ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೊಂದಿಷ್ಟು.. ಪ್ರಶಸ್ತಿ ಬಂದಾಗ ಮಾತಾಡಿದ್ದು

ಬಾಲಗಂಗಾಧರ ಆ ರೀತಿ ಮಾತನಾಡಿದಾಗ ಬಯಲಾದದ್ದು ಅವರದೇ ವ್ಯಕ್ತಿತ್ವ

#

ಕೆ ವಿ ತಿರುಮಲೇಶ್ : ನನಗೆ confrontation ಅನ್ನುವುದು ಮಾದರಿ ಅಲ್ಲ.  ಅದು ಅನುಕರಣಾ ಯೋಗ್ಯವೂ ಅಲ್ಲ.  ಚರ್ಚೆ ಬೇಕು, ವಾದ ವಿವಾದ ಬೇಕು, ಆದರೆ ಯುದ್ಧ ಅಲ್ಲ.  ನಾನು ಎಂದೂ ಕೇಜ್ರಿವಾಲ್ ತರಹ ಮಾತನಾಡಲಾರೆ. 

ಯಾಕೆಂದರೆ ಇನ್ನೊಬ್ಬರನ್ನು ಬೈಯುವಾಗ, ಹೀಯಾಳಿಸುವಾಗ ಅದು ಅವರ ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ನಮ್ಮ ವ್ಯಕ್ತಿತ್ವವನ್ನೇ ಹೇಳುತ್ತದೆ. 

ಮೊನ್ನೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ, ಪ್ರೊ ಬಾಲಗಂಗಾಧರ ಆ ರೀತಿ ಮಾತನಾಡಿದಾಗ ಅದರಿಂದ ಕಲಬುರ್ಗಿಯವರಿಗೆ ಅಪಮಾನ ಆಗಲಿಲ್ಲ, ಅಂಬೇಡ್ಕರರಿಗೆ ಅವಮಾನ ಆಗಲಿಲ್ಲ.  ಅದು ಹೊರಹಾಕಿದ್ದು ಬಾಲಗಂಗಾಧರ್ ಅವರ ವ್ಯಕ್ತಿತ್ವವನ್ನು.  ಈ ಎಲ್ಲವೂ ಇದ್ದ ಕವಿತೆ ‘ಮುಖಾಮುಖಿ’.

#

ನನಗೆ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಿಳಿಸಿದರು.  ಮಧ್ಯಾಹ್ನದ ವೇಳೆಗೆ ಗೊತ್ತಾಯಿತು.  ನನ್ನ ಮಟ್ಟಿಗೆ ಇದು ಒಂದು ಸರ್ಪ್ರೈಸ್.  ಇವರು ಪ್ರಶಸ್ತಿ ಕೊಟ್ಟು ಹಾಳುಮಾಡಿದರಾ ಅಂತ ಒಮ್ಮೊಮ್ಮೆ ಅನ್ನಿಸಿತು ಒಳಮನಸ್ಸಿನಲ್ಲಿ.  ಎಲ್ಲೋ ಇವೆಲ್ಲದರಿಂದ ನಾನು ದೂರ ಇದ್ದೆ.  ಈಗ ಹಾಗೆ ಇರಲು ಆಗುವುದಿಲ್ಲ.

‍ಲೇಖಕರು admin

18 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading