ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಪಟ್ಟಿಗೆ ನೀವೂ ಹೆಸರುಗಳನ್ನು ಪೋಣಿಸಿ..’ – ಕೆ ವಿ ತಿರುಮಲೇಶ್

ನಿಮ್ಮ ಲೆಕ್ಕದಲ್ಲಿ ನಾವಿಲ್ಲ?

ಕೆ ವಿ ತಿರುಮಲೇಶ್

ಕನ್ನಡ ಓದುಗರು (ಅವರಲ್ಲಿ ಕೆಲವರು ಸ್ವತಃ ಲೇಖಕರು) ಯಾಕೋ ಕನ್ನಡ ಕವನ ಸಂಕಲನಗಳನ್ನು ಕಡೆಗಣಿಸುತ್ತಿರುವಂತೆ ಅನಿಸಿ ಬೇಸರವಾಗುತ್ತಿದೆ. ಕಾವ್ಯಪ್ರಕಾರವನ್ನು ಕಡೆಗಣಿಸುವ ಸಂಸ್ಕೃತಿಯಾದರೂ ಎಂತಹ ಸಂಸ್ಕೃತಿ? ಇತರರಿಗೆ ಮಾದರಿಯಾಗಬೇಕಾದವರೇ ಹೀಗೆ ಮಾಡಿದರೆ ಇನ್ನು ಯಾರು ಗತಿ? ಯಾವುದೋ ಜಪಾನೀ ಅಥವಾ ಸ್ಪ್ಯಾನಿಷ್ ಹೆಸರು ಕೇಳಿದರೆ ಥ್ರಿಲ್ ಆಗುವ ನಾವು ನಮ್ಮವರನ್ನು ಕಂಡರೆ ಮೂಗು ಮುರಿಯುತ್ತೇವೆಯೇ?!
ಆದರೂ ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ಆಧುನಿಕ ಕನ್ನಡ ಮನಸ್ಸನ್ನು ರೂಪಿಸುವುದರಲ್ಲಿ ಕನ್ನಡ ಕವಿಗಳಿಗೂ ಒಂದು ಸ್ಥಾನವಿದೆ ಎಂದು ನಾನು ನಂಬಿದ್ದೇನೆ. ಆದ್ದರಿಂದ ನೆನಪಿನಲ್ಲಿರಲಿ ಎನ್ನುವುದಕ್ಕೆ, ಆಧುನಿಕ ಕಾವ್ಯ ಪ್ರಕಾರದಲ್ಲಿನ ಕೆಲವು ಕವಿಗಳ ಮಾದರಿ ಕೃತಿಗಳ ಪಟ್ಟಿಯನ್ನು ತಯಾರಿಸಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ. ನನ್ನ ತೀರಾ ಚಿಕ್ಕ ಸಂಗ್ರಹ ಮತ್ತು ಅದಕ್ಕಿಂತಲೂ ಚಿಕ್ಕ ನೆನಪಿನ ಮಿತಿಯೊಳಗೆ ತಯಾರಿಸಿದ ಪಟ್ಟಿ ಇದು — ಖಂಡಿತಾ ಪರಿಪೂರ್ಣವಲ್ಲ. ಹಲವರ ಹೆಸರುಗಳು ಬಿಟ್ಟು ಹೋಗಿರುತ್ತವೆ. ಅದಕ್ಕಾಗಿ ಕ್ಷಮೆಯಿರಲಿ.
ನನ್ನ ನೆನಪಿಗೆ ಬಂದ ಕವಿಗಳ ಒಂದೋ ಎರಡೋ ಕವನ ಸಂಕಲನಗಳನ್ನು ಮಾತ್ರ ಇಲ್ಲಿಕೊಟ್ಟಿದ್ದೇನೆ–ಅವರ ಇತರ ಸಂಕಲನಗಳೂ ಓದಲು ಯೋಗ್ಯ. ಅಲ್ಲದೆ ಇಲ್ಲಿ ಹೆಸರಿಸಿದ ಕೃತಿಗಳೇ ಆಯಾ ಕವಿಗಳ ಶ್ರೇಷ್ಠ ರಚನೆಗಳು ಎಂದು ಕೂಡಾ ಭಾವಿಸಬಾರದು.ಕೆಲವರ ಈಚಿನ ಕೃತಿಗಳ ಕುರಿತು ನನಗೆ ಮಾಹಿತಿಯಿಲ್ಲ. ಆಧುನಿಕ ಕನ್ನಡ ಕಾವ್ಯಕ್ಷೇತ್ರದ ಒಂದು ಚಿಕ್ಕ ಸ್ಯಾಂಪಲ್ ಇದು ಎಂದು ತಿಳಿದುಕೊಂಡರೆ ಸಾಕು.

