ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಪ್ರಶಸ್ತಿ ಪ್ರಕಟ: ನಟರಾಜ ಹುಳಿಯಾರ್ ಗೆ ಗೌರವ ಪ್ರಶಸ್ತಿ

ಜ ನಾ ತೇಜಶ್ರೀ, ಸುಧಾ ಚಿದಾನಂದ ಗೌಡ, ಎಂ ಆರ್ ದತ್ತಾತ್ರಿ,

ಜಿ ಎನ್ ಮೋಹನ್, ಪೂಜಾರ್ ಕೃತಿಗಳಿಗೆ `ಅಮ್ಮ ಪ್ರಶಸ್ತಿ’

 

ಸೇಡಂನಲ್ಲಿ ನ.26ಕ್ಕೆ ಪ್ರಶಸ್ತಿ ಪ್ರದಾನ

ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ಕಥೆಗಾರ್ತಿ ಸುಧಾ ಚಿದಾನಂದಗೌಡ, ಕವಯತ್ರಿ ಜ.ನಾ.ತೇಜಶ್ರೀ, ಸಂಶೋಧಕ ಡಾ.ವಿ.ಜಿ.ಪೂಜಾರ್, ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಹಾಗೂ ಹಿರಿಯ ಲೇಖಕ, ಪತ್ರಕರ್ತ ಜಿ.ಎನ್.ಮೋಹನ್ ಅವರ ಕೃತಿಗಳು ಆಯ್ಕೆಯಾಗಿವೆ

ಜಿ.ಎನ್.ಮೋಹನ್ ಅವರ ಅನುವಾದ `ಬರ ಅಂದ್ರೆ ಎಲ್ಲರಿಗೂ ಇಷ್ಟ’,

ಸುಧಾ ಚಿದಾನಂದಗೌಡ ಅವರ ಕಥಾ ಸಂಕಲನ `ಕನ್ನಡಿಯನ್ನು ನೋಡಲಾರೆ’

ಜ.ನಾ.ತೇಜಶ್ರೀ ಅವರ ಕಾವ್ಯ `ಅವನರಿವಲ್ಲಿ’,

ಡಾ.ವಿ.ಜಿ.ಪೂಜಾರ್ ಅವರ ಸಂಶೋಧನಾ ಕೃತಿ `ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯ ತತ್ವಪದಕಾರರ ಸ್ಮಾರಕಗಳು’ ಹಾಗೂ

ಎಂ.ಆರ್.ದತ್ತಾತ್ರಿ ಅವರ ಕಾದಂಬರಿ `ದ್ವೀಪವ ಬಯಸಿ’ ಕೃತಿಗಳನ್ನು 12 ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ಸ್ಮರಣಿಕೆ, ಪ್ರಮಾಣ ಪತ್ರವನ್ನು ಒಳಗೊಂಡಿದೆ.

ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಮ್ಮ ಪ್ರತಿಷ್ಠಾನದ ತಿಳಿಸಿದೆ.

ಅಮ್ಮ ಗೌರವ ಪುರಸ್ಕಾರ :

ಕಳೆದ ಎರಡು ವರ್ಷಗಳಿಂದ ಆರಂಭಗೊಂಡ `ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿಯೂ ನಾಡು-ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಸತ್ಕರಿಸಲಾಗುತ್ತದೆ.

ಈ ಬಾರಿಯ ಅಮ್ಮ ಗೌರವ ಪುರಸ್ಕಾರಕ್ಕೆ, ಹಿರಿಯ ಲೇಖಕ ನಟರಾಜ್ ಹುಳಿಯಾರ್,

ಹಿರಿಯ ಪತ್ರಕರ್ತ ಶ್ರೀಕಾಂತಾಚಾರ್ಯ ಮಣೂರ,

ಲೇಖಕಿ ಡಾ.ವಸುಂಧರಾ ಭೂಪತಿ,

ಗಡಿನಾಡಿನಲ್ಲಿ ಕನ್ನಡದ ಏಳಿಗೆಗೆ ಶ್ರಮಿಸುತ್ತಿರುವ ಸಿದ್ದಪ್ಪ ತಳ್ಳಳ್ಳಿ

ಹಾಗೂ ಪ್ರಕಾಶನದ ಮೂಲಕ ಈ ಭಾಗಕ್ಕೆ ಪ್ರಾಶಸ್ತ್ಯ ತಂದುಕೊಟ್ಟ ಬಸವರಾಜ ಕೋನೆಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

‍ಲೇಖಕರು G

15 November, 2012

15 Comments

  1. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    “ಅಮ್ಮ ಪ್ರಶಸ್ತಿ ಪರಸ್ಕೃತ ಎಲ್ಲ ಸಾಧಕರಿಗೆ ಅಭಿನಂದನೆಗಳು.”

  2. malathi S

    wow Congrats to all the winners!!
    🙂
    malathi S

  3. ವಸುಧೇಂದ್ರ

    ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು. ಲೇಖಕರಿಗೆ ಅವರ ಪುಸ್ತಕ ಮಗುವಿದ್ದಂತೆ. ’ಅಮ್ಮ’ ಪ್ರಶಸ್ತಿ ಪಡೆದ ಎಲ್ಲರೂ ನೂರು ಮಕ್ಕಳ ತಾಯಿಯರಾಗಲಿ.

  4. ಬಸೂ

    ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು…. ಮೋಹನ, ಸುಧಾ, ತೇಜಶ್ರೀ ಅವರ ಪುಸ್ತಕಗಳನ್ನು ಓದಿರುವೆ.. ಪ್ರಸಕ್ತ ವರ್ಷದ ಅತ್ಯುತ್ತಮ ಕೃತಿಗಳಾಗಿ ನನಗೆ ಕಂಡಿವೆ

  5. ಚಂದಿನ

    ಅಭಿನಂದನೆಗಳು…

  6. shivashankar

    Congratulations to all!
    May your tribe grow!

  7. Gopaal Wajapeyi

    ಇದು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಪ್ರಶಸ್ತಿ ವಿಜೇತರಿಗೆಲ್ಲ ಹಾರ್ದಿಕ ಅಭಿನಂದನೆಗಳು.

  8. Basavanneppa.P.Kambar

    ellarigu abhinandanegalu

  9. bmbasheer

    ಎಲ್ಲ ಸಾಧಕರಿಗೂ ಅಭಿನಂದನೆಗಳು.

  10. Sowmya

    ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು!

  11. arun joladkudligi

    ಅಮ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು,ಈ ಪ್ರಶಸ್ತಿ ಅವರ ಬದುಕು ಬರಹದಲ್ಲಿ ಹೊಸ ಚೈತನ್ಯ ತರಲಿ.

  12. Tharakeshwar

    abhinandanegalu

  13. viddullata

    inthaddondu pratishtita prashasti sandiruvudakke abhinandanegalu. dhanyateya bhava moodide.

  14. mmshaik

    congrates…

  15. manjunatha dasanapura

    ಪ್ರಶಸ್ತಿ ಪಡೆದ ಎಲ್ಲಾರಿಗೂ ಅಭಿನಂದನೆಗಳು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading