ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ನಿರ್ಗಮನಗಳ ಕಾಲ..

12512039_1668749780064494_1590682937_n

ನನಗೂ ಇದು ಬಹಳ ನೋವು ತಂದ ಸಂಗತಿ. ಅದೊ ಮೊದಲಾದಾಗಿನಿಂದ ‘ಗಾಂಧಿಬಜಾರ್’ ಓದಿರುವವನು ನಾನು.

ಬಾ.ಕಿ.ನ, ಅವರ ಸರಳತೆ ಮತ್ತು ಪ್ರೀತಿಗಳು ಬಹುಕಾಲದಿಂದ ಮನಸ್ಸಿನಲ್ಲಿ ಉಳಿದಿವೆ. ಒಳ್ಳೆಯದೆಲ್ಲ ನಾಶವಾಗುವ, ಪಡಪೋಶಿಗಳು ಮಾತ್ರ ಉಳಿಯುವ ಈ ನಮ್ಮ ಕಾಲ ಕೆಟ್ಟ ಕಾಲ.

ಪುಸ್ತಕ ಪ್ರಕಾಶನ ಮತ್ತು ಪತ್ರಿಕಾ ಪ್ರಕಟಣೆಗೆ ಮಾದರಿಯಾದ ಲಿಪಿ ಪ್ರಕಾಶನ, ಬಾ.ಕಿ.ನ. ಇಬ್ಬರಿಗೂ ವಂದನೆಗಳು.

ಭಾವನಾ, ದೇಶ-ಕಾಲ, ಅತ್ರಿ, ಪ್ರಿಮಿಯರ್, ಹರಿಹರಪ್ರಿಯರ ಪತ್ರಿಕೆ…

ಇದು ನಿರ್ಗಮನಗಳ ಕಾಲ……..

-ಎಚ್.ಎಸ್. ರಾಘವೇಂದ್ರ ರಾವ್

ಸಾಹಿತ್ಯದ ಗೀಳನ್ನಂಟಿಸಿಕೊಂಡ ಬಾಕಿನ , ಬದುಕಿನಲ್ಲಿ ಕೊನೆಗೂ ವ್ಯವಹಾರ ಸ್ಥರಾಗಲಿಲ್ಲ!

ಗಾಂಧಿ ಬಜಾರ್ ವೈಶಿಷ್ಟ್ಯ ಕ್ಕೆ ಬಾಕಿನ, ಇದೋ ನಿಮಗೆ ಸಲಾಂ!

-ಶರತ್ ಕಲ್ಕೋಡ್ 

ಬಾಕಿನ ಒಂದು ಸಾಹಿತ್ಯ ಪತ್ರಿಕೆಯನ್ನು ಆರಂಭಿಸಬೇಕು ಅಂದುಕೊಂಡಾಗ, ಅದಕ್ಕೆ ಗಾಂಧೀಬಜಾರ್ ಅನ್ನು ಶೀರ್ಷಿಕೆ ಕೊಟ್ಟವರು ವೈಯನ್ಕೆ. ಗಾಂಧೀ ಬಜಾರ್ ಬಹುಶಃ ಇಂಡಿಯಾದ ಮೊದಲ ಬಡಾವಣೆ ಪತ್ರಿಕೆ. ಅದು ಗಾಂಧೀಬಜಾರು ಪ್ರದೇಶದಲ್ಲಿ ಮಾತ್ರ ಪ್ರಸಾರದಲ್ಲಿತ್ತು. ಅದರ ಆಕಾರವೂ ಬೇರೆಯಿತ್ತು ಎಂದು ನೆನಪು. ನಂತರ ಅದನ್ನು ಬಾಕಿನ ವಿಸ್ತರಿಸಿದರು. ಆರಂಭದ ಪತ್ರಿಕೆಗಳಲ್ಲಿ ವೈಯನ್ಕೆ ಜೋಕ್ ಫಾಲ್ಸ್ ಬರೆಯುತ್ತಿದ್ದರು. ಬಹುತೇಕ ಎಲ್ಲ ಹಿರಿಯ ಪ್ರಮುಖ ಲೇಖಕರೂ ಬರೆಯುತ್ತಿದ್ದರು ಎಂದು ನೆನಪು.

ಬಾಕಿನ ಅವರ ಲಿಪಿ ಮುದ್ರಣಕ್ಕೆ ಹಿರಿಯ ಸಾಹಿತಿಗಳೆಲ್ಲ ಬಂದು ತಮ್ಮ ಕೃತಿಯ ಮುದ್ರಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಚ್ಚಿನ ತಪ್ಪುಗಳನ್ನು ಹುಡುಕುತ್ತಿದ್ದರು. ಬಾಕಿನ ಅವರಿಗೆಲ್ಲ ಕಾಫಿ, ಟೀ, ಬಜ್ಜಿ ತರಿಸಿ ಕೊಡುತ್ತಿದ್ದರಂತೆ. ಮಾಸ್ತಿ, ಪುತಿನ, ಕೆ ಎಸ್ ನ ಅಡಿಗ- ಎಲ್ಲರೂ ಅಲ್ಲಿಗೆ ಬರುತ್ತಿದ್ದರೆಂದು ಕೇಳಿದ್ದೆ.
ಬಾಕಿನ ಮುದ್ರಣಾಲಯಕ್ಕೆ ನಾನೂ ಆಗಾಗ ಹೋಗುತ್ತಿದ್ದೆ. ಅಲ್ಲಿ ಕೂತು ಕಾಫಿ ಕುಡಿದು ಹರಟೆ ಹೊಡೆಯುತ್ತಿದ್ದೆವು. ಗಾಂಧೀ ಬಜಾರಿನಲ್ಲಿ ಖರ್ಚಿಲ್ಲದ್ ಕೂತು ಪಟ್ಟಾಂಗ ಕೊಚ್ಚುವುದಕ್ಕೆ ಅದು ಒಳ್ಳೆಯ ಜಾಗವೂ ಆಗಿತ್ತು.