***

 
ಗೋಪಾಲಕೃಷ್ಣ ಅಡಿಗ : ಚಂಡೆಮದ್ದಳೆ/ಭೂಮಿಗೀತ
ಎ. ಕೆ. ರಾಮಾನುಜನ್ : ಹೊಕ್ಕುಳಲ್ಲಿ ಹೂವಿಲ್ಲ
ಗಂಗಾಧರ ಚಿತ್ತಾಲ : ಹರಿವ ನೀರಿದು / ಮನುಕುಲದ ಹಾಡು
ಜಿ. ಎಸ್. ಶಿವರುದ್ರಪ್ಪ : ನನ್ನ -ನಿನ್ನ ನಡುವೆ
ಕೆ. ಎಸ್. ನರಸಿಂಹಸ್ವಾಮಿ : ಗಡಿಯಾರದಂಗಡಿಯ ಮುಂದೆ
ವಿ. ಜಿ. ಭಟ್ಟ : ಮರಳಿ ಬಂದ ಕವಿತೆ
ರಾಮಚಂದ್ರಶರ್ಮ : ಏಳು ಸುತ್ತಿನ ಕೋಟೆ/ ಹೇಸರಗತ್ತೆ
ಸುಮತೀಂದ್ರನಾಡಿಗ : ಪಂಚಭೂತಗಳು
ಪೂರ್ಣಚಂದ್ರತೇಜಸ್ವಿ : ಬೃಹನ್ನಳೆ ಸೋಮುವಿನ ಸ್ವಗತ ಲಹರಿ
ಎಚ್. ಎಮ್. ಚನ್ನಯ್ಯ : ಆಮೆ
ಕೆ. ಎಸ್. ನಿಸಾರ್ ಅಹಮದ್ : ಸಂಜೆ ಐದರ ಮಳೆ
ಚಂದ್ರಶೇಖರ ಕಂಬಾರ : ತಕರಾರಿನವರು
ಸಿದ್ಧಲಿಂಗ ಪಟ್ಟಣಶೆಟ್ಟಿ : ಔರಂಗಜೇಬ
ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ : ಅರುಣ ಗೀತ
ವೈ. ಎನ್. ಕೆ. : ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ?
ಎಂ. ಅಕಬರ ಆಲಿ : ತಮಸಾ ನದಿ ಎಡಬಲ
ಬಿ. ಎ. ಸನದಿ : ಸೂರ್ಯ ಪಾನ
ಪಿ. ಲಂಕೇಶ್ : ಬಿಚ್ಚು
ಚಂದ್ರಶೇಖರಪಾಟೀಲ : ಶಾಲ್ಮಲಾ ನನ್ನ ಶಾಲ್ಮಲಾ/ ದೇವಭಾಗ
ಅರವಿಂದನಾಡಕರ್ಣಿ : ಗೊಂಡೋಲಾ, ನಿಲ್ಲು!/ ಜಂಕ್ಷನ್ಕವಿತೆಗಳು
ಯು. ಆರ್. ಅನಂತಮೂರ್ತಿ : ಅಜ್ಜನ ಹೆಗಲ ಸುಕ್ಕುಗಳು/ ಅಭಾವ
ವೇಣುಗೋಪಾಲಸೊರಬ : ಜೀವಜೀವಂತ / ಬಿಂಬ
ಸುಬ್ರಾಯ ಚೊಕ್ಕಾಡಿ : ತೆರೆ/ ಮೊನ್ನೆಸಿಕ್ಕವರು
ಸರ್ವಮಂಗಳ : ಅಮ್ಮನಗುಡ್ಡ
ಶ್ರೀಕೃಷ್ಣ ಆಲನಹಳ್ಳಿ : ಮಣ್ಣಿನಹಾಡು
ಎಚ್. ಎಸ್. ವೆಂಕಟೇಶಮೂರ್ತಿ : ಉತ್ತರಾಯಣ ಮತ್ತು…
ವೇಣುಗೋಪಾಲ ಕಾಸರಗೋಡು : ಗರಿ ಮುರಿದ ಹಕ್ಕಿಗಳು
ರಾಮಚಂದ್ರದೇವ : ಮಾತಾಡುವ ಮರ
ಕೆ. ನ. ಶಿವತೀರ್ಥನ್ : ಬೆಸ್ತ/ ಗೆರೆಗಳು
ಬಿ. ಆರ್. ಲಕ್ಷ್ಮಣರಾವ್ : ಗೋಪಿ ಮತ್ತು ಗಾಂಡಲೀನ/ ಟುವಟಾರ
ಜಯಂತ ಕಾಯ್ಕಿಣಿ : ರಂಗದಿಂದೊಂದಷ್ಟು ದೂರ/ ಕೋಟಿತೀರ್ಥ
ಚೆನ್ನಣ್ಣ ವಾಲೀಕಾರ : ಕರಿ ತೆಲಿ ಮಾನವನ ಗೀಪದ
ಎಚ್. ಎಸ್. ಶಿವಪ್ರಕಾಶ್ : ಮಳೆ ಬಿದ್ದ ನೆಲದಲ್ಲಿ/ ಅಣು ಕ್ಷಣ ಚರಿತೆ
ಕೆ. ವಿ. ಅಕ್ಷರ : ಹದಿಹರಯದ ಹಾಡುಗಳು
ಎಸ್, ಮಂಜುನಾಥ್ : ಹಕ್ಕಿಪಲ್ಟಿ/ ಜೀವಯಾನ
ಸಿದ್ದಲಿಂಗಯ್ಯ : ಹೊಲೆ ಮಾದಿಗರ ಹಾಡು/ ಸಾವಿರಾರು ನದಿಗಳು
ಕಮಲಹೆಮ್ಮಿಗೆ : ಮರ್ಮರ
ಪ್ರತಿಭಾನಂದಕುಮಾರ್ : ನಾವು ಹುಡುಗಿಯರೇ ಹೀಗೆ/ ಆಹಾ ಪುರುಷಾಕಾರಂ
ಮಮತಾ ಜಿ.ಸಾಗರ : ನದಿಯ ನೀರಿನ ತೇವ/ ಕಾಡ ನವಿಲಿನ ಹೆಜ್ಜೆ
ಆನಂದ ಝುಂಜರ ವಾಡ : ಗಂಡಭೇರುಂಡ
ಸವಿತಾ ನಾಗಭೂಷಣ : ಜಾತ್ರೆಯಲ್ಲಿ ಶಿವ/ ದರುಶನ
ಕನಕ ಹಾ. ಮ. : ಹೊಳೆ ಬಾಗಿಲು/ ಅರಬಿ ಎಂಬ ಕಡಲು
ಲಲಿತಾ ಸಿದ್ದಬಸವಯ್ಯ : ಇಹದಸ್ವರ/ ಕಬ್ಬೆನೆಲ
ಪಿ. ಚಂದ್ರಿಕಾ : ನಿಮ್ಮ ಚರಿತ್ರೆಯಲ್ಲಿ ನಾನಿಲ್ಲ/ ಸೂರ್ಯಗಂಧೀಧರಣಿ
ಎಂ. ಆರ್. ಕಮಲ :ಜಾಣೆ
ಸ. ಉಷಾ : ಹವಳ ಹಾರಿದ ಹೊತ್ತು
ಡಾ. ಎಚ್. ಎಲ್. ಪುಷ್ಪ: ಲೋಹದಹಕ್ಕಿ
ವಿ. ಎಂ. ಮಂಜುನಾಥ : ಲೆವೆಲ್ಕ್ರಾಸಿಂಗ್
ಸಂಧ್ಯಾದೇವಿ : ಮಾತು-ಚಿಟ್ಟೆ/ ಅಗ್ನಿದಿವ್ಯ
ಜಿ. ಕೆ. ರವೀಂದ್ರಕುಮಾರ್ : ಪಾಂಜಿಯಾ/ ಒಂದು ನೂಲಿನ ಜಾಡು
ಯು. ಮಹೇಶ್ವರಿ : ಮುಗಿಲ ಹಕ್ಕಿ
ಹರಿಯಪ್ಪಪೇಜಾವರ : ಕಲಾವಿದನ ಕೊಲೆ
ಕೆ. ಬಿ. ಸಿದ್ದಯ್ಯ : ದಕ್ಲ ಕಥಾ ದೇವಿಕಾವ್ಯ/ ಬಕಾಲ
ನಾ. ಮೊಗಸಾಲೆ : ಮೊಗಸಾಲೆಯ ನೆನಪುಗಳು/ ಇಹಪರದ ಕೊಳ
ವಸಂತಬನ್ನಾಡಿ : ಕಡಲ ಧ್ಯಾನ
ಕಸ್ತೂರಿಬಾಯರಿ : ನೀಲಿ ಆಕಾಶಕ್ಕೆ ರೆಕ್ಕೆಗಳ ಬಿಚ್ಚಿ/ ನೀನು ತೆರೆದ ಆಕಾಶ
ಎಚ್. ಆರ್. ರಮೇಶ್ : ಝೆನ್ನದಿ
ಮೀನಾಪಾಟೀಲ : ಅಂಚಿಲ್ಲದ ಆಕಾಶ
ಜ್ಯೋತಿಗುರುಪ್ರಸಾದ : ಚುಕ್ಕಿ
ಸಂತೋಷಚೊಕ್ಕಾಡಿ : ನಿಜದ ಹಾದಿಯ ಬೆಳಕು
ಡಾ. ಸಿ. ರವೀಂದ್ರನಾಥ್ : ಕೊಡೆಯಡಿ ಒಂದು ಚಿತ್ರ (ಹಾಯಿಕುಗಳು)
ರಮೇಶ್ ಅರೋಲಿ : ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ
ನಾಗರಾಜ ರಾಮಸ್ವಾಮಿ ವಸ್ತಾರೆ : ವಸ್ತಾರೆ ಪದ್ಯಗಳು
ಆರಿಫ್ ರಾಜಾ : ಬೆಂಕಿಗೆ ತೊಡಿಸಿದ ಬಟ್ಟೆ
 
