ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಗೆ ಬಿತ್ತು ಅಕ್ಷರ

ಸಾಹಿತ್ಯದ ಶಕ್ತಿಯೇ ಅಂತದ್ದು. ದೇವನೂರ ಮಹಾದೇವ ಅವರ ಅಪರೂಪದ ಪುಸ್ತಕವು ಅವರ ಅಭಿಲಾಷೆಯಂತೆ ಹಂಚಿಹೋಗಿದ್ದ ದಲಿತ ಸಂಘರ್ಷ ಸಮಿತಿಯನ್ನು ಮತ್ತೆ ಒಂದುಗೂಡಿಸಿತು. ೨೪ವರ್ಷಗಳ ನಾಂತರ ಪ್ರಕಟವಾದ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕವನ್ನು ಬೆಂಗಳೂರು ಪುಸ್ತಕೋತ್ಸ್ವದ ಅಭಿನವ ಮಳಿಗೆಯಲ್ಲಿ ಬಾನಂದೂರು ಕೆಂಪಯ್ಯ, ಸುಬ್ಬುಹೊಲೆಯಾರ್, ಲಕ್ಷ್ಮೀನಾರಾಯಣ ನಾಗವಾರ, ಮಾವಳ್ಳಿ ಶಂಕರ್, ಸಿದ್ಧಲಿಂಗಯ್ಯ ಮುಂತಾದವರು ಕೊಳ್ಳುವುದರ ಮೂಲಕ ಬಿಡುಗಡೆಗೊಳಿಸಿದರು.
ದೇವನೂರ ಮಹಾದೇವ ತಮ್ಮ ಕತೆ ಮತ್ತು ಕಾದಂಬರಿಗಳ ಮೂಲಕ ಭಿನ್ನ ಬಗೆಯ ಆಯಾಮವನ್ನು ಕೊಟ್ಟವರು. ಈ ಪುಸ್ತಕ ಅವರು ಕಾಲದಿಂದ ಕಾಲಕ್ಕೆ ಸಮಾಜಕ್ಕೆ, ಚಳುವಳಿಗಳಿಗೆ, ರಾಜಕೀಯಕ್ಕೆ ಮತ್ತು ಸಾಂಸ್ಕೃತಿಕ ಕೆಲಸಗಳಿಗೆ ತೋರಿದ ಪ್ರತಿಕ್ರಿಯೆಯಾಗಿದೆ. ಸಾಹಿತ್ಯಕವಾಗಿ ಬೆಲೆಯುಳ್ಳ ಪುಸ್ತಕ ಇದು ಎಂದು ಬಾನಂದೂರು ಕೆಂಪಯ್ಯ ಅಭಿಪ್ರಾಯಪಟ್ತರು.
ಈ  ಬಿಡುಗಡೆಗೆ ಮಾಲಿಕೆಯ ಪ್ರದ್ಗಾನ ಸಂಪಾದಕರಾದ ಷ. ಶ್ತೆಟ್ಟರ್, ಚಂದ್ರಶೇಖರ ಕಂಬಾರ, ಒರಿಯಾದ ಕವಿ ಸೀತಾಕಾಂತ ಮಹಾಪ್ರಾತ್ರ ಮುಂತಾದವರು ಸಾಕ್ಷಿಯಾದರು.
ಟಿ. ಪಿ. ಆಶೋಕ, ವಿ. ಎಂ. ಮಂಜುನಾಥ್, ವಿ ಆರ್ ಕಾರ್ಪೆಂಟರ್, ಸಿದ್ದಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ಅಜಯಕುಮಾರ್ ಸಿಂಗ್, ಕೆ. ಇ. ರಾಧಾಕೃಷ್ಣ. ಎಲ್. ಎನ್. ಮುಕುಂದರಾಜ್, ಭಕ್ತರಹಳ್ಳಿ ಕಾಮರಾಜ್, ಎಲ್. ಹನುಮಂತಯ್ಯ ಸಹಾ ಇದ್ದರು.

 

‍ಲೇಖಕರು G

15 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading