ಎಚ್ ಆರ್ ಲೀಲಾವತಿ
ಕೆಂಪು ಸೆರಗಿನ ವಿವಿಧ ಭಾವಗಳ
ಸುತ್ತ ಹಾಕಿದ ಕಲ್ಲು ಮಣ್ಣಿನ ಅನಾರ್ಕಲಿ ಕೋಟೆಯಲ್ಲಿ
ಅಡಗಿಸಿಟ್ಟ ಪಾತಿವ್ರತ್ಯದ ಸುಡುಬೆಂಕಿ
ಸೂರ್ಯರಶ್ಮಿಯ ನೀಲಾತೀತಕಿರಣಕ್ಕೆರವಾಗಿ
ಅಗ್ನಿ ದೇವನ ಕೈಂಕರ್ಯದಲ್ಲೆ
ಮುಂಜಾನೆಯ ಗಾಲಿ ಕಾಳರಾತ್ರಿಯ ಮೀಟಿ
ತೆವಳುವವರೆಗೂ
ಕೋಟೆಮನೆ ಪೌರುಷದ ಮೀಸೆಗೆ
ತಲೆಬಾಗಿ, ಬೆನ್ನುಬಾಗಿ, ಆಳಾಗಿ, ಬಾಳು ಸವೆಸಿ
ಪಾತಿವ್ರತ್ಯದ ಪತಾಕೆ ಹಾರಿಸಿದ
ಹೆಣ್ತನದ ಬಗೆಗೆ
ಜಂಭಕೊಚ್ಚಬೇಡ ಅಜ್ಜಿ
ಇಂದು
ಮನುವಿನ ಲಕ್ಷ್ಮಣರೇಖೆ ದಾಟಿಯೂ
ಹೊಸಲಾಚೆಯ
ಸೂರ್ಯಕಿರಣದ
ಬೆತ್ತಲೆ ಬೆಳಕ ಸ್ನಾನದಲ್ಲಿ
ಮುಳುಗೆದ್ದು
ಕಾಲೇಜು, ಕಾರ್ಖಾನೆಗಳ
ಮೆಟ್ಟಿಲ ಮೆಟ್ಟಿ
ಮನುವಿನ ಹೆಗಲಿಗೆ ಹೆಗಲು ಕೊಟ್ಟು ದುಡಿದೂ
ಮುಚ್ಚಿಟ್ಟ ಬಯಕೆಗೆ ಬಯಲಾದ
ಹೆಣ್ಣಾಗಲಿಲ್ಲ
0 ಪ್ರತಿಕ್ರಿಯೆಗಳು