ಲಂಕೇಶ್, ಅವ್ವ ಮತ್ತು ಹೆಂಗರುಳು..
ಮಾರ್ಚ್ 8 ವಿಶ್ವ ಮಹಿಳಾ ದಿನ. ಲಂಕೇಶ್ ಇದೇ ದಿನ ಹುಟ್ಟಿದ್ದು. ಅವ್ವನಂಥ ಕವಿತೆಯನ್ನು ಕೊಟ್ಟ ಲಂಕೇಶ್ ಒಳಗಿದ್ದ ಹೆಣ್ತನವೇ ಇದಕ್ಕೆಲ್ಲಾ ಕಾರಣವಾ! ತುಂಟ, ಹಟವಾದಿ, ಛಲಗಾರ ಎಲ್ಲವೂ ಆಗಿದ್ದ ಲಂಕೇಶ್ ನಿಜಕ್ಕೂ ತಾಯಿಯಂಥ ಕರುಳು ಇದ್ದವರು ಎಂಬುದಕ್ಕೆ ಅವರ ಸಾಹಿತ್ಯವೇ ಸಾಕ್ಷಿ. ಕಾಳಜಿ, ನಿಷ್ಠುರತೆ ಕೂಡ ಒಬ್ಬ ತಾಯಿಯೊಳಗೆ ಇರುವಂಥದ್ದೇ.
ಶನಿವಾರ ಬೆಂಗಳೂರಿನ ಸಂಸ ರಂಗಮಂದಿರದಲ್ಲಿ ಲಂಕೇಶ್ ಜನ್ಮ ದಿನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ನಟರಾಜ್ ಹುಳಿಯಾರ್ ಅವರು ತಮ್ಮ ಗುರುಗಳ ಬಗ್ಗೆ ಸುಮಾರು 24 ನಿಮಿಷ ಮಾತಾಡಿದರು. ನಾನು ಕೇಳಿದ್ದಷ್ಟನ್ನು ನಿಮಗೂ ಕೇಳಿಸಬೇಕೆಂದುಕೊಂಡು ರೆಕಾರ್ಡ್ ಮಾಡಿ ತಂದಿದ್ದೀನಿ..
ಕೇಳಿ.. ಲಂಕೇಶ್ ನಿಮ್ಮನ್ನು ಆವರಿಸಲಿ.
-ಅಲೆಮಾರಿ







ಧನ್ಯವಾದಗಳು.