(ವಿ. ಸೂ. ಈ ಪಟ್ಟಿಯನ್ನು ಇತರರು ಮುಂದುವರಿಸಲಿ!)
 
 

‍ಲೇಖಕರು G

14 May, 2014

17 Comments

  1. Sarala

    ಎಚ್. ಎಸ್. ವೆಂಕಟೇಶಮೂರ್ತಿ : ಶಂಖದೊಳಗಿನ ಮೌನ

  2. narendra shivanagere

    Tq Thirumalesh sir, can you please list out kannada small stories also!

  3. prathibha nandakumar

    ಕೆವಿಟಿ ಸರ್ ನಿಮ್ಮ ವಿಳಾಸ ಕಳಿಸಿಕೊಡಿ… ನನ್ನ ಹೊಸ ಸಂಕಲನಗಳನ್ನು ಕಳಿಸಿಕೊಡುತ್ತೇನೆ ಪ್ಲೀಸ್…

    • prathibha nandakumar

      and thanks for this list

    • kvtirumalesh

      ಪ್ರತಿಭಾ
      ನನ್ನ ವಿಳಾಸ ಇಲ್ಲಿದೆ:
      KV Tirumalesh
      501 Uma Signature Towers
      12-13-893, St. no. 12
      Hanuman Nagar, Tarnaka
      Secunderabad 500 017
      ***
      ಕನ್ನಡದ ಕತೆಗಾರರ ಪಟ್ಟಿಯನ್ನು ಒಬ್ಬರು ಕೇಳಿದ್ದಾರೆ. ಕತೆಗಾರರು ವಿಪುಲವಾಗಿದ್ದಾರೆ. ಅವರ ಪಟ್ಟಿ ಮಾಡುವ ಮಾಹಿತಿ ಸಂಪತ್ತು ನನ್ನಲ್ಲಿಲ್ಲ.
      ಇನ್ನು ಇಂಥಾ ಯಾವುದೇ ಪಟ್ಟಿಗಳೂ ಸಂಪೂರ್ಣವಾಗಿರುವುದಿಲ್ಲ; ಪಿ. ಚಂದ್ರಿಕಾ ಮತ್ತು ಲಲಿತಾ ಸಿದ್ದಬಸವಯ್ಯ ನನ್ನ ಪಟ್ಟಿಯಲ್ಲಿ ಇದ್ದಾರೆ. ಯಾರನ್ನೂ ಬೇಕೆಂದೇ ನಾನು ಕೈಬಿಟ್ಟಿಲ್ಲ. ನನ್ನ ಮಾತುಗಳನ್ನು ತಾಳ್ಮೆಯಿಂದ ಇನ್ನೊಮ್ಮೆ ಓದಿಕೊಳ್ಳಿ. ನನ್ನ ಈ ಕಿರು ಯತ್ನವನ್ನು ಬಳಸಿಕೊಂಡು ಪ್ರತಿಯೊಬ್ಬರೂ ತಮ್ಮದೇ ಪಟ್ಟಿಯನ್ನು ಮಾಡಿಕೊಳ್ಳಬಹುದು. ಅಂತೂ ಈ ವಿ‍ಷಯ ಸಾರ್ವಜನಿಕ ಅರಿವಿಗೆ ಬರಲಿ ಎನ್ನುವುದು ನನ್ನ ಉದ್ದೇಶ.
      ಕೆ.ವಿ. ತಿರುಮಲೇಶ್

      • vasudeva nadig

        sir namasthe..
