ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಚಿತ್ರಗಳೂ ಇತಿಹಾಸ ಹೇಳುತ್ತವೆ

 

ಬರ್ಕ್ ವೈಟ್ ಕಂಡ ಭಾರತ!!

as1
ಭಾರತ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಭಾರತವನ್ನು ಕಂಡ ರೀತಿಯೇ ಅದ್ಭುತ. ಯಾವ ಇತಿಹಾಸಕಾರನೂ ದಾಖಲಿಸಿದ ಅಪರೂಪದ, ಮನತಟ್ಟುವ, ಮನಕಲಕುವ ಸಂಗತಿಗಳನ್ನು ಈಕೆ ದಾಖಲಿಸಿದ್ದಾಳೆ. ಪುಸ್ತಕ ಸಪ್ತಾಹದ ಅಂಗವಾಗಿ ಶನಿವಾರ ಮೇ ಫ್ಲವರ್ ಮೀಡಿಯಾ ಹೌಸಿನಲ್ಲಿ “ಈ ಪುಸ್ತಕ ನಂಗಿಷ್ಟ” ಎಂದು ಮಿತ್ರ ಮಂಜುನಾಥ ಸ್ವಾಮಿ ಬರ್ಕ್ ವೈಟ್ ಕಂಡ ಭಾರತ (ಅನುವಾದ : ಕೆ.ಆರ್.ಸಂಧ್ಯಾರೆಡ್ಡಿ, ಪ್ರಕಾಶನ: ಕನ್ನಡ ಪುಸ್ತಕ ಪ್ರಾಧಿಕಾರ)ಪರಿಚಯಿಸಿಕೊಟ್ಟರು. ಅದರಲ್ಲಿ ಭಾರತ ವಿಭಜನೆಯ ಸಂದರ್ಭದಲ್ಲಿ ಬರ್ಕ್ ವೈಟ್ ತೆಗೆದ ಹತ್ತಾರು ಚಿತ್ರಗಳಿದ್ದವು. ಆಕೆಯ ಬರಹದ ಹಾಗೆಯೇ ಈ ಚಿತ್ರಗಳೂ ಇತಿಹಾಸ ಹೇಳುತ್ತವೆ.
ಸಂಪೂರ್ಣ ಓದಿಗೆ ಭೇಟಿ ಕೊಡಿ: ಒಳಗೂ…ಹೊರಗೂ..

+++

ಒಂದು ಪುಟ್ಟು ಪ್ರೀತಿ

bus-painting1
ನನಗಾಗ ತಾನೇ ಹನ್ನೆರಡು ತುಂಬಿ ಹದಿಮೂರು ಹಿಡಿದಿತ್ತು. ಮನಸ್ಸು ಮಾಯಾಜಿಂಕೆಯ ಬೆನ್ನು ಹತ್ತಿತ್ತು. ಮನೆಯಲ್ಲಿ ಅಷ್ಟು ಮುಕ್ತವಲ್ಲದ ವಾತಾವರಣ. ನನ್ನ ಕನವರಿಕೆಗಳನ್ನ ಯಾರ ಬಳಿ ತೋಡಿಕೊಳ್ಳುವುದು? ನನ್ನೊಳಗೇ ಅದುಮಿಹಿಡಿದಿದ್ದೆ. ನಾನು ಶಾಲೆಗೆ ಹೋಗುತ್ತಿದ್ದ ವಿಷ್ಣುಮೂರ್ತಿ ಬಸ್ಸಿನ ಕ್ಲೀನರ್‌, ಅವನ ಹೆಸರು ಸಾದಿಕ್‌ ಅಂತ. ಅರೆಗಡ್ಡ ಬಿಟ್ಟ ಬಿಳಿಯ ಚಂದದ ಹುಡುಗ. ಕ್ಲೀನರ್‌ ಕೆಲಸ ಮಾಡುತ್ತಲೇ ಬಸ್‌ ಡ್ರೈವಿಂಗ್‌‌‌‌ನ್ನೂ ಕಲಿಯುತ್ತಿದ್ದ.

 

ಬೆಳಗ್ಗೆ ಎಂಟೂ ಕಾಲಕ್ಕೆ ವಿಷ್ಣುಮೂರ್ತಿ ಬಸ್ ನಮ್ಮ ಸ್ಟಾಪ್ ಬಿಡುತ್ತಿತ್ತು. ಎಂಟು ಗಂಟೆಗೆ ಮನೆಬಿಟ್ಟು ಅರ್ಧಮೈಲು ನಡೆದು ಭರ್ತಿ ಎಂಟೂ ಕಾಲಕ್ಕೆ ಬಸ್ ಇನ್ನೇನು ಹೊರಡುತ್ತದೆ ಅನ್ನುವಾಗ, ಓಡಿಹೋಗಿ ಬಸ್‌ ಹತ್ತುತ್ತಿದ್ದೆ. ಸಾದಿಕ್‌ ಬಾಗಿಲ ಬದಿ ನಿಂತಿರುತ್ತಿದ್ದ. ನಾನು ಹತ್ತಿದ ಕೂಡಲೇ ಕಿವಿ ಹರಿದುಹೋಗುವಂತೆ ವಿಷಲ್ ಹೊಡೆಯುತ್ತಿದ್ದ. ಡ್ರೈವರ್‌ ಅವನ ಖಾಸಾ ಅಣ್ಣನೇ. ನಾನು ಹತ್ತಿ ಕೂತ ಮೇಲೆ ನನ್ನ ಸ್ಥಿತಿ ನೋಡಿ ನಗುತ್ತಾ ಬಸ್‌ ಓಡಿಸುತ್ತಿದ್ದ.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಅಕ್ಷರ ಹೂ

‍ಲೇಖಕರು avadhi

16 November, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading