ಅಶೋಕವರ್ಧನ ಜಿ.ಎನ್
ಸಗಟು ಖರೀದಿ, ಪುಸ್ತಕೋದ್ಯಮದ ಸರ್ಕಾರೀಕರಣದ ವಿರುದ್ಧ ನಾನು ಅಷ್ಟುದ್ದಕ್ಕೆ ಹೋರಾಡಿಕೊಂಡು ಬಂದಾಗ “ನಮಗೆ ಪ್ರಶಸ್ತಿ ಬಂದರೆ, ನಮಗೆ ಪ್ರಕಾಶಕ ಸಿಕ್ಕರೆ (ಅವನು ಪುಸ್ತಕವನ್ನೇನಾದರೂ ಮಾಡಿಕೊಳ್ಳಲಿ), ಬದಲಾದ ಕಾಲಕ್ಕೆ ‘ರಾಜಮನ್ನಣೆ’” ಎಂದು ನೂರೆಂಟು ನೆಪಗಳ ಮರೆಯಲ್ಲಿ ಲಾಭ ಗಿಂಜಿದವರೆಲ್ಲಾ ಈಗ ಹಲ್ಲು ಮಸೆಯುವುದು ನೋಡಿ ನನಗೆ ನಗೆಯು ಬರುತಿದೆ.
ಸರಕಾರದ ಸಹಾಯದಲ್ಲೇ ಸ್ವಂತ ಖಾಸಗಿ ಸಂಸ್ಥೆಯ ಸ್ಮರಣ ಸಂಪುಟಗಳನ್ನು ಭಾರೀ ಬೆಲೆಯಲ್ಲಿ ಪ್ರಕಟಿಸಿ, ನಿಜ ಓದುಗರಿಗೆ ಮುಟ್ಟಿಸಬಲ್ಲ ಬಿಡಿ ಮಾರುಕಟ್ಟೆಯನ್ನು (ಪುಸ್ತಕ ವ್ಯಾಪಾರಿಗಳನ್ನು) ಧಿಕ್ಕರಿಸಿ ಮತ್ತೆ ಸರಕಾರಕ್ಕೇ ಮಾರಿದ (ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರು!, out sourcing ಇನ್ನೂ ‘ಮರ್ಯಾದೆ/ಮಾನ್ಯತೆ’ಯನ್ನೇ ಪಡೆಯದ ಕಾಲಕ್ಕೆ ಊರೂರುಗಳಲ್ಲಿ ಪುಸ್ತಕ ಮೇಳಗಳನ್ನು ‘ಯಶಸ್ವಿಯಾಗಿ’ ನಡೆಸಿದ ಜಾಣರ, ಫಲಾನುಭವಿಗಳ (ಕೆಲವು ಮಂದಿ ಕೇವಲ ಇತಿಹಾಸಕ್ಕೆ ಮಣಿದು ಮುಗ್ಧವಾಗಿಯೂ ಹೆಸರು ಕೊಟ್ಟವರಿರಬಹುದು) ಈ ಕೂಟವನ್ನು ಪ್ರಶ್ನಿಸುವುದಲ್ಲ.
ನಂಬಿ ಹಣ ಕೊಟ್ಟ/ ಕೊಡುವ (ಸರಕಾರವೂ ಸೇರಿದಂತೆ) ಪ್ರಾಯೋಜಕರನ್ನು ಪ್ರಶ್ನಿಸಿ, ಈಗಲೂ ಸ್ವಾರ್ಥ ಮರೆತು ಈ ಸಮ್ಮೇಳನವನ್ನು ಎಲ್ಲರೂ ಬಹಿಷ್ಕರಿಸಿ.
ಈ ಸಮ್ಮೇಳನವನ್ನು ಎಲ್ಲರೂ ಬಹಿಷ್ಕರಿಸಿ..





0 Comments