ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ರೋಗ ಈಗ ಧಾರವಾಡಕ್ಕೂ ಹರಡಿದೆ: ಎಚ್ ಎಸ್ ಆರ್

ಕೃಪೆ: ಲಡಾಯಿ ಪ್ರಕಾಶನ

ಪ್ರೀತಿಯ ಬಸು ಅವರಿಗೆ,
ನಮಸ್ಕಾರ. ನೀವು ಕಳಿಸಿದ ಪತ್ರಗಳನ್ನು ಓದಿದೆ. ಹಾಗೆಯೇ ‘ಧಾರವಾಡ-ಸಾಹಿತ್ಯಸಂಭ್ರಮ’ದ ವೆಬ್ ಸೈಟಿಗೆ ಹೋಗಿ ಅಲ್ಲಿ ನೀಡಿರುವ ವಿವರಗಳನ್ನೂ ಗಮನಿಸಿದೆ. ನಾನು ಅದರಲ್ಲಿ ಭಾಗವಹಿಸುತ್ತಿಲ್ಲ. ತಾತ್ವಿಕವಾದ ಕಾರಣಗಳಂತೆಯೇ ವೈಯಕ್ತಿಕವಾದ ಕಾರಣಗಳೂ ಇದ್ದವು. ನೀವು ಕೊಟ್ಟಿರುವ ವಿವರಗಳನ್ನು, ಕಟ್ಟುಪಾಡುಗಳನ್ನು ಓದಿದ ನಂತರ ಆ ತೀರ್ಮಾನ ಇನ್ನಷ್ಟು ಗಟ್ಟಿಯಾಯಿತು.
ಮೊದಲನೆಯದಾಗಿ ಸಂವೇದನಶೀಲರೆಂದು ಕೊಳ್ಳುವ ಸಾಹಿತಿಗಳು ಸಂಭ್ರಮ ಪಡುವ ವಾತಾವರಣ ಈಗ ಖಂಡಿತವಾಗಿಯೂ ಇಲ್ಲ. ಪ್ರಾಯಶಃ ಯಾವಾಗಲೂ ಇರಲಿಲ್ಲ. ಇಂಡಿಯನ್-ಇಂಗ್ಲಿಷ್ ಲೇಖಕರಿಗೆ ಸೀಮಿತವಾಗಿದ್ದ ಈ ರೋಗವು ಬೆಂಗಳೂರು-ಧಾರವಾಡಗಳಿಗೂ ಹರಡಿರುವುದು ಸಂತೋಷ ಪಡುವ ಸಂಗತಿಯಲ್ಲ.
ಬಿಜಾಪುರದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಬಗೆಗೂ ನಾನು ಹೀಗೆಯೇ ಯೋಚಿಸುವವನು. ಅದೂ ಬಿಳಿಯಾನೆಯೇ. ಸರ್ಕಾರದ, ಎಂದರೆ ಜನರ ಹಣವನ್ನು ಇಂಥದಕ್ಕೆ ಖರ್ಚು ಮಾಡಬಾರದು. ಧರ್ಮಮೂಲವಾದ ಅಥವಾ ವ್ಯಾಪಾರಮೂಲವಾದ ಸ್ಪಾನ್ಸರ್ ಶಿಪ್ ಕೂಡ ಈ ಬಗೆಯದೇ.
ನಿಮ್ಮ ಪ್ರತಿಭಟನೆಗಳು ಸರಿಯಾಗಿವೆ. ನಿಮ್ಮಂತೆ ಗಂಭೀರವಾಗಿ ಆಲೋಚಿಸುವ, ಕಮಿಟೆಡ್ ಆದ ಜನ ಕೂಡ ಸಾಹಿತ್ಯವನ್ನು ಕುರಿತ ಚರ್ಚೆಗಳಲ್ಲಿ ತೊಡಗಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವೈಯಕ್ತಿಕವಾಗಿ ಮತ್ತು ಸಾಮುದಾಯಿಕವಾಗಿ. ಹಾಗೆಯೇ ಇದನ್ನು ವಿರೋಧಿಸುವವರೆಲ್ಲರೂ ಆಟೊಮ್ಯಾಟಿಕ್ ಆಗಿ ಹಿರೋಗಳಾಗಿ ಬಿಡುವುದಿಲ್ಲ. ಈ ವಿಷಯಗಳನ್ನು ಎಲ್ಲರ ಗಮನಕ್ಕೆ ತಂದಿದ್ದಕ್ಕೆ ವಂದನೆಗಳು.
ಪ್ರೀತಿಯೊಂದಿಗೆ
ನಿಮ್ಮ
ಎಚ್.ಎಸ್.ಆರ್.
 

‍ಲೇಖಕರು G

18 January, 2013

4 Comments

  1. ಹನುಮಂತ

    ಆಹ್ವಾನ ಸ್ವರೂಪದ ಪತ್ರ ನನಗೂ ಬಂದಿದೆ. ನಾನೂ ಒಬ್ಬ ಶಿಬಿರಾರ್ಥಿಯಾಗಿ ಭಾಗವಹಿಸಲಿ ಎಂಬ ನಿರೀಕ್ಷೆ ಸಂಘಟಕರಲ್ಲಿ ಇದ್ದಂತೆ ತೋರಿತು. ಅದರಲ್ಲಿಯೂ ವಿದ್ಯಾರ್ಥಿಗಳಿಗೆ ಸ್ವಲ್ಪ ರಿಯಾಯಿತಿಯೂ ಇದೆಯಂತೆ. ಹಲವಾರು ಸಾಹಿತಿಗಳ ಖಾಸಗಿ ಬದುಕಿನ ಸಂಗತಿಗಳನ್ನು ನಿಕಟವಾಗಿ ನೋಡುತ್ತಿರುವ ನನಗೆ ಇದು ಸಂಭ್ರಮಪಡುವ ಸಾಹಿತ್ಯ ವಾತಾವರಣ ಅನ್ನಿಸಲಿಲ್ಲ.

  2. ಮಹಾಂತೇಶ ನವಲಕಲ್

    ಮಾನ್ಯರೆ
    ಮಾರಟ ಮತ್ತು ಮಾರುಕಟ್ಟೆ ಎಂಬ ಶಬ್ದಗಳು ಎಲ್ಲಿಯವರೆಗೆ ತಮ್ಮ ಕಭಂಧಬಾಹುಗನ್ನು ಚಾಚಿಕೊಂಡಿವೆ ಎಂದರೆ ವಚನ ಚಳುವಳಿ ಮತ್ತು ಅನೇಕ ಪ್ರಗತಿಪರ ಚಳುವಳಿಗಳು ಹೇಗೆ ಜನ್ಮ ತಾಳಿದವು ಎನ್ನುವದನ್ನು ತಿಳಿದುಕೊಳ್ಳಬೇಕಾಗಿದೆ
    ಮಹಾಂತೇಶ ನವಲಕಲ್.

  3. ಮಹಾಂತೇಶ ನವಲಕಲ್

    ವಚನ ಚಳುವಳಿಗಳಲ್ಲಿ ಬರುವ ದಾಸೋಹ ಭಾಗೀದಾರರಿಗೆ ಪ್ರಸಾದದ ಕಲ್ಪನೆ ಮತ್ತು ಸಾಹಿತ್ಯ ರಚನೆಗೆ ಆರ್ಥಿಕತೆಯೆಂಬುದು ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಶರಣ ಸಮೋಹ ಅವರಿಗೆ ಉಚಿತ ಪ್ರಸಾದ ಮತ್ತು ವಸತಿಯನ್ನು ಅನುವು ಮಾಡಿಕೊಟ್ಟಿತ್ತು.ಅದಕ್ಕಾಗಿ ಆನೇಕ ಕೆಳವರ್ಗದ ವಚನಕಾರರು ವಚನಗಳನ್ನು ರಚಿಸಿದರು,ಇದು ಕೊನೆಯ ಪಕ್ಷ ಕಲ್ಬುರ್ಗಿಯಂಥವರಿಗೆ ಅರ್ಥವಾಗಬೇಕಿತ್ತು.

  4. ಪಂಡಿತಾರಾಧ್ಯ ಮೈಸೂರು

    ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ನಡೆಯುವುದೆಂದು ತಿಳಿದು ಸಂತೋಷಪಟ್ಟಿದ್ದೆ. ಅವರ ವ್ಯವಸ್ಥೆಯ ವಿವರಗಳು ಕನ್ನಡಿಗರಿಗೆ ಅಪರಿಚಿತವಾದವು. ಭಾಗವಹಿಸುವವರಿಗೆ ಮುಜುಗರವಾಗದಂತೆ ವ್ಯವಸ್ಥೆ ಮಾಡಬಹುದಿತ್ತು. ಇದು ಮುಂದೆ ಇಂಥ ಸಂಭ್ರಮಗಳನ್ನು ನಡೆಸಬಯಸುವವರಿಗೆ ಎಚ್ಚರಿಕೆಯಂತಾದುದು ಇದರ ಗುಣಾತ್ಮಕ ಅಂಶವೆಂದುಕೊಳ್ಳಬಹುದು. ಮನೋಹರ ಗ್ರಂಥಮಾಲೆ ಚಂದಾದಾರರಿಗೂ ಮಾಹಿತಿಗಾಗಿ ಕಾರ್ಯಕ್ರಮ ವಿವರಗಳನ್ನು ತಿಳಿಸದಷ್ಟು ವಿಚಕ್ಷಣೆ ಬಳಸಿರುವುದು ಮೆಚ್ಚುವಂಥ ಇನ್ನೊಂದು ಅಂಶ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading