ಇನ್ನಷ್ಟು ತೇಜಸ್ವಿ 5
ಡಾ ಬಿ.ಆರ್. ಸತ್ಯನಾರಾಯಣ
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಚಾರಿತ್ರಿಕವಾಗಿ ಪರಿಶೀಲನೆ ಮಾಡಿದಾಗ ಹಿಂದೂ ಧರ್ಮವನ್ನು ತಿರಸ್ಕರಿಸುವ ಮತ್ತು ವಿರೋಧಿಸುವ ಪ್ರವೃತ್ತಿಯೊಂದು ಪ್ರತಿ ಕನ್ನಡ ಸಾಹಿತ್ಯ ಕ್ರಾಂತಿಯಲ್ಲಿಯೂ ಅಂತರ್ಯಾಮನಿಯಾಗಿ ಕಾಣಿಸಿಕೊಳ್ಳುತ್ತಿರುವುದನ್ನು, ಒಂದು ಸೆಕ್ಯುಲರ್ ಪರಂಪರೆ ಪುರೋಹಿತಶಾಹಿಗೆ ಎದುರಾಗಿ ಕೆಲಸ ಮಾಡುತ್ತಾ ಬರುತ್ತಿರುವುದನ್ನು ಮೊದಲು ಗಮನಿಸಿದ ಚಿಂತಕ ತೇಜಸ್ವಿ. ಅದಕ್ಕೆ ಅವರು ಉದಾಹರಣೆಯಾಗಿ ಕೊಟ್ಟಿದ್ದು, ಮಾಸ್ತಿ ಬೇಂದ್ರೆ ಪುತಿನ ಮೊದಲಾದವರು ಕಟ್ಟಾ ಭಾರತೀಯ ಸಂಪ್ರದಾಯಸ್ಥರು ಬರೆಯುತ್ತಿದ್ದಾಗಲೇ, ಕುವೆಂಪು ಅವರಂತೆಯೆ ಶ್ರೀರಂಗ, ಕಾರಂತ ಕೈಲಾಸಂ ಮುಂತಾದ ಲೇಖಕರೂ ಭಾರತೀಯ ಸಂಪ್ರದಾಯಕ್ಕೆ ತಮ್ಮದೇ ಆದ ಬೇರೆ ಬೇರೆ ತೀವ್ರತೆಯಲ್ಲಿ ವಿರೋಧಿಸುವವರೂ ಇದ್ದರೆಂಬುದನ್ನು.
ಶಿಷ್ಟಪರಂಪರೆಯಂತೆ ಜನಪದ ಪರಂಪರೆಯಲ್ಲೂ ಈ ಪ್ರಕ್ರಿಯೆಯನ್ನು ಗುರುತಿಸಬಹುದಾಗಿದೆ. ಇದಕ್ಕೆ ಉದಾಹರಣೆಯಾಗಿ ಒಂದು ಸಾಮಾನ್ಯ ನಿದರ್ಶನವನ್ನು ನಾವು ನೋಡಬಹುದು. ಹಲವಾರು ಬಡಾವಣೆಗಳು ದೇವರ ಹೆಸರಿನಲ್ಲಿವೆ ಎಂದು ಹೇಳಿದೆ. ಆದರೆ ಕೆಲವು ಬಡಾವಣೆಗಳು ಜನಸಾಮಾನ್ಯರ ಹೆಸರಿನಿಂದಲೇ ಗುರುತಿಸಲ್ಪಡುವುದನ್ನೂ ಕಾಣಬಹುದು. ತಮ್ಮ ತಮ್ಮ ಹೊಲಗಳನ್ನು ಬಡಾವಣೆಗಳನ್ನಾಗಿ ಮಾಡುವಾಗ, ಪಕ್ಕದವನು ದೇವರ ಹೆಸರನ್ನಿಡುತ್ತಿದ್ದರೂ, ತನ್ನ ಬಡಾವಣೆಯನ್ನು ತನ್ನದೇ ಹೆಸರಿನಿಂದ, ತಿಮ್ಮರಾಯಿ ಲೇಔಟ್, ಕರಿಯಪ್ಪ ಲೇಔಟ್, ಓಬ್ಳಪ್ಪ ಗಾರ್ಡನ್ ಇತ್ಯಾದಿಯಾಗಿ ಕರೆಯುವುದೇ ಪರಂಪರೆಗೆ ತೋರುವ ವಿರೋಧ ಎನ್ನಬಹುದು. ಈ ಗುಣವೇ ನಿಜವಾದ ಜಾತ್ಯಾತೀತ ಮನೋಭಾವ ಕೂಡಾ.
ಲೋಹಿಯಾ ಪ್ರಭಾವದಿಂದಾಗಿ ಜಾತೀಯತೆಯ ಬಗ್ಗೆ ಸ್ಪಷ್ಟವಾದ ನಿಲುವುಗಳು, ಪರಿಹಾರೋಪಾಯಗಳು ತೇಜಸ್ವಿಯವರಿಗಿದ್ದವು. ಆದರೆ ಸಾವಿರಾರು ವರ್ಷಗಳಿಂದ ಮೂಲೆಗುಂಪಾಗಿದ್ದ ಬಹುಸಂಖ್ಯಾತರ ಮನವೊಲಿಸಿ ಒಂದಷ್ಟು ಜಾಗೃತಿ ಮೂಡಿಸಿ, ಒಂದು ಸ್ವಚ್ಛಂದ, ಸಮಾನ ಎನ್ನಬಹುದಾದ ವ್ಯವಸ್ಥೆಯಡಿ ತರುತ್ತಿದ್ದೇವೆ ಅನ್ನುವಷ್ಟರಲ್ಲಿ, ಅದರಲ್ಲಿ ಮೂಡಿದ ಬಿರುಕುಗಳನ್ನು ಕಂಡು ಅವರು ಚಿಂತಿತರಾಗಿದ್ದರು.
ಮೂಲಭೂತವಾದ
ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದ, ಅದರ ಪರಿಣಾಮವಾಗಿ ಭಾರತದ ಸಕ್ಯೂಲರ್ ಆಂದೋಳನ ಶಿಥಿಲವಾಗುತ್ತಿರುವುದು ಇವುಗಳ ಬಗ್ಗೆ ತೇಜಸ್ವಿ ಮಾತನಾಡಿದ್ದಾರೆ. ಮುಸ್ಲಿಂ ಮೂಲಭೂತವಾದವನ್ನು ಹತ್ತಿಕ್ಕಲು ಹಿಂದೂ ಮೂಲಭೂತವಾದಿಗಳು ಬಳಸಿಕೊಳ್ಳುತ್ತಿರುವುದು ಭಾರತದ ಸೆಕ್ಯೂಲರ್ ಪರಿಸರವನ್ನು. ಮೂಲಭೂತವಾದಿ ಸಾಬರ ಮೇಲಿನ ಸಿಟ್ಟನ್ನು ಉಪಯೋಗಿಸಿಕೊಂಡು ಹಿಂದೂ ಮತಾಂದರು ಭಾರತದ ಸೆಕ್ಯುಲರ್ ಅಂದೋಳವನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಶೂದ್ರರು ದಲಿತರು ಮತ್ತೆ ಪುರೋಹಿತಶಾಹಿಯ ಅನಿಷ್ಟ ಸಂಕೋಲೆಯೊಳಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಅರಿವಿದ್ದೂ ಮೃದುವಾಗಿರುವವರು ಬಡಪಾಯಿ ಶೂದ್ರರನ್ನೂ ದಲಿತರನ್ನು ಇನ್ನೂ ದಾರಿ ತಪ್ಪಿಸುತ್ತಿದ್ದಾರೆ ಎಂದು ತೇಜಸ್ವಿಯವರು ತುಂಬಾ ಗಂಭೀರವಾಗಿ ಮಾತನಾಡಿದ್ದಾರೆ. ಇವೆಲ್ಲದರ ಒಟ್ಟು ಪರಿಣಾಮ ಭಾರತ ಧರ್ಮನಿರಪೇಕ್ಷ ಜಾತ್ಯಾತಿತ ರಾಷ್ಟ್ರ ಎಂಬ ಕಲ್ಪನೆಯೇ ಹಾಸ್ಯಾಸ್ಪದವಾಗುವ ಅಪಾಯ ಸೃಷ್ಟಿಯಾಗುವುದು.
ಕೃಷ್ಣೇಗೌಡನ ಆನೆ ಕಥೆಯಲ್ಲಿ ಬರುವ ಪುರಸಭೆ ಅಧ್ಯಕ್ಷ ಖಾನ್ ಸಾಹೇಬನ ಪರಿಸ್ಥಿತಿ ನೋಡಿ. ಅಧಿಕಾರವಿದ್ದರೂ, ವಿಷಯ ತಿಳಿದಿದ್ದರೂ ಏನೂ ಮಾಡಲಾಗದ ಸ್ಥಿತಿ. ಆತ ಕೇವಲ ಮುಸ್ಲಿಂ ಎನ್ನುವ ಕಾರಣಕ್ಕೆ ತನ್ನ ಕೈಗಳನ್ನು ತಾನೇ ಕಟ್ಟಿಕೊಳ್ಳಬೇಕಾಗಿದೆ. ಇದು ಭಾಳ ಸೆನ್ಸಿಟೀವ್ ಮ್ಯಾಟರು. ನಾನು ಮುಸಲ್ಮಾನ್ ಆಗಿದ್ದುಕೊಂಡು ಧರ್ಮಸ್ಥಳದ ವಿರುದ್ಧ ಹೇಳಿಕೆ ಕೊಟ್ಟರೆ ತುಂಬಾ ಅಪಾರ್ಥ ಬಂದು ಬಿಡುತ್ತೆ. ಧರ್ಮಸ್ಥಳದ ಮೇಲೆ ಸುಳ್ಳು ಆಪಾದನೆ ಮಾಡ್ತಿದಾನೆ ಅಂದು ಬಿಡ್ತಾರೆ ಸಲೀಸಾಗಿ. ಎಷ್ಟು ನಾಯಿ ಕೊಂದರೂ ಮತ್ತೆ ಹೊಸಾ ನಾಯಿಗಳು ಎಲ್ಲಿಂದ ಬರ್ತಿುವೆ ಅಂತ ಚೂರು ಯೋಚನೆ ಮಾಡೋಲ್ಲ. ಎಂಬ ಪುರಸಭೆಯ ಅಧ್ಯಕ್ಷ, ಖಾನ್ ಸಾಹೇಬರ ಮಾತುಗಳು ಮುಸ್ಲಿಮರನ್ನು ನಾವು ನಮ್ಮೊಳಗಿದ್ದು ನಮ್ಮಂತಾಗಲು ಬಿಟ್ಟೇ ಇಲ್ಲವೋ ಅಥವಾ ಅವರೇ ನಮ್ಮಂತಾಗಿಲ್ಲವೋ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಂತಹ ಸನ್ನಿವೇಶ ಸೃಷ್ಟಿಗೆ ಕಾರಣರಾರು? ಹಿಂದೂಗಳನ್ನು ಕೇಳಿದರೆ ಮುಸ್ಲಿಮರೇ ಎನ್ನುತ್ತಾರೆ. ಮುಸ್ಲಿಮರನ್ನು ಕೇಳಿದರೆ ನಾವು ಅಲ್ಪಸಂಖ್ಯಾತರು ಏನೂ ಮಾಡಿದರೂ ಇಲ್ಲಿ ತಪ್ಪು ಎನ್ನುತ್ತಾರೆ. ಅದಕ್ಕೆ ಹಿಂದೂಗಳೇ ಕಾರಣ ಎಂದುಬಿಡುತ್ತಾರೆ.
ಇಲ್ಲಿಯೇ ಇನ್ನೊಂದು ಪ್ರಶ್ನೆಯನ್ನು ಹಾಕಿಕೊಳ್ಳಬಹುದು. ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ಅಂದರೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂರಾಷ್ಟ್ರ ಸಂರಕ್ಷಣೆಗೆ ನಿಲ್ಲುವುದು ತಪ್ಪೆ? ಎಂಬುದೇ ಆ ಪ್ರಶ್ನೆ. ಯಾವುದೇ ಮೂಲಭೂತವಾದದಿಂದ ನಮ್ಮನ್ನು ನಾವು, ನಮ್ಮ ಸ್ವಂತಿಕೆಯನ್ನು ನಾವು ರಕ್ಷಿಸಿಕೊಳ್ಳಬೇಕಾದ್ದೆ. ಇಂದು ಭಾರತೀಯ ಸೆಕ್ಯುಲರ್ ಮನಸ್ಥಿತಿಯು ಎದುರಿಸುತ್ತಿರುವ ಸಮಸ್ಯೆ ಕೇವಲ ಮುಸ್ಲಿಂ ಮೂಲಭೂತವದದ್ದಲ್ಲ. ಅದು ಹಿಂದೂ ಮೂಲಭೂತವಾದದ್ದೂ ಹೌದು. ಆದರೆ, ಅದಕ್ಕಾಗಿ ಅಮಾಯಕ ಮುಸ್ಲಿಮರನ್ನು ಕೊಲ್ಲುವುದು, ಅವರನ್ನು ಕೊಲ್ಲಲು ಅಮಾಯಕ ಹಿಂದೂಜನರನ್ನು ಬಳಸಿಕೊಳ್ಳುವುದು ಎಷ್ಟು ಸರಿ? ಎಂಬ ಪ್ರಶ್ನೆ ಬರುತ್ತದೆ.
ಮುಸ್ಲಿಂ ಮೂಲಭೂತವಾದಿಗಳ ಹಾಗೂ ಅವರ ಉಗ್ರವಾದಿತ್ವದಿಂದ ಪ್ರತಿಯೊಬ್ಬ ಮುಸ್ಲಿಮನನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವೊಮ್ಮೆ ಅದಕ್ಕೆ ತಕ್ಕಂತೆ ಭಾರತೀಯ ಮುಸ್ಲಿಮರೂ ತಾಳ ಹಾಕುವುದುಂಟು. ಅದನ್ನು ನೋಡಿಯೇ ತೇಜಸ್ವಿ ಮುಸ್ಲಿಮರಿಗೆ ನೇರವಾಗಿಯೇ ಹೇಳುತ್ತಾರೆ. ಮುಸ್ಲಿಮರು ನಿಜವಾಗಿಯೂ ಮರ್ಯಾದೆಯಾಗಿ ಬದುಕಬೇಕೆಂದಿದ್ದರೆ, ಅವರಿಗೆ ಭವಿಷ್ಯ ಇರುವುದು ಭಾರತೀಯ ಸೆಕ್ಯುಲರ್ ಸಮುದಾಯದೊಡನೆ ಹೊರತು, ಮುಸ್ಲಿಂ ಮೂಲಭೂತವಾದದೊಡನೆ ಅಲ್ಲ ಎಂದು. ಇಂದು, ಸದೃಡ ಹಾಗೂ ಶಾಂತಿಯುತ ಭಾರತದ ನಿರ್ಮಾಣಕ್ಕಾಗಿ ನಮ್ಮೆದುರಿಗೆ ಇರುವ ತುರ್ತು ಏನೆಂದರೆ, ಅಂತಹ ಸೆಕ್ಯುಲರ್ ಸಮುದಾಯವನ್ನು ಬಲಪಡಿಸುವುದೇ ಆಗಿದೆ.





jaati annuvudu ondu gumpugaarike, adu yaava jatiye aagirali. namma samskruti halavaaru saavira varushagalinda beledu bandide, nunategalu ive, aneeka! iruvudannu kittu haakuvudu sulabha aaga munde namma deshadalli yaava jaatiyuu, yaava matavu illadante aguttde. devasthanan masidi, church ivu yaavudakku bele/artha iruvudilla. prapanchada ella revolution saha overnight aadaddu alla. pratiyabba vyaktiguu avarige bekaaguva matavannu chunaayisikolluva hakku iddare saaku.
`hindu’ endu `molabhutavaadi’yagalara ennuvudakke `tejaswi’yavaranthavare sakshi. `Hindu dharma’vannu atyanta `katu’vaagi teekisiyu baduki ulidavara kate `hindu dharma’da udarateyannu saaruttade. `nastika vaada’ bodhisida `charvaknu illi `rushi’yagi gouravisalpaduttane. `Astikaru, nastikaru, konege vividha mata, panthiyaru illi `sahabalve’ nadesuttare. gaali, neeru, benki, mara, betta, konege aakashadallu devarannu kanuva hinduvige obba `alla’, athava obba `esu’ hechchagalara. athyanta sampradayasta `bramhana’ kutumbadalli janisida nannamma `baba gadduge’ge prati shukravara sakkare odisutiddalu. Sampradayasta nannajjana pakkada maneyalli katta musalmana kutumba nenndadiyinda jeevisutittu.. Samasye iruvudu `islam’ haagu `crista’ semetic `obbane devaru’, onde `dharma grantha’ `namma devaru bittu innu devaru illa. muktige, mokshakke, swargakke namma devaronde gati’ endu nambuva haage nambadavarannu kollalu hesada e simetic matagalli, mattu adara katta anuyayigalli. higaagi udarate, paramata sahishnute bodhisabekagiddudu inthaha `koopa mandukagalige’ horatu, `iruvudellavu satya, vidwamsaru adannu bere bege reetiyalli varnisiddare’ ennuva `hindu darmigaligalla’ ennuva satya innadaru `jatyateetate’ya bannada `kannadakagalli’ noduva `bu[su’ddijeevi’galige arthavadare avarannu hetta `bharata mate’ nemmadiya nittusiru bettalu!