        naanu kuuda 4 sankalanagalannu prakatagolisiddene..
        1.vrushabhachalada kanasu (bendre-adiga kaavya prashasti-1993-94)
        2.hostilu himalayada madhye (2004)
        3 bhavada hakki(muddana award 2008)
        4.viraktara battegaLu (2012)
        5.ninna dhyanada hanate (kadengodlu award 2014-acchinallide-phalguni prakashana)
        aadare elluu yaaava pustakada maligegalalluu labhyavilla-kondu kolluvavarilla…prasarana illa..maaatilla kathe illa..preetiyinda kalisidare yaarobbaruu 1 saaluuu pratikriye bariyuvudilla( ibbaru muuvaru barediddare)
        vasudeva nadig-9591960434

        • kvtirumalesh

          ಶ್ರೀ ವಾಸುದೇವ ನಾಡಿಗ್ ಅವರೇ
          ನಿಮ್ಮ ಅನುಭವ (ನಿರಾಸೆ) ಹಲವು ಕವಿಗಳಿಗೆ ಆಗಿದೆ, ಆಗುತ್ತಲೇ ಇದೆ. ಕವನಸಂಕಲನ ಪ್ರಕಟಿಸುವುದೇ ದೊಡ್ಡ ಸಾಹಸ. ಇನ್ನು ಕವನಸಂಕಲನಗಳು ಮಾರಾಟವಾಗದ ಕಾರಣ ಯಾವ ಪುಸ್ತಕದಂಗಡಿಗಳೂ ಅವುಗಳನ್ನು ಶೆಲ್ಫಿನಲ್ಲಿ ಇರಿಸುವುದಿಲ್ಲ. ಕೆಲವು ಒಪೀನಿಯನ್ ಮೇಕರ್ಸ್ ಇದ್ದಾರೆ–ವಿಮರ್ಶಕರು, ದೊಡ್ಡ ಚಿಂತಕರು. (ನಾನು ಅವರಲ್ಲಿ ಒಬ್ಬನಲ್ಲ.) ನಿಮಗೆ ಅವರ ಬೆಂಬಲ ಸಿಕ್ಕಿದರೆ ಸ್ವಲ್ಪ ಪ್ರಚಾರ ದೊರಕಬಹುದು. ಆದರೆ ಹಾಗೆ ಓಲೈಸಿ ಪ್ರಚಾರ ಪಡೆಯುವುದಕ್ಕೆ ಕವಿಗಳ ಮನಸ್ಸು ಒಪ್ಪುವುದಿಲ್ಲ, ಅಲ್ಲವೇ? ಆದ್ದರಿಂದ ಸುಮ್ಮನೆ ಬರೆಯುತ್ತ ಹೋಗಿ; ಸಾಧ್ಯವಿದ್ದರೆ ಪತ್ರಿಕೆಗಳಲ್ಲಿ ಪ್ರಕಟಿಸಿ. ಶುಭಾಶಯಗಳು.
          ನಿಮ್ಮ
          ಕೆ.ವಿ.ತಿರುಮಲೇಶ್

  4. Reader

    ತಿರುಮಲೇಶರೆ,
    ಮೂಡ್ನಾಕೂಡು ಚಿನ್ನಸ್ವಾಮಿ, ನಟರಾಜ್ ಹುಳಿಯಾರ್, ಪಿ. ಚಂದ್ರಿಕಾ, ಜಿ. ಎನ್.ಮೋಹನ್, ಲಲಿತಾ ಸಿದ್ಧಬಸವಯ್ಯ, ರೂಪ ಹಾಸನ, ತಾರಿಣಿ ಶುಭದಾಯಿನಿ, ಡಿ.ಎಸ್.ರಾಮಸ್ವಾಮಿ, ಅಂಕುರ್ ಬೆಟಗೇರಿ, ಜ.ನಾ.ತೇಜಶ್ರೀ, ವಿಕ್ರಮ ವಿಸಾಜಿ, ವಿ.ಆರ್.ಕಾರ್ಪೆಂಟರ್, ಚೇತನಾ ತೀರ್ಥಹಳ್ಳಿ, ಪೀರ್ ಬಾಷ, ಕೆ.ಪಿ.ಮೃತ್ಯುಂಜಯ, ಟಿ. ಯಲ್ಲಪ್ಪ, ಅಕ್ಷತಾ, ಲಾವಣ್ಯಪ್ರಭ, ಇವರುಗಳು ಇಲ್ಲದ ಪಟ್ಟಿ ಪೂರ್ಣವಾಗುವುದು ಹೇಗೆ?

  5. Sushrutha Dodderi

    ಪಟ್ಟಿ ತುಂಬಾ ಚೆನ್ನಾಗಿದೆ. ಉಪಯುಕ್ತವೂ ಆಗಿದೆ. ಆದರೆ ಬೇಸರದ ಸಂಗತಿ ಅಂದ್ರೆ, ಇದರಲ್ಲಿ ಬಹಳ ಪುಸ್ತಕಗಳು ಈಗ ದೊರಕೋದಿಲ್ಲ. ಯಾವ ಪುಸ್ತಕದಂಗಡಿಗೆ ಹೋದರೂ ಕವನ ಸಂಕಲನಗಳ ಸೆಕ್ಷನ್ನಿನಲ್ಲಿ ಕೆಲವೇ ಪುಸ್ತಕಗಳು ಇರ್ತವೆ. ನಾನು ಸುಮಾರು ಕಡೆ ಸುಮಾರು ಕವಿಗಳ ಪುಸ್ತಕಗಳಿಗೆ ವಿಚಾರಿಸಿ ಸೋತಿದ್ದೀನಿ. ಈ ಕೃತಿಗಳ ಮರುಮುದ್ರಣವೋ, ಅಥವಾ ಈ ಕವಿಗಳ ಸಮಗ್ರ ಸಾಹಿತ್ಯ ಸಂಪುಟವೋ ಬರುತ್ತೇನೋ ಅಂತ ಕಾಯೋದಾಗಿದೆ. ಅಲ್ಲೀವರೆಗೆ, ಲಂಕೇಶರ ’ಅಕ್ಷರ ಹೊಸ ಕಾವ್ಯ’ದಲ್ಲಿರೋ ಕೆಲವು ಆಯ್ದ ಕವಿತೆಗಳನ್ನೋ ಅಥವಾ ಅಕ್ಷರ ಪ್ರಕಾಶನ ತಂದಿರೋ ಕೆ.ವಿ. ಸುಬ್ಬಣ್ಣ ಮಾಲಿಕೆಯ ಆಯ್ದ ಕವಿತೆಗಳನ್ನೋ ಓದಿ ತೃಪ್ತಿ ಪಟ್ಟುಕೊಳ್ಳಬೇಕು. 🙁

  6. S.N.Sridhar

    Great idea. Everyone should add to it their own favorites.
    Also, time for a new “akshara hocca hosa kavya” anthology? –

  7. vasanthn

    The list of top ten books Avadhi has been publishing hardly mention any books of poetry. This may open their eyes.

    • G

      ನಮಸ್ತೆ ವಸಂತ್ ಅವರೆ,
      ಕವನಗಳನ್ನು ಪ್ರೀತಿಯಿಂದ ಓದುವ, ಚಂದ ಕಂಡಿದ್ದನ್ನು ಓದಿಸುವ ಪ್ರಯತ್ನ ನಮ್ಮದೂ ಸಹ. ದಯವಿಟ್ಟು ನಿಮ್ಮ ಮೆಚ್ಚಿನ ಹತ್ತು ಪುಸ್ತಕಗಳ ಪಟ್ತಿಯನ್ನು ಕಳಿಸಿಕೊಡಿ.
      ’ಅವಧಿ’ ಬಳಗ

      • vasanthn

        Dear Mohan Sir,
        Here is my List of top ten books. If it is worth kindly publish.
        Your Sincerely
        Vasantha Raju N.
        1.Complete works of Pablo Neruda
        2.ಕರ್ವಾಲೋ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ
        3. ಟೀಕೆ ಟಿಪ್ಪಣಿ ಭಾಗ 1, 2, 3 – ಪಿ. ಲಂಕೇಶ್
        4. ಎರಿಕ್ ಫ್ರಾಂನ ಆರ್ಟ್ ಆಫ್ ಲವಿಂಗ್ (ಪ್ರೀತಿಸುವುದೆಂದರೆ…) (ಕನ್ನಡಾನುವಾದ ಕೆ.ವಿ. ನಾರಾಯಣ ಮತ್ತು ಎಚ್. ಎಸ್. ರಾಘವೇಂದ್ರರಾವ್)
        5. ಯುವ ಕವಿಗೆ ಬರೆದ ಪತ್ರಗಳು – ಮಾರಿಯಾ ರಿಲ್ಕೆ (ಕನ್ನಡಾನುವಾದ ಓ.ಎಲ್. ನಾಗಭೂಷಣ ಸ್ವಾಮಿ)
        6. ರೂಪಕಗಳ ಲೇಖಕರು- ಪಿ.ಲಂಕೇಶ್ ಮತ್ತು ಯೋಗೇಶಪ್ಪನವರ್
        7. ಪಾಪದ ಹೂವುಗಳು- ಬೋದಿಲೋರ್ (ಕನ್ನಡಾನುವಾದ ಪಿ.ಲಂಕೇಶ್)
        8. ವಸಂತ ಸ್ಮøತಿ – ರೂಮಿ ಕವಿತೆಗಳು (ಕನ್ನಡಾನುವಾದ ಡಿ. ಆರ್. ನಾಗರಾಜ್)
        9. ಚಿರಸ್ಮರಣೆ- ನಿರಂಜನ
        10. ಚಿಂತನೆಯ ಪಾಡು –ರಹಮತ್ ತರೀಕೆರೆ

  8. maheshwari.u

    K V Thirumaleshara Aadu kannada haadu kannada maathaadu kannnadave-
    Vaidehiyavara Bindu bindige
    Kayyarara Punarnava
    Dharanidevi Malagathi avara Eeurivadiva
    Govinda Paiyavara Gilivindu/ Golgotha
    Kavitha Raiyavara Hakki hariva neeru
    mathu eega nenapaagada innuu kelavu

  9. apara

    tirumalesh/ avadha

  10. kvtirumalesh

    ದೊಡ್ಡರಂಗೇ ಗೌಡ
    ಜಿ. ಪಿ. ಬಸವರಾಜು
    ಎಂ. ಎನ್. ವ್ಯಾಸರಾವ್
    ಮಾಲತಿ ಪಟ್ಟಣ ಶೆಟ್ಟಿ
    ಬುದ್ದಣ್ಣ ಹಿಂಗಮಿರೆ
    ಬಾಲ ಸುಬ್ರಹ್ಮಣ್ಯ ಕಂಜರ್ಪಣೆ
    ವಿಜಯರಾಘವನ್
    ವಿಷ್ಣು ನಾಯ್ಕ
    ಎಸ್. ಜಿ. ಸಿದ್ಧರಾಮಯ್ಯ
    ಶಶಿಕಲಾ ವೀರಯ್ಯ ಸ್ವಾಮಿ
    ಚಂದ್ರಶೇಖರ ತಾಳ್ಯ
    ಜಂಬಣ್ಣ ಅಮರಚಿಂತ
    ಕ. ವೆಂ. ರಾಜಗೋಪಾಲ
    ಎಚ್. ಎಸ್. ಬಿಳಿಗಿರಿ
    ಸು. ರಂ. ಎಕ್ಕುಂಡಿ
    ಚಿಂತಾಮಣಿ ಕೊಡ್ಳಕೆರೆ
    ಲಕ್ಷೀಪತಿ ಕೋಲಾರ
    ಮುಕ್ತಾಯಕ್ಕ
    ಶಂಕರ ಕಟಗಿ
    ಹೇಮಾ ಪಟ್ಟಣಶೆಟ್ಟಿ
    ಜಯಸುದರ್ಶನ
    ಶಾಮಸುಂದರ ಬಿದರಕುಂದಿ
    ಬಿದಿರಹಳ್ಳಿ ನರಸಿಂಹಮೂರ್ತಿ
    ಕೆ. ಪಿ. ಸುರೇಶ
    –ಹೀಗೆ ಅದೆಷ್ಟೋ ಕವಿಗಳ ಕವನ ಸಂಕಲನಗಳನ್ನು ನಾನು ನಮೂದಿಸಿಲ್ಲ. ಅವರ ಕೃತಿಗಳ ಹೆಸರುಗಳು ನನಗೆ ಸಿಗದ ಒಂದೇ ಕಾರಣಕ್ಕೆ. ಕೆಲವು ಪುಸ್ತಕಗಳು ನನ್ನಿಂದ ಕಳೆದುಹೋಗಿವೆ; ಇನ್ನು ಹಲವನ್ನು ನಾನು ಕಂಡೇ ಇಲ್ಲ. ಇದೇನೂ ಅಂತಿಮ ಪಟ್ಟಿಯಲ್ಲ–ಯಾರೂ ಮುಂದುವರಿಸಬಹುದು. ಹಾಗಿದ್ದೂ ನಾನು ಇಲ್ಲಿ ಕೈಬಿಟ್ಟ ಕವಿಗಳ ಕ್ಷಮೆ ಕೋರುತ್ತೇನೆ. ಇನ್ನು ಯರ್ಮುಂಜ ರಾಮಚಂದ್ರ ಮತ್ತು ಪೇಜಾವರ ಸದಾಶಿವ ರಾಯರ ಕವಿತೆಗಳೂ ಆಧುನಿಕ ಕನ್ನಡ ಕಾವ್ಯಕ್ಕೆ ಮುಖ್ಯ ಎಂದು ಹೇಳಬಯಸುತ್ತೇನೆ. ಅಲ್ಲದೆ ವಿ. ಕೃ. ಗೋಕಾಕರ `ಸಮುದ್ರ ಗೀತಗಳು’, ಎಸ್. ವಿ. ರಂಗಣ್ಣನವರ `ಬಿನ್ನಪಗಳು’ ಇಲ್ಲಿ ಸೇರಲೇಬೇಕಾದ ಸಂಕಲನಗಳು. ಇಂಥ ಇನ್ನೂ ಹಲವು ಕೃತಿಗಳಿರಬಹುದು. ಯೋಚಿಸಿದಂತೆ ಪಟ್ಟಿ ಉದ್ದವಾಗುತ್ತದೆ–ಇದು ಸಂತಸದ ವಿಷಯ!
    ಕೆ.ವಿ.ತಿರುಮಲೇಶ್

  11. sindhu

    I am a fan of KV Tirumalesh’s makkaLa padyagaLu.
    I enjoy reading them in prajavani puravani.

Trackbacks/Pingbacks

  1. ಕೆ ವಿ ತಿರುಮಲೇಶ್ ಖುಷಿಯಾದ್ರು « ಅವಧಿ / Avadhi - [...] ಕಡಿಮೆ ಇದ್ದದ್ದು ಗಮನಿಸಿ ತಿರುಮಲೇಶ್  ’ನಿಮ್ಮ ಲೆಕ್ಕದಲ್ಲಿ ನಾವಿಲ್ಲ’ ಎಂದು ಕವಿತೆಗಳ ಪರವಾಗಿ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading