ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಋತುಗಾನ’ದಿಂದ ನನ್ನ ಮೆಚ್ಚಿನ ಪುಸ್ತಕ ಫೋಟೋ ಆಲ್ಬಂ…

ಋತುಗಾನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಭಾನುವಾರ ಸಂಜೆ ಸಂಜಯನಗರದ ಬಹುರೂಪಿ ಬುಕ್ ಹಬ್ ನಲ್ಲಿ ನಡೆದ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಉತ್ತಮವಾಗಿ ವಿಭಿನ್ನವಾಗಿ ಮೂಡಿ ಬಂದು ಎಲ್ಲರಿಗೂ ಸಾಹಿತ್ಯದ ಔತಣವನ್ನು ಉಣಬಡಿಸಿತು. ವೇದಿಕೆಯ ಸಂಸ್ಥಾಪಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ಮಾತನಾಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ಕೊಡುವುದೇ ಈ ವೇದಿಕೆಯ ‌ಉದ್ದೇಶವೆಂದು ತಿಳಿಸಿದರು

ಐವರು ಬರಹಗಾರ್ತಿಯರು ತಮ್ಮ ಇಷ್ಟದ ಕೃತಿ ಕುರಿತು ಮಾತನಾಡಿದ್ದು ವಿಶೇಷವಾಗಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತ್ತು

ದೀಪಾ ಫಡ್ಕೆಯವರು ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ ಕೃತಿ ಕುರಿತು ಮಾತನಾಡಿದರು

ರಂಜಿತಾ ರಾಂಕುಮಾರ್ ಸೇತುರಾಂ ಅವರ ದಹನ ಕುರಿತು ಮಾತನಾಡಿದರು

ಶೈಲಾ ಜಯಕುಮಾರ್ ಅವರು ಕುಂ. ವಿ ಅವರ ಗಾಂಧಿ ಕ್ಲಾಸ್ ಕುರಿತು ಮಾತನಾಡಿದರು

ಜಯಶ್ರೀ ರಾಜು ಅವರು ತೇಜಸ್ವಿಯವರ ಚಿದಂಬರ ರಹಸ್ಯ ಕುರಿತು ಮಾತನಾಡಿದರು

ಪವಿತ್ರ ಎಂ ಅವರು ಬಂಗಾಳಿ ಮೂಲದ ಶೃಂಖಲೆಯ ಝೇಂಕಾರ ಕುರಿತು ಅಚ್ಚುಕಟ್ಟಾಗಿ ತಿಳಿಸಿಕೊಟ್ಟರು

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಲನಚಿತ್ರ ನಟರಾದ ಶ್ರೀನಿವಾಸ ಪ್ರಭು ಅವರು ಮಾತನಾಡಿ ಐವರೂ ಬರಹಗಾರ್ತಿಯರನ್ನು ಅಭಿನಂದಿಸಿ, ಋತುಗಾನ ವೇದಿಕೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು

ಮತ್ತೋರ್ವ ಅತಿಥಿ ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿಯಾದ ಎಚ್ ಎನ್ ಆರತಿಯವರು ಕಾರ್ಯಕ್ರಮದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರ ಕವಿತೆಯನ್ನು ವಾಚಿಸಿದರು

ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ನಲ್ಲತಂಬಿಯವರು ಭಾಗವಹಿದವರನ್ನೆಲ್ಲಾ ಅಭಿನಂದಿಸಿದರು

ಪ್ರಸಾದ್ ಅವರ ಭಾವಗೀತೆ, ಶ್ವೇತಾ ಪ್ರಕಾಶ್ ಅವರ ನಿರೂಪಣೆ, ಶ್ರೀಕಾಂತ ಪತ್ರೆಮರ ಅವರ ಸ್ವಾಗತ, ಮಹಾಂತೇಶ ಮಾಗನೂರು ಅವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು

ಒಟ್ಟಾರೆಯಾಗಿ ಸುಂದರ ಸುಸಜ್ಜಿತ ಕಾರ್ಯಕ್ರಮ

‍ಲೇಖಕರು Admin

12 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading