ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ "ಡಿಮಾನೆಟೈಜೇಷನ್" ಕೇಜಿಗೆಷ್ಟು?

 

ಮಂತ್ರಕ್ಕಿಂತ ಉಗುಳೇ ಜಾಸ್ತಿ ಆದದ್ದು, ತಲೆಗಿಂತ ಮುಂಡಾಸೇ ಭಾರ ಆದದ್ದು… ಹೀಗೆ ಹತ್ತಾರು ಗಾದೆಮಾತುಗಳಿವೆ ಇಂತಹದೊಂದು ಸ್ಥಿತಿಯ ಬಗ್ಗೆ. 8/11ರ ಬಳಿಕ ಅದರ ನಿರೀಕ್ಷಿತ ಫಲಿತಾಂಶ ಮತ್ತು ಅದಕ್ಕೆ ಮಾಡಲಾಗಿರುವ ಖರ್ಚುಗಳನ್ನುಹೋಲಿಸಿ ನೋಡುವುದಕ್ಕೆ ಇದು ಸಕಾಲ. ಏಕೆಂದರೆ, ಪ್ರಧಾನಿ ಹೇಳಿರುವ 50 ದಿನಗಳ ವಿಂಡೋ ಮುಕ್ತಾಯದ ಹಂತದಲ್ಲಿದೆ.

avadhi-nunnanna-betta-posterಬರಿಯ ಡಿಮಾನೆಟೈಜೇಷನ್ (ನೋಟು ರದ್ಧತಿ) ಭೂಕಂಪನಕ್ಕೆ ತಗುಲಿದ ವೆಚ್ಚದ್ದು ಒಂದು ತೂಕವಾದರೆ, ಅದರ ಪಶ್ಚಾತ್ಕಂಪನಗಳಿಂದ ಆಗಿರುವ/ಆಗಲಿರುವ ವೆಚ್ಚಗಳದೇ ಇನ್ನೊಂದು ತೂಕ. ಕೊನೆಯಲ್ಲಿ ಇದು ಬೆಟ್ಟ ಅಗೆದು ಇಲಿಯೂ ಸಿಗದಂತಹ ಒಂದು ಸ್ಥಿತಿಗೆ ತಲುಪುವ ಹಾದಿಯಲ್ಲಿ ಇರುವಂತೆ ಕಾಣಿಸತೊಡಗಿದೆ.

2000 ದ ಒಂದು ನೋಟು ಮುದ್ರಣಕ್ಕೆ 3.54ರೂ. ಮತ್ತು 500ರ ಒಂದು ನೋಟು ಮುದ್ರಣಕ್ಕೆ 3.09ರೂ ವೆಚ್ಚ ಬೀಳುತ್ತದೆಂದು ಸರ್ಕಾರ RTI ಅರ್ಜಿಯೊಂದಕ್ಕೆ ಮೊನ್ನೆ ಉತ್ತರಿಸಿದೆ. ರಿಸರ್ವ್ ಬ್ಯಾಂಕು ನೋಟು ರದ್ಧತಿ ಮಾಡಿ ಹೊರತೆಗೆದ 14೦ಲಕ್ಷ ಕೋಟಿ (14 ಟ್ರಿಲಿಯನ್) ರೂಪಾಯಿಗಳನ್ನು ಮತ್ತೆ ಅದೇ ದಾಮಾಶಯದಲ್ಲಿ ಚಲಾವಣೆಗೆ ತರಲು ಕೇವಲ ಮುದ್ರಣ ವೆಚ್ಚ ಅಂದಾಜು 15,000 ಕೋಟಿ ರೂಪಾಯಿಗಳೆಂದು ಮತ್ತು ಮುದ್ರಿತ ಕರೆನ್ಸಿಗಳ ಸಾಗಾಟ, ವಿತರಣೆಗಳಿಗೆ ಎಲ್ಲ ಒಟ್ಟು 16,800  ಕೋಟಿ ರೂಪಾಯಿಗಳ ವೆಚ್ಚ ತಗಲುತ್ತದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಅಂದಾಜು ಮಾಡಿದೆ.

ಇನ್ನೊಂದೆಡೆ ಬ್ಯಾಂಕುಗಳು ದೇಶದೆಲ್ಲೆಡೆ ತಮ್ಮ ಅಂದಾಜು 1,37,000 ಶಾಖೆಗಳಲ್ಲಿ 12.3 ಲಕ್ಷ ಸಿಬ್ಬಂದಿಗಳನ್ನು ಬಳಸಿಕೊಂಡು ರದ್ದಾದ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ವಿನಿಮಯ ಮಾಡಲು ಈ 50 ದಿನಗಳ ವಿಂಡೋದೊಳಗೆ ತಗಲುವ ವೆಚ್ಚ (50 ದಿನಗಳಿಂದ ಮುಂದೆ ಈ ವೆಚ್ಚವೂ ಹೆಚ್ಚಲಿದೆ), ದೇಶದೊಳಗಿರುವ 202801  ಎಟಿಎಂ ಯಂತ್ರಗಳನ್ನು ಮರು ಕ್ಯಾಲಿಬ್ರೇಟ್ ಮಾಡುವ ವೆಚ್ಚ ಹಾಗೂ ಅಂಚೆ ಕಚೇರಿಗಳ ಮೂಲಕ ಹಣ ವಿನಿಮಯ ಮಾಡಿಕೊಂಡ ವೆಚ್ಚ ಸೇರಿ ಒಟ್ಟು ಬ್ಯಾಂಕುಗಳಿಗೆ ಡಿಮಾನೆಟೈಜೇಷನ್ನಿನ ಮೊದಲ 50 ದಿನಗಳ ವೆಚ್ಚ 35,140 ಕೋಟಿ ರೂಪಾಯಿಗಳು.

ಮೊದಲ 50 ದಿನಗಳಲ್ಲಿ ನೋಟು ವಿನಿಮಯಕ್ಕಾಗಿ ಸಾರ್ವಜನಿಕರು ತಮ್ಮ ಬೇರೆಲ್ಲ ಕೆಲಸ, ಉದ್ಯೋಗಗಳನ್ನು ಬಿಟ್ಟು ಬ್ಯಾಂಕಿನಲ್ಲಿ ಸರತಿ ಸಾಲು ನಿಲ್ಲುವುದರಿಂದ  ಅಂದಾಜು 45.8 ಕೋಟಿ ಮಾನವ ದಿನಗಳ ನಷ್ಟ ಆಗಲಿದ್ದು, ಅದರಿಂದ ಆಗಲಿರುವ ಉತ್ಪಾದಕತೆಯ ನಷ್ಟ ಸರಿಸುಮಾರು 1500 ಕೋಟಿ ರೂಪಾಯಿಗಳೆಂದು CMIE  ಅಂದಾಜಿಸಿದೆ.

ದಿನಬಳಕೆಯ ವಸ್ತುಗಳ ರೈತರು, ಸಾಗಾಟಗಾರರು, ಸರಬರಾಜುಗಾರರು, ಉತ್ಪಾದಕರು, ಮಾರಾಟಗಾರರ  ಮತ್ತು ಗ್ರಾಹಕರ ನಡುವೆ  ಮೊದಲ 50 ದಿನಗಳಲ್ಲಿ, ಹಣ ಚಲಾವಣೆಯ ಪ್ರಮಾಣ ಕಡಿಮೆ ಆಗಿರುವುದರಿಂದ ವ್ಯವಹಾರದ ಪ್ರಮಾಣ ಕುಸಿದು, ಆಗುವ ಆರ್ಥಿಕ ನಷ್ಟವನ್ನು ವಿವಿಧ ವಿಶ್ಲೇಷಣೆಗಳನ್ನಾಧರಿಸಿ, ಸುಮಾರು 61,500 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.

investigator_bcclಇನ್ನೂ ಕೈಗಾರಿಕೆ, ಅಟೊಮೊಬೈಲ್, ಆರೋಗ್ಯ ಮತ್ತಿತರ ಹಲವು ರಂಗಗಳಲ್ಲಿ ಆಗುವ ವೆಚ್ಚಗಳನ್ನೆಲ್ಲ ಇನ್ನಷ್ಟೇ ವಿಶ್ಲೇಷಿಸಬೇಕಿದ್ದು, ಜೊತೆಗೆ ಅಸಂಘಟಿತ ವಲಯದ ಉದ್ದಿಮೆಗಳು, ಕಾರ್ಮಿಕರು ಮತ್ತಿತರ ಅಂಶಗಳನ್ನೂ ಪರಿಗಣಿಸಬೇಕಿದೆ. ಅದನ್ನೆಲ್ಲ ಸೇರಿಸಿದರೆ, ದೊರಕಲಿರುವ ವೆಚ್ಚ ಯಾರನ್ನೂ ಹೌಹಾರುವಂತೆ ಮಾಡೀತು.

ಈಗ ವಿಶ್ಲೇಷಣೆ ಆಗಿರುವ ರಂಗಗಳಲ್ಲಿ ನೋಟು ರದ್ಧತಿಯ ಮೊದಲ 50  ದಿನಗಳ  ಒಟ್ಟು ನಿರೀಕ್ಷಿತ ವೆಚ್ಚ: 1,28,440 ಕೋಟಿ ರೂಪಾಯಿಗಳು!

ಈ ನಡುವೆ ಸರಕಾರ ಏಕಾಏಕಿ “ಕ್ಯಾಶ್ ಲೆಸ್” ಮಾದರಿಯನ್ನು ಅನುಸರಿಸಲು ಜನರನ್ನು ಒತ್ತಾಯ ಮಾಡತೊಡಗಿದೆ. ಇದಕ್ಕೆ ಅಗತ್ಯ ಇರುವ PoS  ಉಪಕರಣಗಳು, ಪೇಮೆಂಟ್ ಬ್ಯಾಂಕಿಂಗ್ ಮತ್ತದರ ಸುರಕ್ಷೆ, ಕಾರ್ಯಕ್ಷಮತೆಗಳನ್ನು ಹೆಚ್ಚಿಸುವ ಕೆಲಸಗಳಿಗೆ, ಜನರನ್ನು ಈ ಮಾದರಿಯ ವ್ಯವಹಾರಕ್ಕೆ ಸಿದ್ಧಪಡಿಸಲು ತಗಲುವ ವೆಚ್ಚಗಳೂ ಸೇರಿದರೆ ಒಟ್ಟು ಹೊರೆಯನ್ನು ಊಹಿಸಲೂ ಸಾಧ್ಯವಾಗದು.

ಹೆಚ್ಚಿನ ಓದಿಗಾಗಿ: www.cmie.com

‍ಲೇಖಕರು Admin

23 December, 2016

ನಿಮಗೆ ಇವೂ ಇಷ್ಟವಾಗಬಹುದು…

9 Comments

  1. GNK

    So, Don’t do anything. Just let this black money and corruption grow. CHANGE IS NOT GOOD. IT’S COSTLY. Thats a nice conclusion.

    • Anonymous

      ವ್ಯಕ್ತಿ ಬದಲಾಗದೆ ಸಮಾಜ ಬದಲಾಗುವುದಿಲ್ಲ. ನೋಟುರದ್ಧತಿಯಂತಹ ಬೇರುಮಟ್ಟದ ಕ್ರಮಗಳು ಸಾಕಷ್ಟು ಯೋಜನಾಬದ್ಧವಾಗಿ ನಡೆಯದಿದ್ದರೆ ಗಂಡಾಂತರ ತರುತ್ತವೆ ಎಂಬುದು ಸಾರಾಂಶ. – ರಾಜಾರಾಂ ತಲ್ಲೂರು

  2. ankanalli jayaram

    ಅಗತ್ಯ ಪೂರ್ವ ತಯಾರಿಯಿಲ್ಲದೆ ಆತುರದ ನಿರ್ಧಾರ ಕೈಗೊಂಡದ್ದು ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತಾಗಿದೆ.

  3. Sandeep Kamath

    ಕಳೆದ ಐವತ್ತು ದಿನಗಳಿಂದ ಡಿ ಮಾನೆಟೈಸೇಷನ್ ಬಗ್ಗೆ ಸುದ್ದಿ ಹಾಕಿ ಟಿ.ಆರ್.ಪಿ ಹೆಚ್ಚಿಸಿಕೊಂಡ ಅದರಿಂದ ಲಾಭ ಮಾಡಿಕೊಂಡವರ ಮೊತ್ತವನ್ನು ಕಳೆಯಲೇ ಇಲ್ಲ ನೀವು!

    ಇನ್ನು ಹಳೆಯ ನೋಟುಗಳನ್ನು ವಿಲೇವಾರಿ ಮಾಡಲು ತಗಲುವ ವೆಚ್ಚವನ್ನೂ ಹಾಕಿ ಬಿಡಿ ಅಲ್ಲಿಗೆ ನಿಮ್ಮ ಲೆಕ್ಕ ಸರಿ ಹೋಗುತ್ತೆ!

    14೦ಲಕ್ಷ ಕೋಟಿ (14 ಟ್ರಿಲಿಯನ್) ರೂಪಾಯಿಗಳನ್ನು ಮತ್ತೆ ಅದೇ ದಾಮಾಶಯದಲ್ಲಿ ಚಲಾವಣೆಗೆ ತರ್ತಾರೆ ಅಂತ ನಿಮಗ್ಯಾರು ಹೇಳಿದ್ರು? ಕ್ಯಾಶ್ ಲೆಸ್ ಗೆ ಮತ್ಯಾಕೆ ಒತ್ತು ಕೋಡ್ತಿರೋದು ಅಂದುಕೊಂಡ್ರಿ?
    14೦ಲಕ್ಷ ಕೋಟಿ ಹಳೇ ನೋಟಿಗೆ ಹೊಸ ನೋಟು ಕೊಟ್ಟು ಸುಮ್ಮನೆ ಕೂರಲು ಮೋದಿಯೇನು ಪಪ್ಪು ನಾ?

    ನಿಮಗೆ ಕ್ಯಾಶ್ ಲೆಸ್ ಇಷ್ಟ ಇಲ್ಲ ಅಂದ್ರೆ ಹಣದ ಥೈಲಿ ಹಿಡಿದುಕೊಂಡೇ ಓಡಾಡಿ ಯಾರು ಬೇಡ ಅಂದ್ರು? ಮೋದಿ ಹೇಳ್ತಾ ಇರೋದು ಎಲ್ಲೆಲ್ಲಿ ಸಾಧ್ಯ ಆಗುತ್ತೋ ಅಲ್ಲಲ್ಲಿ ಕ್ಯಾಶ್ ಲೆಸ್ ಆಗಲಿ ಅಂದು. ಇನ್ನು ಆ ಹೇಳಿಕೆಯನ್ನು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ.

    ಅಷ್ಟೆಲ್ಲಾ ಬಡವರ ಬಗ್ಗೆ ಮಾತಾಡೋ ನಿಮ್ಮ ಲೇಖನ ಎಲ್ಲರಿಗೂ ತಲುಪಲು ನಿಮಗೆ ಡಿಜಿಟಲ್ ಮಾಧ್ಯಮವೇ ಬೇಕು!

  4. Anonymous

    These naysayers will always find some arguments to shoot down any good thing. They cannot do any good things themselves nor they can tolerate others doing it. This is the tragedy of our democracy because it has given every body the freedom of expression!

    You ask them. They say “we are here to talk. It is our right”. Sorry that we are a part of the society where these kind of people also live.

    Why the gentleman is not at all able to see the good things of demonetization?.

  5. Ananda Prasad

    ದೊಡ್ಡ ಬೆಲೆಯ ನೋಟು ಅಮಾನ್ಯಗೊಳಿಸುವಿಕೆ ಮಾಡಿದ ಹೆಚ್ಚಿನ ದೇಶಗಳು ಕಪ್ಪು ಹಣ ಹೊರತೆಗೆಯುವಲ್ಲಿ ವಿಫಲವಾಗಿವೆ. ಈ ಮೊದಲು ಭಾರತದಲ್ಲಿ ಮಾಡಿದ ದೊಡ್ಡ ಬೆಲೆಯ ನೋಟು ಅಮಾನ್ಯಗೊಳಿಸುವಿಕೆ ಕೂಡ ವಿಫಲವಾಗಿದೆ. ಹೀಗಿದ್ದೂ ಇತಿಹಾಸದಿಂದ ಪಾಠ ಕಲಿಯದೇ ಹೋದರೆ ಅದು ಉತ್ತಮ ಆಡಳಿತ ಹೇಗಾಗುತ್ತದೆ? ನೋಟು ಅಮಾನ್ಯಗೊಳಿಸುವಿಕೆಯಿಂದ ಹೊರತೆಗೆದ ಕಪ್ಪು ಹಣಕ್ಕಿಂತ ನೋಟು ಅಮಾನ್ಯಗೊಳಿಸುವಿಕೆಯಿಂದ ವ್ಯಾಪಾರ ವಹಿವಾಟು, ಹೊಸ ನೋಟು ಮುದ್ರಣ, ವಿತರಣೆ, ಹಳೆ ನೋಟು ಬದಲಿಸುವಿಕೆ ಇವುಗಳಿಗೇ ಹೆಚ್ಚು ವೆಚ್ಚವಾದರೆ ಅದರಿಂದ ಆಗುವ ಪ್ರಯೋಜನವೇನು? ಜನಸಾಮಾನ್ಯರನ್ನು ಮಂಕುಬೂದಿ ಎರಚಿ ಭ್ರಮಾಲೋಕಕ್ಕೆ ತಳ್ಳಿ ಅವರು ಬವಣೆಪಡುವಂತೆ ಮಾಡುವುದರಿಂದ ಸಾಧಿಸಿದ್ದಾದರೂ ಏನು?

    ಇವರಿಗೆ ನಿಜವಾಗಿಯೂ ದೇಶದ ಬಗ್ಗೆ ಕಾಳಜಿ ಇದ್ದರೆ ಮೊದಲು ಲೋಕಪಾಲ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಒಬ್ಬ ಎಲ್ಲರಿಗೂ ಒಪ್ಪಿಗೆಯಾಗುವ ಖಡಕ್ ಲೋಕಪಾಲರನ್ನು ನೇಮಿಸಲಿ, ಭ್ರಷ್ಟರಿಗೆ ಶೀಘ್ರ ಶಿಕ್ಷೆ ಆಗುವಂತೆ ಮಾಡಲಿ. ಚುನಾವಣಾ ಸುಧಾರಣೆ ತರಲಿ. ಎಲ್ಲ ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳ ಮನೆ, ಆಸ್ತಿಪಾಸ್ತಿ ಮೇಲೆ ದಾಳಿ ಮಾಡಿ ಆದಾಯಕ್ಕಿಂತ ಅಧಿಕವಿರುವ ಮೊತ್ತ, ಆಸ್ತಿಪಾಸ್ತಿ ಸರ್ಕಾರಕ್ಕೆ ಜಪ್ತಿ ಮಾಡಲಿ. ಅದು ಬಿಟ್ಟು ಜನಸಾಮಾನ್ಯರಿಗೆ ತೊಂದರೆಯಾಗುವ ನೋಟು ಅಮಾನ್ಯಗೊಳಿಸುವಿಕೆ ಮಾಡಬೇಕಾದ ಅಗತ್ಯವಿರಲಿಲ್ಲ.

  6. Anonymous

    ವ್ಯಕ್ತಿ ಬದಲಾಗದೆ ಸಮಾಜ ಬದಲಾಗುವುದಿಲ್ಲ. ನೋಟುರದ್ಧತಿಯಂತಹ ಬೇರುಮಟ್ಟದ ಕ್ರಮಗಳು ಸಾಕಷ್ಟು ಯೋಜನಾಬದ್ಧವಾಗಿ ನಡೆಯದಿದ್ದರೆ ಗಂಡಾಂತರ ತರುತ್ತವೆ ಎಂಬುದು ಸಾರಾಂಶ. – ರಾಜಾರಾಂ ತಲ್ಲೂರು
    It would have been far better and sensible, had you confined yourself to this summary only!

  7. Sriranga Ma

    ರಾಜಾರಾಂ ತಲ್ಲೂರ್ ಅವರಿಗೆ–೫೦೦ ಮತ್ತು ೧೦೦೦ರೂಪಾಯಿಗಳ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ ಮೇಲೆ ಅದಕ್ಕೆ ಬದಲಿಯಾಗಿ ಹೊಸನೋಟುಗಳು ಜನರಿಗೆ ಬ್ಯಾಂಕು, ಎಟಿಎಂಗಳಲ್ಲಿ ಸಿಕ್ಕಿದ್ದರೆ ಸಮಸ್ಯೆಯಿರುತ್ತಿರಲಿಲ್ಲ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆರ್ ಬಿ ಐ ಸೇರಿದಂತೆ ಇತರ ಕೆಲವು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಉಪ್ಪು ತಿಂದ ಮನೆಗೇ ಎರಡು ಬಗೆದು “ಕಮೀಷನ್” ಆಸೆಗೆ ಕೋಟಿಗಟ್ಟಲೆ ಹಣವನ್ನು ಕಾನೂನಿಗೆ ವಿರುದ್ಧವಾಗಿ ಕಾಳಧನಿಕರಿಗೆ ಬದಲಾಯಿಸಿ ಕೊಟ್ಟಿದ್ದರಿಂದ ಕೇಂದ್ರ ಸರ್ಕಾರದ ಬಗ್ಗೆ ಜನಗಳಿಗೆ ಬೇಸರ ಉಂಟಾಗಿದೆ. ಆ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ;ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆ. ಆದರೆ ಸಾಮಾನ್ಯ ಜನಗಳು ಇಷ್ಟು ದಿನ ಪಟ್ಟ ಬವಣೆಗೆ, ಕೇಂದ್ರ ಸರ್ಕಾರ,ಬ್ಯಾಂಕುಗಳು ಅನುಭವಿಸಿದ ಮುಜುಗುರಕ್ಕೆ ಅದರಿಂದ ತಕ್ಷಣಕ್ಕೆ ಪರಿಹಾರವಾಗುವುದಿಲ್ಲ. ಈ ಅಂಶ ಇದುವರೆಗಿನ ತಮ್ಮ “ವಿರೋಧಿ ಧೋರಣೆಯ” ಲೇಖನಗಳಲ್ಲಿ ಕಂಡು ಬಂದಿಲ್ಲ. ಇನ್ನು ನೋಟುಗಳ ಮುದ್ರಣದ ಹಾಗೂ ಸಾಗಾಣಿಕೆಯ ವೆಚ್ಚ ನೋಟು ರದ್ದತಿಯ ಹಿಂದೆ ಇರಲಿಲ್ಲವೇ? ಅದಕ್ಕೆಂದು ಆದಷ್ಟೂ ನೋಟುಗಳ ಮೂಲಕ ವ್ಯವಹಾರ ಕಮ್ಮಿ ಮಾಡಿ ‘less cash’ ಕಡೆ ಜನಗಳು ಮುಂದುವರಿಯಲಿ ಎಂದು ಸರ್ಕಾರ ಕ್ರಮ ಕೈಗೊಂಡರೆ ತಮಗೆ ಒಪ್ಪಿಗೆಯಿಲ್ಲ. ಸರ್ಕಾರದ ಕ್ರಮವನ್ನು ಸ್ವಾಗತಿಸಿದವರನ್ನು ‘ಭಕ್ತರುಗಳು’ ಎಂದು ಕರೆದು ಕುಹಕವಾಡುತ್ತೀರಿ. ಮುಂದಿನ ಚುನಾವಣೆಯಲ್ಲಿ ತಮ್ಮ ಹಾಗೂ ಪಕ್ಷದ ಗೆಲುವಿನ ಮೇಲೇ ಕಣ್ಣಿರಿಸಿ ಬದಲಾವಣೆಗೆ ಕೈ ಹಾಕದೆ ಕೇವಲ ಜನಪ್ರಿಯ ಕಾರ್ಯಕ್ರಮಗಳಿಂದ ವೋಟ್ ಬ್ಯಾಂಕ್ ಗಳನ್ನು ಭದ್ರಪಡಿಸಿಕೊಳ್ಳುವ ನಾಯಕರು ಮತ್ತು ಪಕ್ಷಗಳೇ ಇರುವ ಸನ್ನಿವೇಶದಲ್ಲಿ ಅದರ ಯೋಚನೆ ಬಿಟ್ಟು ಏನಾದರೂ ಮಾಡೋಣ ಎಂದು ಹೊರಟವರ ಬಗ್ಗೆ ತಮಗೆ ಸಹನೆಯಿಲ್ಲ. ಏನು ಮಾಡೋಣ ಹೇಳಿ? ಹಾಗಾದರೆ ತಮಗೆ ಬದಲಾವಣೆಯೇ ಬೇಡವೇ? ಬೇಕು ಎಂದರೆ ಯಾರಾದರೊಬ್ಬರು ಅದನ್ನು ಮಾಡಲು ಮುಂದುವರಿಯಲೇ ಬೇಕು ತಾನೇ? ಕೊನೆಯದಾಗಿ ಒಂದು ಪ್ರಶ್ನೆ. ಒಂದು ವೇಳೆ ೫೦೦ ಹಾಗು ೧೦೦೦ರೂಗಳ ನೋಟುಗಳ ಚಲಾವಣೆಯನ್ನು ನಿಷೇಧ ಮಾಡದೆಯಿದ್ದಿದ್ದರೆ ಈಗ ಪ್ರತಿದಿನವೂ ಬಲೆಗೆ ಬೀಳುತ್ತಿರುವಷ್ಟು ಪ್ರಮಾಣದಲ್ಲಿ ಕಾಳಧನಿಕರು ತಾವಾಗೇ ಮುಂದೆ ಬಂದು ತಮ್ಮ ಅಕ್ರಮ ಸಂಪತ್ತನ್ನು ಸರ್ಕಾರಕ್ಕೆ ಒಪ್ಪಿಸುತ್ತಿದ್ದರೆ?

  8. Sathyakama Sharma K

    ಕೊಡಗಿನಲ್ಲಿ ಆದಿವಾಸಿಗಳನ್ನು ಅಮಾನುಷವಾಗಿ ಒಕ್ಕಲೆಬ್ಬಿಸಿದ್ದರ ಕುರಿತು ಸ್ವಲ್ಪ ಬರೆಯಿರಿ ಅದು ಅಮಾಯಕರ ಮೇಲೆ ನಡೆಸಿದ ನೇರ ದೌರ್ಜನ್ಯ ಅಲ್ಲವೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading