ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಪತ್ರಿಕೆಯನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಮಹಾದಾಸೆಯಿದೆ..

ಆತ್ಮೀಯರೆ,

ತಮಗೆ ತಿಳಿದಿರುವಂತೆ ಕಳೆದ ೫ ವರ್ಷಗಳಿಂದ ರಂಗಭೂಮಿ ಪತ್ರಿಕೆಯಾಗಿ ‘ಸಂಸ’ ಹೊರಬರುತ್ತಿದೆ.

ಹಲವು ತೊಡರು-ತೊಡಕುಗಳ ನಡುವೆಯೂ ಪತ್ರಿಕೆಯನ್ನು ನಿರಂತರವಾಗಿ ತರುತ್ತಲು ಬಂದಿದ್ದೇವೆ. ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾದ, ರಂಗವಿಮರ್ಶೆಯುಳ್ಳ, ರಂಗ ಕುರಿತ ವಿಚಾರ, ಸಂವಾದ, ಮಾತುಕತೆ, ಎಲೆ ಮರೆಕಾಯಿಯಂತೆ ಉಳಿದ ರಂಗಕರ್ಮಿಗಳನ್ನು ಗುರುತಿಸುತ್ತಾ, ಉತ್ತಮ ವಿನ್ಯಾಸದೊಂದಿಗೆ ರೂಪಗೊಂಡ ಪತ್ರಿಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಮತ್ತೂ ಮೆಚ್ಚುಗೆ, ಪ್ರಶಂಸೆಯೂ ಸಿಕ್ಕಿದೆ. ಹಾಗೆಯೇ ಪ್ರತಿ ವರ್ಷವೂ ಸಂಸ ಸಾಹಿತ್ಯ ಪುರಸ್ಕಾರವನ್ನು ಕೂಡ ನೀಡುತ್ತಾ ಬಂದಿದ್ದೇವೆ.

ಈಗ ಪತ್ರಿಕೆಯನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಮಹಾದಾಸೆಯಿದೆ. ಅದಕ್ಕಾಗಿ ಸಂಸ ಪತ್ರಿಕೆಯನ್ನೇ ಕನ್ನಡ ಸಾಂಸ್ಕೃತಿಕ ಪತ್ರಿಕೆಯನ್ನಾಗಿಸಬೇಕೆಂಬ ನಮ್ಮ ಬಳಗದ ಬಹುದಿನ ಕನಸು ಈಗ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ.

ರಂಗಭೂಮಿ, ಲಲಿತಕಲೆಗಳು, ಸಾಹಿತ್ಯ, ಸಂಸ್ಕೃತಿ, ವಿಮರ್ಶೆ, ಸಂಶೋಧನೆ, ಅನುವಾದ ಮತ್ತು ಜಾನಪದ, ಸಾಂಸ್ಕೃತಿಕ, ರಾಜಕೀಯ ಚಳವಳಿಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಹಾಗೂ ಕಥೆ, ಕವಿತೆ, ಪ್ರಬಂಧ, ವಿಚಾರ ಸಾಹಿತ್ಯ ಇತ್ಯಾದಿ ಪ್ರಕಾರದ ಲೇಖನಗಳನ್ನೊಳಗೊಂಡಿರುತ್ತದೆ.

ತಮ್ಮ ಎಂದಿನ ಸಹಕಾರ, ಬೆಂಬಲವನ್ನು ಪತ್ರಿಕೆಯ ಬಳಗವು ಬಯಸುತ್ತದೆ. ಲೇಖನಗಳಿಗೂ ಸ್ವಾಗತ ಕೋರುತ್ತದೆ.

ಹಾಗೆಯೇ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಪ್ರದೀಪ್ ಎಲ್ ಮಾಲ್ಗುಡಿ ವಹಿಸಿಕೊಳ್ಳುತ್ತಿದ್ದಾರೆ.

ನಾವು ಬದಲಾಗುತ್ತಿಲ್ಲ; ಬದಲಾವಣೆಯನ್ನು ವಿಸ್ತೃತ ರೂಪದಲ್ಲಿ ಕಾಣಲು ಧ್ಯಾನಿಸುತ್ತಿದ್ದೇವೆ.

ಆಂತರ್ಯದಲ್ಲಿ ಅಡಗಿಸಿಟ್ಟ ಬೆಳಕಿನೆಡೆಗಷ್ಟೆ ನಮ್ಮ ಪಯಣ…

ಸುರೇಶ ಸಿ.ಎಂ

ಸಂಪಾದಕರು

ಸಂಸ ಪತ್ರಿಕೆ

 

‍ಲೇಖಕರು G

22 November, 2012

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. sunil rao

    all the very best 🙂

  2. ಮೂರ್ತಿ ದೇರಾಜೆ

    ತುಂಬಾ ಸಂತೋಷ…ಸುರೇಶ್…ಆದರೆ…ವಿಜಯ ಕರ್ಣಾಟಕ ದಲ್ಲಿ ಜಿ.ಎನ್.ಮೋಹನ್ ನಿಮ್ಮ ಪತ್ರಿಕೆ ಯ ಬಗ್ಗೆ ಬರೆದಾಗ ಅಷ್ಟೇ ನನಗೆ ಗೊತ್ತಾದರೂ…ಪತ್ರಿಕೆಯ ಚಂದಾ ಬಗ್ಗೆ ನಿಮಗೆ ಫೋನ್ ಮಾಡಿದ್ದೆ….ನನ್ನ ಬಗ್ಗೆ ವಿಚಾರಿಸಿದ್ದಿರಿ…” ಪತ್ರಿಕೆ ಕಳಿಸ್ತೇನೆ…ಆ ಮೇಲೆ ಚಂದಾ ಕಳಿಸಿ…” ಅಂದಿದ್ರಿ….ಪತ್ರಿಕೆಯನ್ನು ಕಾದೆ….ಆ ನಂತರ…ನಿಮ್ಮ ನಂಬರಿಗೆ ಕನಿಷ್ಟ ಹತ್ತು ಸಾರಿಯಾದರೂ ಫೊನ್ ಮಾಡಿರಬೇಕು…. ಕರೆ ಸ್ವೀಕೃತವಾಗಲೇ ಇಲ್ಲ……” ಪ್ರಾಯಷಃ ಈ ಪತ್ರಿಕೆ…ರಂಗ ಚಳುವಳಿಯ ನೇತಾರರಿಗೆ ಮಾತ್ರ ಇರಬಹುದು….ಸುಮ್ಮನೆ ಎಲ್ಲೋ ಹಳ್ಳಿ ಮೂಲೆಯಲ್ಲಿರುವವರಿಗೆ ಅಲ್ಲವೇನೋ….!!! ” ಅಂತ ತಿಳಿದು ಸುಮ್ಮನಾದೆ…(ಹೀಗೆ ಹೇಳಿದರೆ ವ್ಯಂಗ್ಯ ಎಂದು ತಿಳಿಬೇಡಿ…) ನಿಮ್ಮ ಕಾರ್ಯಕ್ಕೆ ಶುಭವಾಗಲಿ…. -ಮೂರ್ತಿ ದೇರಾಜೆ

  3. Gopaal Wajapeyi

    ಒಂದು ಒಳ್ಳೆಯ ರಂಗ ಪತ್ರಿಕೆ ಅವಶ್ಯವಿದೆ. ನಿಮ್ಮ ಮಹದಾಸೆ ಹೆಮ್ಮರವಾಗಿ ಬೆಳೆದು ಫಲ ನೀಡಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading