ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೊಂದು ಹತ್ತು ಘಂಟೆಗಳ ನಾಟಕ

ಆರ್ಯ ದ್ರಾವಿಡ

ಇತಿಹಾಸ ಇದುವರೆಗೂ ಮಾನವ ಜನಾಂಗಕ್ಕೆ ಕಲಿಸಿರುವ ಪಾಠ, ” ಶಕ್ತನು ಗೆಲ್ಲುತ್ತಾನೆ, ಆಶಕ್ತನು ಸೋಲುತ್ತಾನೆ ಸೋತವನು ಸಾಯುತ್ತಾನೆ”. ಹೀಗೆ ಬದುಕಿದ್ದು ಸತ್ತಂತಿರುವ ಸೋತವನನ್ನು ಇತಿಹಾಸದ ಉದ್ದಕ್ಕೂ ತುಂಬಾ ಹೀನಾಯವಾಗಿ ನಡೆಸಿಕೊಂಡಿದೆ.

ಸಿಂಧೂ ನದಿಯ ಬಯಲಿನಲ್ಲಿ ನಿರ್ಮಲವಾಗಿ ಸಹಪಂಕ್ತಿ ಭೋಜನ ಮಾಡುತ್ತಾ, ನಿಸರ್ಗವನ್ನೇ ದೇವರೆಂದು ಪೂಜಿಸುತ್ತಾ ಮಾನವೀಯತೆಯಿಂದ ಬದುಕು ಸಾಗಿಸುತ್ತಿದ್ದ, ಸುಭದ್ರ ಸಧ್ರುಡವಾದ ಒಂದು ನಾಗರೀಕತೆಯನ್ನು ಕಟ್ಟಿ ಬೆಳೆಸಿದ್ದ ಹರಪ್ಪಾ ಮತ್ತು ಮೆಹೆಂಜೊದಾರೋ ನಾಗರೀಕತೆಯ ಮೂಲನಿವಾಸಿಗಳನ್ನು ಅದೆಲ್ಲಿಂದಲೋ ಆಹಾರ ಅರಸುತ್ತ ಬಂದ ಅಲೆಮಾರಿ ಆರ್ಯರು ತಮ್ಮ ಕುಟಿಲ ಬುದ್ದಿಯಿಂದ ಸೋಲಿಸುತ್ತಾರೆ. ಆಶ್ರಯ ನೀಡಿ ಸಲಹಿದ್ದ ಮೂಲ ನಿವಾಸಿಗಳೇ ಸೋತು ಶರಣಾಗಬೇಕಾಗುತ್ತದೆ. ಸೋತು ಅಂದು ತಲೆ ತಗ್ಗಿಸಿದವರು ಇಂದಿಗೂ, 21 ನೇ ಶತಮಾನದಲ್ಲೂ ತಮ್ಮ ಅಸ್ತಿತ್ವದ ಉಳಿವಿಗಾಗಿ, ತಮ್ಮ ಮೂಲ ಪರಂಪರೆ, ಮೂಲ ಸಂಸ್ಕೃತಿಯ ಉಳಿವಿಗಾಗಿ ನಿರಂತರವಾಗಿ ಹೊರಾಡುತಲೇ ಇದ್ದಾರೆ. ಆದರೆ ಆ ಯಾವ ಹೋರಾಟಗಳೂ ಇದುವರೆವಿಗೂ ಫಲ ಕಂಡಿಲ್ಲ.

ಬುದ್ಧ, ಬಸವಣ್ಣ, ಅಕ್ಕ ಮಹಾದೇವಿ, ಗುರುನಾನಕ್, ಜ್ಯೋತಿ ಬಾ ಪುಲೆ, ಅಂಬೇಡ್ಕರ್, ಭಗತ್ ಸಿಂಗ್……ಹೀಗೆ ಸಾಲು, ಸಾಲು ಕ್ರಾಂತಿಕಾರಿಗಳೂ, ಸಮಾಜವಾದಿಗಳೂ, ಸಮಾಜ ಸುಧಾರಕರು, ಚಿಂತಕರು ಬಂದು ಹೋಗಿದ್ದಾರೆ. ಆದರೆ ಇಂದಿಗೂ ಆ ಗುಲಾಮತನ, ಆ ತಾರತಮ್ಯ ದೂರವಾಗಿಲ್ಲ.

ಅನಾದಿ ಕಾಲದ ವ್ಯಕ್ತಿ – ವ್ಯಕ್ತಿಗಳ ಸಂಘರ್ಷ ಇಂದು ವರ್ಗ ಸಂಘರ್ಷವಾಗಿ ರೂಪುಗೊಂಡಿದೆ. ಜಾತಿ ಮೇಲಾಟಗಳಲ್ಲಿ, ಒಳ ಜಾತಿಗಳ ಹೊಡೆದಾಟದಲ್ಲಿ ಸಾಮಾಜಿಕ ಇಕ್ಯತೆ, ಸಮಗ್ರತೆ, ಅಭಿವೃದ್ದಿ ಎಲ್ಲವೂ ಮರೀಚಿಕೆ.

“…..ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ,

ಎಲ್ಲೇ ಇರಲಿ, ನಾವು ಒಂದು

ನಾವು ಭಾರತೀಯರು..”

ಎನ್ನುವ ಕೆ.ಎಸ್. ನರಸಿಂಹಸ್ವಾಮಿಯವರ ಸಾಲಿನಂತೆ, ಭಾರತದಂತಹ ಪ್ರಬುದ್ದ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಬೇಕಿರುವುದು ಸಾಂಸ್ಕೃತಿಕ ಸಮಾನತೆ.

ಭಾರತದ ಇತಿಹಾಸ ಮತ್ತು ಭವಿಷ್ಯ ಎರಡೂ ಖಾದಿಯಲ್ಲಿ, ಕಾವಿಯಲ್ಲಿ ಅವಿತುಹೋಗಿದೆ. ಸ್ವಾರ್ಥ ಹಿತಾಸಕ್ತಿಯಿಂದ, ವರ್ಗ, ಕೋಮು, ಜಾತಿಗಳ ಪ್ರತಿಷ್ಟೇಯಿಂದ ಇಡೀ ಇತಿಹಾಸವನ್ನು ತಿರುಚಿ ಮೂಟೆ ಕಟ್ಟಿದ್ದಾರೆ. ಸ್ವತಂತ್ರ ಬಂದು ಸಂವತ್ಸರಗಳು ಕಳೆದರೂ, ಸಂವಿಧಾನ ರಚಿಸಿ ದಶಕಗಲುರುಳಿದರೂ ಮನು ಸಂವಿಧಾನ ಇಂದಿಗೂ ಭಾರತದಲ್ಲಿ ಆಚರಣೆಯಲ್ಲಿದೆ.

ಇಷ್ಟೆಲ್ಲಾ ಓರೆಕೋರೆಗಳ ಮೇಲೆ ಬೆಳಕು ಚೆಲ್ಲಿ ಭೂಗತವಾಗಿರುವ ಇತಿಹಾಸವನ್ನು ಉತ್ಕನನ ಮಾಡುವ, ವಿಶ್ವಮಾನವ ಸಂದೇಶ ಸಾರುವ, ಮಲಗಿರುವ್ ಕೋಟ್ಯಾಂತರ ಮುಗ್ದ ಜನರನ್ನು ಎಚ್ಚರಿಸುವ ಪ್ರಯತ್ನ…

 

‍ಲೇಖಕರು G

11 May, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading