ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನು ನಾಶವಾಗಲು ಉಳಿದಿರುವುದು ಮನುಷ್ಯನ ದೇಹ ಮಾತ್ರ…

ನನ್ನನ್ನು ಕಲಕಿದ್ದು…

– ವಿಕಾಸ್ ರಾವ್

ಅವರು ನಾಲ್ಕು ಜನ ಮೈಸೂರಿಗೆ ಹೊರಟಿದ್ದರು. ಹುಡುಗ, ಹುಡುಗನ ತಾಯಿ,ಚಿಕ್ಕಮ್ಮ, ಮತ್ತು ಆ ಹುಡುಗ ಮದುವೆ ಆಗಬೇಕಿದ್ದ ಹುಡುಗಿ.

ನಡುರಾತ್ರಿ ಸುಮಾರು 12 ಘಂಟೆಗೆ ಚಾಲಕನಿಗೆ ವಾಹನದ ಮೇಲೆ ನಿಯಂತ್ರಣ ತಪ್ಪಿ ಬಸ್ಸು ಹಾವೇರಿಯ ಬಳಿ ಮಗುಚಿ ಬಿದ್ದಿದೆ. ಸುತ್ತಲಿನ ಜನ ಇದಕ್ಕೇ ಕಾಯುತ್ತಿದ್ದರೇನೋ ಎಂಬಂತೆ ಕರಿಮಣಿ, ಉಂಗುರ, ಮೊಬೈಲು, ಪರ್ಸ್ ಇತ್ಯಾದಿಗಳನ್ನು ದೋಚಿದ್ದಾರೆ. ವೃತ್ತಿಯಲ್ಲಿ ವೈದ್ಯನಾಗಿದ್ದ ಹುಡುಗನಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾನೆ. ಉಳಿದವರು ಉಳಿದಿದ್ದಾರೆ ಅಷ್ಟೇ.!

ಹುಡುಗನಿಗೆ ಸಾಯುವ ವಯಸ್ಸಲ್ಲ. ಸಾಯುವುದಕ್ಕೆ ವಯಸ್ಸಿರುತ್ತಾ….? ಗೊತ್ತಿಲ್ಲ..! ಸಾವು ಹೇಗಾಯ್ತು ಅಂತ ಹೇಳಬಹುದು. ಆದರೆ ಯಾಕಾಯ್ತು..? ಗೊತ್ತಿಲ್ಲ.

ಸರಿ… ಹೋಗಲಿ ಬಿಡಿ. ಒಂದು ಕ್ಷಣದ ಮಟ್ಟಿಗೆ ಇವೆಲ್ಲಾ ಮಾಮೂಲು ಎಂದೋ, ನಿತ್ಯವೂ ಇಂಥಾ ಅನೇಕ ಸಾವುಗಳಾಗುತ್ತವೆ ಎಂದೋ, ಅಂದುಕೊಳ್ಳೋಣ..!

ಆದರೆ ಇಲ್ಲಿ ನನ್ನನ್ನು ಕಲಕಿದ್ದು ಎರಡು ವಿಷಯಗಳು.

ಹತ್ತಿರದಲ್ಲೇ ಒಳ್ಳೊಳ್ಳೆ ಆಸ್ಪತ್ರೆಗಳಿದ್ದೂ ಆತನಿಗೆ ಚಿಕಿತ್ಸೆ ದೊರೆಯದಿದ್ದದ್ದು…. ಮತ್ತು..

ಇನ್ನಾವ ಪ್ರಳಯಗಳಾಗಿಯೂ ಮನುಷ್ಯ ನಾಶವಾಗಬೇಕಿಲ್ಲ, ನಾವು ಇದ್ದ ಕಿಂಚಿತ್ ಮನುಷ್ಯತ್ವವನ್ನೂ ಕಳೆದುಕೊಂಡು ಈಗಾಗಲೇ ನಾಶವಾಗಿದ್ದೇವೆ ಎನ್ನುವುದಕ್ಕೆ ಸಾಕ್ಷಿಯೇನೋ ಎಂಬಂತೆ ಅಪಘಾತವಾದ ಸ್ಥಳದಲ್ಲಿ ದರೋಡೆಗಿಳಿದ ಜನರ ಮನಸ್ಥಿತಿ.

ಇನ್ನು ನಾಶವಾಗಲು ಉಳಿದಿರುವುದು ಮನುಷ್ಯನ ದೇಹ ಮಾತ್ರ…!

‍ಲೇಖಕರು G

9 December, 2012

3 Comments

  1. D.Ravivarma

    ಇನ್ನಾವ ಪ್ರಳಯಗಳಾಗಿಯೂ ಮನುಷ್ಯ ನಾಶವಾಗಬೇಕಿಲ್ಲ, ನಾವು ಇದ್ದ ಕಿಂಚಿತ್ ಮನುಷ್ಯತ್ವವನ್ನೂ ಕಳೆದುಕೊಂಡು ಈಗಾಗಲೇ ನಾಶವಾಗಿದ್ದೇವೆ ಎನ್ನುವುದಕ್ಕೆ ಸಾಕ್ಷಿಯೇನೋ ಎಂಬಂತೆ ಅಪಘಾತವಾದ ಸ್ಥಳದಲ್ಲಿ ದರೋಡೆಗಿಳಿದ ಜನರ ಮನಸ್ಥಿತಿ.
    ಇನ್ನು ನಾಶವಾಗಲು ಉಳಿದಿರುವುದು ಮನುಷ್ಯನ ದೇಹ ಮಾತ್ರ…!…..
    ultimate….nimma chintanegondu salaam.. idu appata nija… illi manusyana manassu koletu hogide…hanta hantavaagi koleyuttide kuda…pralaya boutikavaagi naasha maadabahudu.. aadare namma baduku namma duraashe,dusta alochane gala mulaka naavu pralayavannu baramaadikondiddeve….
    RAVI VARMA HOSPET

  2. bharathi

    odi manassu kalakithu vikas …

  3. Mohan V Kollegal

    ಚೆನ್ನಾಗಿದೆ ಅಣ್ಣಯ್ಯ… ಸಾಹಿತ್ಯವೆಂಬುದು, ಪತ್ರಿಕೆ ಅಥವಾ ಟೀವಿ ವರದಿಯಾಗಬಾರದು… ಈ ರೀತಿಯ ಸೂಕ್ಷ್ಮಗಳನ್ನು ಗಮನಿಸಿ ಬರೆದರೆ ಓದುಗನ ಚಿಂತನೆ ವಿಸ್ತಾರವಾಗುತ್ತದೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading