ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಉಗಾಂಡ’ ಸಾಂಸ್ಕೃತಿಕ ಕಥನ..

ಡಿ ಮಂಗಳಾ ಪ್ರಿಯದರ್ಶಿನಿ ಅವರ ಪ್ರವಾಸ ಕಥನ ‘ನಾ ಕಂಡ ಉಗಾಂಡ’

‘ಸಪ್ನ ಬುಕ್ ಹೌಸ್’ ಈ ಪುಸ್ತಕವನ್ನು ಪ್ರಕಟಿಸಿದೆ.

ಡಿ ಮಂಗಳಾ ಪ್ರಿಯದರ್ಶಿನಿ

ಸುಮಾರು ಮೂವ್ವತ್ತೈದು ದೇಶಗಳನ್ನು ಸುತ್ತಿದ್ದರೂ, ಅಪರೂಪದ ಆಫ್ರಿಕಾ ಖಂಡ ನನಗೆ ಅನೇಕ ಕಾರಣಗಳಿಂದ ಪ್ರಿಯವಾದದ್ದು .ಅಮೇರಿಕಾ ದೇಶವನ್ನು ಬರೋಬರಿ ಹನ್ನೆರಡು ಬಾರಿ ನೋಡಿದ್ದರೂ, ಈವರೆಗೆ ಆ ದೇಶವನ್ನು ಕುರಿತಂತೆ ಪ್ರವಾಸ ಕಥನ ಬರೆದಿಲ್ಲ. ಟೂರಿಸಂ ಸೌಲಭ್ಯವಿರುವ ಅಮೇರಿಕಾ, ಯುರೋಪ್, ಸಿಂಗಾಪುರ, ಮಲೇಷಿಯಾ , ಕೆನಡಾ, ಜಪಾನ್, ಚೀನಾ, ಶ್ರೀಲಂಕಾ, ಈಜಿಪ್ಟ್ – ಮುಂತಾದ ದೇಶಗಳಿಗೆ ಪ್ರವಾಸ ಮಾಡುವುದು ಸುಲಭ. ನಾನು ಈ ನಾಡುಗಳಲ್ಲಿ ಪ್ರವಾಸ ಮಾಡಿ ಬಂದಿದೇದ್ದೇನೆ.

ಆಫ್ರಿಕಾ ದೇಶಗಳಿಗೆ ಟೂರಿಸಂ ಇಲ್ಲ. ನಾವೇ ಸುತ್ತಿ ಬರಲು ಬಹಳಷ್ಟು ಖರ್ಚು- ವೆಚ್ಚ. ನನಗೆ ಆಫ್ರಿಕಾ ದೇಶಗಳಿಗೆ ಹೋಗಿ ತಿಂಗಳಾನುಗಟ್ಟಲೆ ಪ್ರವಾಸಿ ಪರಿಧಿಯನ್ನು ಮೀರಿ ಉಳಿದುಕೊಳ್ಳುವ ಅಪರೂಪದ ಅವಕಾಶಗಳು ದೊರೆತವು. ಈ ಹಿನ್ನೆಲೆಯಲ್ಲಿ ನನ್ನ ‘ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು‘ – ತಾಂಜಾನಿಯಾ ಪ್ರವಾಸ ಕಥನ ಮೂಡಿ ಬಂದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಆಫ್ರಿಕಾ ದೇಶ ಉಗಾಂಡ, ನನಗೆ ಅಪರೂಪದ ಅನುಭವಗಳನ್ನು ನೀಡಿದೆ. ಅದೇ ‘ನಾಕಂಡ ಉಗಾಂಡ‘, ಪ್ರವಾಸ ಕಥನವಾಗಿ ಮೂಡಿ ಬಂದಿದೆ. ಇದೊಂದು ವೈವಿಧ್ಯಮಯ ನಾಡು, ವೈಪರಿತ್ಯಗಳ ನಾಡು, ವಿರೋಧಾಭಾಸಗಳ ನಾಡು.

ಹನ್ನೊಂದು ರಾಷ್ಟಗಳಲ್ಲಿ ಹರಿದು ಜನತೆಯ ಹಸಿವನ್ನು ಹಿಂಗಿಸಿ ಸದಾ ಸೃಷ್ಟಿಶೀಲ ನದಿಯಾಗಿ ಹರಿಯುವ ಮಹಾನದಿ ನೈಲ್ ಗಂಗೆ ಹುಟ್ಟುವ ನಾಡಾಗಿ, ‘ಮನುಷ್ಯನ ರಕ್ತ ಉಪ್ಪುಪ್ಪು‘ ಎಂದ ನರಭಕ್ಷಕ ಈದೀ ಅಮೀನನಂಥ ಕ್ರೂರಿಯ ಅಡಳಿತಕ್ಕೆ ಸಿಕ್ಕು ನುಚ್ಚು ನೂರಾದ ಉಗಾಂಡ ಅದೆಷ್ಟೋ ನಿಗೂಢ, ಕ್ರೂರ, ಅಮಾನವೀಯ ಆಚರಣೆಗಳ ತವರೂರು. ಈ ಕೃತಿ ಕ್ವೀನ್ ಎಲಿಜಬತ್ ರಾಷ್ರೀಯ ಉದ್ಯಾನವನ, ಭೂ ಮಧ್ಯ ರೇಖೆ, ಪರ್ವತ ಗೊರಿಲ್ಲ ರಾಷ್ಟ್ರೀಯ ಉದ್ಯಾನವನ, ಕ್ರೇಟರ್ ಕುಳಿಗಳು, ಸಾಗರದಂಥ ವಿಕ್ಟೇರಿಯಾ ಸರೋವರ…”.

ಈ ನಾಡಿನ ಅನೇಕ ವಿಶೇಷತೆಗಳ ಮೇಲೆ ಬೆಳಕು ಚೆಲ್ಲುವ ಉಗಾಂಡ ಸಂಸ್ಕೃತಿಯ ಕಥಾನಕವಾಗಿದೆ ನಾನ್ನೂರಾ ಹದಿನಾಲ್ಕು ಪುಟಗಳ ಉಗಾಂಡ ಸಾಂಸ್ಕೃತಿಕ ಕಥನ, ಸಪ್ನ ಬುಕ್ ಹೌಸ್ ನಿಂದ, ಚ.ಹ ರಘುನಾಥ ಅವರ ಬೆನ್ನುಡಿಯೊಂದಿಗೆ ಪ್ರಕಟಗೊಂಡಿದೆ ಎಂದು ತಿಳಿಸಲು ಸಂತಸವಾಗಿದೆ.

‍ಲೇಖಕರು Admin

8 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading