ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಪ್ರತಿವರ್ಷ ನೀಡುವ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಮಹತ್ವದ ಲೇಖಕಿ ಹೈದ್ರಾಬಾದ್ ನ ಜೀಲಾನಿ ಬಾನೊ (83 ವರ್ಷ) ಹಾಗೂ ನೊಯ್ಡಾದ ರತನ್ ಸಿಂಗ್ (91 ವರ್ಷ) ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರತಿಷ್ಠಾನದ ಅಧ್ಯಕ್ಷ ಪ್ರೊ ಹಂಪನಾ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆಯನ್ನು ಮಾಡಿತು.
ಆಧುನಿಕ ಉರ್ದು ಸಾಹಿತ್ಯದ ಬನಿಯನ್ನು ತಮ್ಮ ಕಥೆ, ಕಾದಂಬರಿ ಅನುವಾದಗಳ ಮೂಲಕ ಹೆಚ್ಚಿಸಿದ ಕಾರಣಕ್ಕಾಗಿ ಈ ಇಬ್ಬರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಕುವೆಂಪುರವರ ಜನ್ಮೋತ್ಸವದಂದು ಕುಪ್ಪಳಿಯಲ್ಲಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪ್ರದಾನ ಮಾಡುವರು.
ಈ ಪುರಸ್ಕಾರವು ಇಲ್ಲಿಯವರೆಗೆಮಲಯಾಳಂ, ಹಿಂದಿ, ಮರಾಠಿ, ಕನ್ನಡದ ತಲಾ ಒಬ್ಬೊಬ್ಬ ಲೇಖಕರಿಗೆ ಹಾಗೂ ಅಸ್ಸಾಮಿಯ ಇಬ್ಬರುಲೇಖಕರಿಗೆ ಲಭಿಸಿರುತ್ತದೆ.







0 Comments