುತ್ತಿದ್ದರು ಮಗನೇ ನೀನು ಓದುವ ಕಾಲಕ್ಕೆ ಈ ಮರ ದೊಡ್ಡದಾಗಿ ಬೆಳೆದಿರುತ್ತದೆ ಇದರ ನೆರಳಲ್ಲಿಯೇ ಓದಬೇಕು ಎಂದು ಸುತ್ತಲೂ ಪ್ರಕ್ರತಿ ಸೌಂದರ್ಯವಿರುವ ಜಾಗ ಓದಲು ಹೇಳಿ ಮಾಟಿಸಿದಂತಿದೆ.ನಾನು ಓದುವಾಗ ಈ ಮರ ಬೆಳೆಯಲಿಲ್ಲ.ನಾನು ಓದಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಅಯುಕ್ತನಾಗಿದ್ದೇನೆ. ನೋಡಲು ನಮ್ಮ ತಂದೆ ಇಲ್ಲ. ಅವರು ಕಾಲವಾಗಿದ್ದು 12-12-1986.
ಸಾಯುವ ದಿನ ನನ್ನನ್ನು ಕರೆದು ರಾತ್ರಿ 7 ಘಂಟೆಗೆ ಹೋಗುತ್ತಿದ್ದೇನೆ.ನಿನಗೆ ಏನು ಮಾಡದೆ ಹೋಗುತ್ತಿದ್ದೇನೆ.ಎಂದು ಹೇಳಿದ್ದು ನನಗೆ ಈಗಲೂ ಹೇಳಿದಂತಿದೆ.ನಮ್ಮ ತಾಯಿ ಕೂಡ ಅವರ ದಾರಿಯಲ್ಲಿ ನಡೆದಿದ್ದಾರೆ.ನಾವೀಗ ತಬ್ಬಲಿಗಳು.ಯಾಕೋ ತಡೆಯಲಾರದ ನೋವೊಂದು ಎದೆಯ ಗೂಡಿನಲ್ಲಿ ಕಾಡುತ್ತಿತ್ತು.ನನ್ನ ಎಲ್ಲಾ ಪ್ರೀತಿಯ ಗೆಳೆಯರ ಮುಂದೆ ನಿವೇದಿಸಿದ್ದಕ್ಕೆ ಕ್ಷಮೆ ಇರಲಿ.







0 Comments