ಬೀಜ, ತತ್ವ, ಕೃತ, ಋಣ, ಸಾವು ಹೀಗೆ ಎರಡಕ್ಷರದ ಶೀರ್ಷಿಕೆಗಳ ಕತೆಗಳಿಂದಲೇ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡವರು ಎಂ.ವ್ಯಾಸ.ಹೆಸರು ಕೇಳಿದ ತಕ್ಷಣ ಥಟ್ಟನೆ ಒಂದೂರಿನ ಚಿತ್ರಣ ಕಣ್ಣಮುಂದೆ ಬಂದು ನಿಲ್ಲುವಷ್ಟರ ಮಟ್ಟಿಗೆ ಅವರ ಕಥೆಗಳು ವಿಶಿಷ್ಟ.
ಕಾಸರಗೋಡಿನ (ನನ್ನ ಊರು) ಸ್ವಚ್ಛಂದ ಪರಿಸರದಲ್ಲಿ ಕೂತು ಮನೋತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟ ವ್ಯಾಸ,ಮೀಡಿಯಾ ಪ್ರಪಂಚದ ಝಗಮಗದಿಂದ ಸಾಕಷ್ಟು ದೂರವೇ ಉಳಿದವರು.ಸ್ನೇಹ ಮತ್ತು ವಿಶ್ವಾಸವನ್ನು ಬದುಕಿನ ಮೌಲ್ಯಗಳಂತೆ ಕಾಯ್ದುಕೊಂಡಿದ್ದ ವ್ಯಾಸರ`ಸೀಳು’ ಕತೆ ಸಂಬಂಧಗಳಲ್ಲಿನ ಗೋಜಲು ಮತ್ತು ತಲ್ಲಣಗಳನ್ನ ಅತ್ಯಂತ ಭಾವತೀವ್ರತೆಯೊಂದಿಗೆ ಕಟ್ಟಿಕೊಡುತ್ತದೆ.
ಆ ಚಂದದ ಕಥೆ ಶುಕ್ರವಾರ ರಾತ್ರಿ 8 ಗಂಟೆಗೆ ಜನಶ್ರೀ ವಾಹಿನಿಯಲ್ಲಿ ಪ್ರಸಾರವಾಗುವ ಕಾಡುವ ಕಥೆ ಕಾರ್ಯಕ್ರಮದಲ್ಲಿ…ಮಿಸ್ ಮಾಡ್ಕೊಬೇಡಿ..
-ವೇಣುಗೋಪಾಲ್ ಶೆಟ್ಟಿ







Thank you sir,maahiti kottiddakke.
vyasa adbutha kathegararu yavudo lokakke eLedukondu hoguva avara kategalu ade gunginalliruvanthe maaduttave. kanditha miss madkolala. thank u.