ಗಿರಿಜಾ ಶಾಸ್ತ್ರಿ

ರೊಟ್ಟೀಲಿ ಸೇರ್ಕೊಂಡಿರೋ ಕೂದಲನ್ನ ತೆಗೆಯೋಕ್ಕೆ ಆಗೋಲ್ಲ ಅಂತಾಲ್ಲ ಕರೆದು ತೋರಿಸೋದು. ಕೂದಲು ಹಾಕಿದ್ದೀಯಾ ನೋಡು ಅಂತ ಹೇಳೋಕೆ…..
ಹೀಗೆ ಅಡುಗೆ ಮನೆಗೂ ಹಾಲ್ ಗೂ ಓಡಾಟದ ನಡುವೆಯೇ ಗ್ಯಾಸ್ ಹಚ್ಚುವ ಮೊದಲೇ, ಬಾಣಲೆಗೆ, ಹೆಚ್ಚಾಗದಂತೆ ಕಡಿಮೆಯೂ ಆಗದಂತೆ ಎಣ್ಣೆ ಸವರಿ ರೊಟ್ಟಿ ತಟ್ಟಿರಬೇಕು. ಫ್ರಿಜ್ಜಿನಿಂದ ಮೊಸರು ಬೆಣ್ಣೆ ನೆನಪಿನಿಂದ ಮೊದಲೇ ತೆಗೆದಿಡಬೇಕು. ಈ ಎಲ್ಲದರ ಮಧ್ಯೆ ರೊಟ್ಟಿ ಸೀಯದ ಹಾಗೆ ನೋಡಬೇಕು. ಗ್ಯಾಸ್ ಉರಿ ಹೆಚ್ಚು ಕಮ್ಮಿ ಆಗುತ್ತಿರಬೇಕು.

ಬಟಾಣಿ ಬಿಡಿಸ್ಕೊಂಡು ಇಟ್ಕೋಕೋಬೇಕು. ಈರುಳ್ಳಿ ಹಸಿಮೆಣಸಿನಕಾಯಿ, ಕ್ಯಾರೆಟ್, ದೊಡ್ಡಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹೀಗೇ ಇನ್ನೂ ಬೇಕಾದ್ದ ತರಕಾರೀನೆಲ್ಲಾ ಸಣ್ಣಗೆ ಹೆಚ್ಚಿಟ್ಟು ಕೊಳ್ಳಬೇಕು. ತೆಂಗಿನಕಾಯಿ ಹೆಚ್ಚಾಗಿಯೇ ತುರಿದಿಟ್ಟುಕೊಳ್ಳಬೇಕು. ಚಟ್ನಿಗೂ ಬೇಕಲ್ಲ. ರೊಟ್ಟಿ ತಟ್ಟೋಕು ಮುಂಚೆ ಚಟ್ನಿಗೆ ರುಬ್ಬಿ ಒಗ್ಗರಣೆ ಹಾಕಿ ಒಂದು ಬಟ್ಟಲಿಗೆ ಸುರಿದು ಟೇಬಲ್ಲಿನ ಮೇಲೆ ಇಟ್ಟು ಬರಬೇಕು. ಅದಕ್ಕೂ ಮುಂಚೆ ಪಪ್ಪಾಯನೋ, ಕಲ್ಲಂಗಡೀನೋ ಹಚ್ಚಿ ಹೋಳು ಮಾಡಿ ಅದನ್ನೂ ಟೇಬಲ್ಲಿನ ಮೇಲೆ ಇಡಬೇಕು.
ಇಷ್ಟೆಲ್ಲಾ ಜಾಗರೂಕತೆಯಿಂದ, ಪ್ರೀತಿಯಿಂದ ಮಾಡುವಾಗ ಪಾಪಿ ಕೂದಲೆಳೆ ಮುಂಡೇದು ಹೇಗೋ ಬಂದು ಸೇರಿಕೊಂಡುಬಿಟ್ಟಿರುತ್ತದೆ. ಯಾರಾದರೂ ನೆಂಟರು ಬಂದಾಗ ಹೀಗೆ ಆಗಿಬಿಟ್ಟರೆ ಎನ್ನುವ ಅವ್ಯಕ್ತ ಭಯ ಮಾಡುವಾಕೆಗೂ ಇರುತ್ತದೆ.ಎಷ್ಟೆಂದರೂ ಮಾನದ ಪ್ರಶ್ನೆ.
ಕೂದಲೇನು ಬಟಾಣಿಯೇ, ಪ್ರೀತಿಯಿಂದ ಹಿಟ್ಟಿಗೆ ಹಾಕಿ ಕಲಸಿ ರೊಟ್ಟಿ ತಟ್ಟಲು……?!






ಅಜಾಗುರುಕತೆಯಲ್ಲಿ ಹೀಂಗಾಗೋಗುತ್ತೆ.
ಏನ್ಮಾಡೋಕಾಗುತ್ತೆ ಅಲ್ವಾ?
ನಿಜ ತಯಾರಿಸಿದ್ದನ್ನು ಆಸ್ವಾದಿಸುತ್ತಾ ಕುಳಿತ ನೆಂಟರ ಒಂದು meturity ಇರಬೇಕು. ಅಂದಾಗ ಇಷ್ಟೆಲ್ಲ ವಿವರಣೆ ಬೇಡ.
(ನೆಂಟರ ಮನಸ್ಸಿಗೆ)