ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇವಾಳಜ್ಜಿಯೂ ಆದಮಜ್ಜನೂ….’ ನಾಟಕ ಪ್ರದರ್ಶಿಸುತ್ತೇವೆ

ಜರ್ನಿ ಥೇಟರ್ ಗ್ರೂಪ್, ಮಂಗಳೂರು

……………….ನಿಲ್ಲದ ಪಯಣ


ನಮಸ್ತೆ,
ನಾವು ಜರ್ನಿ ಥೇಟರ್ ಕಲಾವಿದರು. ರಂಗಪ್ರೀತಿಯ ಗೆಳೆಯರ ಬಳಗ. ರಂಗಸಾಧ್ಯತೆಗಳನ್ನು ಬಳಸಿಕೊಂಡು ರಂಗಪ್ರಯೋಗಗಳನ್ನು ಕಟ್ಟುವ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದೇವೆ. ಅದರ ಪ್ರತಿಫಲವೇ ಇವಾಳಜ್ಜಿಯೂ ಆದಮಜ್ಜನೂ ಎಂಬ ನಾಟಕದ ಹುಟ್ಟು.
ನಾಟಕ:


ಮನುಕುಲದ ಅಂತ್ಯವೋ ಆರಂಭವೋ ತಿಳಿದಿಲ್ಲ……… ದ್ವೀಪದಲ್ಲಿ ಆಕಸ್ಮಿಕವಾಗಿ ಒಂದಾಗುವ ಗಂಡು ಹೆಣ್ಣು, ಯಾರು ಯಾರನ್ನು ಗೆಲ್ಲುತ್ತಾರೆ? ಯಾರು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುತ್ತಾರೆ? ಎನ್ನುವ ಎಳೆಯಿಂದ ಪ್ರಾರಂಭವಾಗುವ ಈ ನಾಟಕ ಗಂಡುಹೆಣ್ಣಿನ ಪ್ರೀತಿ, ಪ್ರೇಮ, ಕೋಪ, ಘನತೆ, ಆಶಾಭಾವನೆ ಹಾಗೂ ಸ್ವಾತಂತ್ರ್ಯವನ್ನು ಪ್ರಶ್ನಿಸುತ್ತಾ ಮಾತಿಗೆ ಮಾತು ಬೆಳೆಸಿ ಸಂಬಂಧವನ್ನು ಪೋಣಿಸುತ್ತಾ ಲಿಂಗತ್ವದ ಹೊಸಪರಿಭಾಷೆಯನ್ನು ನೋಡುಗನ ಮುಂದಿಡುತ್ತದೆ. ಕೇವಲ ಎರಡೇ ಪಾತ್ರ, ರಂಗದಲ್ಲಿ ನಟನೆಯಎಲ್ಲಾ ಸಾಧ್ಯತೆಗಳನ್ನು ಅಳವಡಿಸಿ, ಸರಳ ರಂಗಸಜ್ಜಿಕೆಯಲ್ಲಿ ಆಧುನಿಕ ರಂಗಭೂಮಿಯ ಚಿಂತನೆಗಳನ್ನು ಬಳಸಿಕೊಂಡು ಈ ರಂಗಪ್ರಯೋಗವನ್ನು ಸಿದ್ಧಪಡಿಸಲಾಗಿದೆ.
ಈ ರಂಗಪ್ರಯೋಗವು ಕಾಲೇಜುಗಳಲ್ಲಿ ಹಾಗೂ ಯುವಸಮೂಹದ ಮುಂದೆ ಪ್ರದರ್ಶನವಾದರೆ ಹೆಚ್ಚು ಅರ್ಥಪೂರ್ಣ ಎಂಬ ನಂಬಿಕೆ ನಮ್ಮದು. ಆದುದರಿಂದ ನಿಮ್ಮ ಸಂಸ್ಥೆ ಅಥವಾ ನಿಮಗೆ ಅನುಕೂಲವಾದ ಸ್ಥಳದಲ್ಲಿ ಈ ನಾಟಕವನ್ನು ಪ್ರದರ್ಶಿಸುವ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಕನಿಷ್ಠ ಪ್ರಯಾಣ ವೆಚ್ಚ ಮತ್ತು ಪ್ರದರ್ಶನ ಸಂಭಾವನೆ :ರೂ. 5,000/- ಮಾತ್ರ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ವಿದ್ದು ಉಚ್ಚಿಲ್
ಜರ್ನಿ ಥೇಟರ್ ಗ್ರೂಪ್
ನಯಾಪಟ್ಟಣ,ಸೋಮೇಶ್ವರ ಉಚ್ಚಿಲ.
ಮಂಗಳೂರು. 575023
ಮೋ: 8970214657, 9481975367
Email: journeytheatre@gmail.com

‍ಲೇಖಕರು avadhi

22 July, 2013

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading