ಸಮ್ಮೇಳನ ಮುಗಿದ ಮೇಲಿನ ಚಿತ್ರಗಳು ಇಲ್ಲಿವೆ… ಮೂರು ದಿನದ ಉತ್ಸವವನ್ನು ಯಶಸ್ವಿಯಾಗಿ ಮುಗಿಸಿ, ನೆಂಟರು ಇಷ್ಟರನ್ನು ಬೀಳ್ಕೊಟ್ಟ ವಿಜಾಪುರ ಉಷ್ಷ್… ಎಂದು ಸುಧಾರಿಸಿಕೊಳ್ಳುತ್ತಿದೆ……
ಬರದ ನಾಡಿನಲ್ಲಿ ಅಕ್ಷರದ ಹಬ್ಬವನ್ನು ಇಷ್ಟು ಚಂದಗೊಳಿಸಿಕೊಟ್ಟ ವಿಜಾಪುರದವರಿಗೆ ನಮ್ಮ ಅಭಿನಂದನೆಗಳು ಮತ್ತು ವಂದನೆಗಳು…
ಅದರೊಂದಿಗೆ ಮೂರು ಮತ್ತೊಂದು ದಿನ ಗುಮ್ಮಟ ನಗರಿಯಲ್ಲಿದ್ದು ‘ಅವಧಿ’ಗಾಗಿ ಸಮ್ಮೇಳನ ತಂದು ಕೊಟ್ಟ ಮುರಳಿ ಮೋಹನ ಕಾಟಿ , ಆನಂದ ಹಳ್ಳಿ, ರವಿ ಈಚಲಮರ ತಂಡಕ್ಕೆ ಹಾಗೂ ಬೆಂಗಳೂರಿನಿಂದ ಇಡೀ ವ್ಯವಸ್ಥೆಯ ಕಣ್ಗಾವಲು ನಡೆಸಿದ ಎನ್ ಸಂಧ್ಯಾರಾಣಿ ಅವರಿಗೆ ವಂದನೆಗಳು

ಚಿತ್ರಗಳು : ಶಿವು ಮೊರಿಗೇರಿ, ಆನಂದ್ ಹಳ್ಳಿ, ರವಿಕುಮಾರ್ ಈಚಲಮರ
ಇಲ್ಲಿಗೆ ಹರ ಹರ, ಇಲ್ಲಿಗೆ ಶಿವ ಶಿವ, ಇಲ್ಲಿಗೆ ನಮ ಕಥೆ ಸಂಪೂರ್ಣವಯ್ಯ!!
ನಿಮಗೆ ಇವೂ ಇಷ್ಟವಾಗಬಹುದು…





ಇಂಥದ್ದೊಂದು ಭವ್ಯ ಸಮ್ಮೇಳನವನ್ನು ತಮ್ಮ ವರದಿಗಳ ಮೂಲಕ ನಮಗೆ ತಲುಪಿಸಿದ ಅವಧಿಗೂ ಮತ್ತು ವರದಿಗಾರರ ತಂಡಕ್ಕೂ ಅಭಿನಂದನೆಗಳು.
– ಪ್ರಸಾದ್.ಡಿ.ವಿ.
ಥ್ಯಾಂಕ್ಯೂ ಫ್ರೆಂಡ್ಸ್, ಸಾಹಿತ್ಯ ಸಮ್ಮೇಳನ ಅಂದ್ರೆ ಬರೀ ಸಾಹಿತ್ಯಕ್ಕೆ ಸಂಬಂಧ ಪಟ್ಟ ಗೋಷ್ಟಿಗಳು ಮಾತ್ರವಲ್ಲ ಎಂಬ ನೋಟವನ್ನು ತೋರಿಸಿದಕ್ಕೆ. ಸಮ್ಮೇಳನದ ಮುಖ್ಯ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ತಳ ಮಟ್ಟದ ಕೆಲಸಗಳು ಅಚ್ಚುಕಟ್ಟಾಗಿರಬೇಕಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಅಡುಗೆ ಮಾಡುವುದು ಸಹ ಸಮ್ಮೇಳನದ ಯಶಸ್ವಿಗಿ ಪ್ರಧಾನ ಪಾತ್ರ ವಹಿಸುತ್ತದೆ. ಆ ಅಡುಗೆ ಮಾಡುವವರ ಬದುಕನ್ನು ಮನಕ್ಕೆ ತಟ್ಟುವಂತೆ ಸರೆಹಿಡಿದಿದ್ದಾರೆ. ಅಡುಗೆ ಮಾಡುವ ನೂರರ ಅಂಚಿನಲ್ಲಿರುವ ಖಾಸಿಂಬಿ ಅಜ್ಜಿಯ ಶ್ರಮವೂ ಸಹ ಸಮ್ಮೇಳನದ ಯಶಸ್ವಿಗೆ ದೊಡ್ಡ ಕೊಡುಗೆ. ಅಜ್ಜಿಯ ಸ್ವಾಭಿಮಾನದ ಅನಿವಾರ್ಯತೆಯ ಬದುಕು ನಮಗೊಂದು ಮಾರ್ಗಸೂಚಿ ಎಂದರೆ ತಪ್ಪಾಗಲಾರದು.
ಇನ್ನೂ ಬಿಕಾಂ ಮಾಡುತ್ತಿರುವ ವಿದ್ಯಾರ್ಥಿ, ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಸಲು ಅಡುಗೆ ಕೆಲಸ ಮಾಡುತ್ತಿರುವುದು ಯುವ ಜನತೆಯ ಸ್ಪೂರ್ತಿಯ ಸಂಕೇತ. ಎಷ್ಟೊ ವಿದ್ಯಾರ್ಥಿಗಳು ದುಡ್ಡಿಲ್ಲವೆಂದು ವಿದ್ಯಾಭ್ಯಾಸಕ್ಕೆ ವಿಮುಖವಾಗುವ ಈ ಸಂದರ್ಭದಲ್ಲಿ ಈ ವಿದ್ಯಾರ್ಥಿಯ ಬದುಕನ್ನು ಸೆರೆಹಿಡಿದು ನಮಗೆ ತೋರಿಸಿದಕ್ಕೆ ರವಿ ಈಚಲುಮರರವರಿಗೆ ಶರಣು.
ಇನ್ನೂ ಶಿವುಣ್ಣ ಇಡೀ ಸಾಹಿತ್ಯ ಸಮ್ಮೇಳನವನ್ನು ಉತ್ತರ ಕರ್ನಾಟಕದ ಭಾಷೆಯಲ್ಲಿ ಹಾಗೂ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಮಗೆ ತಲುಪಿಸಿದ್ದಾರೆ. ಶಿಕ್ಷಣದಿಂದ ವಂಚಿತನಾದ ಉತ್ತರ ಕರ್ನಾಟಕದ ವ್ಯಕ್ತಿಯೊಬ್ಬ, ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ರೀತಿಯಲ್ಲಿತ್ತು. ಯಾವಾಗಲೂ ಕವನದ ಮೂಲಕ ತನ್ನ ಅನ್ನಿಸಿಕೆಯನ್ನು ಹೇಳುತ್ತಿದ್ದ ಶಿವಣ್ಣ, ಈ ಬಾರಿ ಕಥೆಯ ರೂಪದಲ್ಲಿ ತನ್ನ ಅನ್ನಿಸಿಕೆಯನ್ನು ವ್ಯಕ್ತ ಪಡಿಸಿದ್ದು ತುಂಬಾ ಖುಷಿ ಆಯಿತು.
ಇನ್ನೂ ಹಳ್ಳಿ ಆನಂದ ಹಾಗೂ ಮುರಳಿ ಮೋಹನ್ ಕಾಟಿಯವರ ಕ್ಯಾಮರ ಕಣ್ಣು ಆಕರ್ಷಕವಾಗಿತ್ತು. ಸಮ್ಮೇಳನದ ಅಂಚಿನಲ್ಲಿರುವವರನ್ನು ಇಂಚು ಇಂಚಾಗಿ ಸೆರೆ ಇಡಿದಿದ್ದಾರೆ. ಇವರು ಕ್ಲಿಕ್ಕಿಸಿದ ಒಂದೊಂದು ಫೊಟೋ ಸಹ ತನ್ನ ಬೆನ್ನ ಹಿಂದೆ ಒಂದೊಂದು ಕಥೆಯನ್ನು ಹಿಡಿದುಕೊಂಡಿತ್ತು. ಇವರೆಲ್ಲಾರಿಗೂ ಬದುಕು ಕಾಲೇಜು ವಿದ್ಯಾರ್ಥಿಗಳ ತಂಡದಿಂದ ಶುಭಾಶಯಗಳು.
thumba chennagide,,, kannada andre nange thuma ista…