ಗಾಂಧೀ ಬಜಾರಿನಲ್ಲಿ ನಾನು ಆಸಕ್ತಿಯಿಂದ ಓದುತ್ತಿದ್ದದ್ದು ಬಾಕಿನ ಅವರ ಲೇಖನವನ್ನು ಮಾತ್ರ. ಅವರ ಸಂಪಾದಕೀಯ ಮತ್ತು ಕೊನೆಯ ಪುಟದಲ್ಲಿ ಅವರು ಬರೆಯುತ್ತಿದ್ದ ಬರಹ ಆಸಕ್ತಿಯಿಂದ ಓದಿಸಿಕೊಳ್ಳುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದನ್ನು ಬಿಟ್ಟು, ಬೇರೆ ಯಾವ ಲೇಖನವೂ ನನ್ನ ಗಮನ ಸೆಳೆದಿರಲಿಲ್ಲ.
ವೈಯನ್ಕೆ ಅವರನ್ನು ನೆನಪಿಸುತ್ತಿದ್ದ, ಬಾಕಿನ ಅವರ ನಗುಮುಖವನ್ನು ಹೊಳಪು ಕಣ್ಣನ್ನು ತಿಂಗಳಿಗೊಮ್ಮೆ ಕಣ್ಮುಂದೆ ತರುತ್ತಿದ್ದ ಗಾಂಧೀ ಬಜಾರ್ ಇನ್ನು ಬರುವುದಿಲ್ಲ ಅನ್ನುವುದು ಕಸಿವಿಸಿಯ ಸಂಗತಿ.

ಹಾಗಂತ, ನಾನು ನಿಮಗೆ ಸಹಾಯ ಮಾಡ್ತೀನಿ, ಬಾಕಿನ. ಪತ್ರಿಕೆ ಮುಂದುವರಿಸಿ ಅಂತ ಹೇಳುವ ಧೈರ್ಯವಂತೂ ನನಗಿಲ್ಲ. ನಾವೆಲ್ಲ ನಮ್ಮ ನಮ್ಮ ರಗಳೆಗಳಲ್ಲಿ ಮುಳುಗಿಹೋಗಿದ್ದೇವಲ್ಲ.

-ಜೋಗಿ

Many claim-rightly so-credit for bringing out Samagrakavya 1975 of Gopalakrishna Adiga. But it was BA KI NA who did all the ground work on daytoday basis in the press. By nature he is deeply introvert but unlike many introverts who are self obsessed here was BA KI NA who use to understand silence of others. He had that rare gift of understanding what was going in Adigas mind without he even murmuring,Cover page was also done by him.

I took out this book today as this was one of the recommendations by Guardian, must read books on Capitalism – and more specifically its failings, and to find out that I was using this visiting card as a bookmark. As only yesterday I had read that the long serving literary little magazine ‘Gandhi Bazar’ is getting closed! The editor of this magazine ‘Ba ki na’ who also used to run a publishing house ‘Lipi Mudrana’ was the first one to publish complete poems of KSN and Gopalakrishna Adiga if I am not mistaken! He had handed over this visiting card when I had met him in his office at the end of Gandhi Bazar.

-Guruprasad D Narayana

YNK yondige aarambhavad Gandhi Bazar jote nannadu prarambhada nantu ; putta putta lekhana/chutua/ vidambane ranga varthegallannu breyutta YNK/ Ba Ki Na sneha saviyutta Patrike Nelesutta – chanda daararannu maadutta – kalakshetradallii patrike maarutta todagikondavanu naanu ; mundeyaoo aagaag vimarshe/lekhana baredaddoo ide ; Udaya Vani yalli Patikeya bagge vistrata lekhana barediddanenapoo marakalisuttide ; Moovattu varsha nintidda patrike eega” Nintu”

hogiruva suddi noovu tandide ; kaaya tasmai namaha…

– Narayan Raichur

‍ಲೇಖಕರು Admin

8 January, 2016

4 Comments

  1. ಜೋಗಿ

    ಬಾಕಿನ ಒಂದು ಸಾಹಿತ್ಯ ಪತ್ರಿಕೆಯನ್ನು ಆರಂಭಿಸಬೇಕು ಅಂದುಕೊಂಡಾಗ, ಅದಕ್ಕೆ ಗಾಂಧೀಬಜಾರ್ ಅನ್ನು ಶೀರ್ಷಿಕೆ ಕೊಟ್ಟವರು ವೈಯನ್ಕೆ. ಗಾಂಧೀ ಬಜಾರ್ ಬಹುಶಃ ಇಂಡಿಯಾದ ಮೊದಲ ಬಡಾವಣೆ ಪತ್ರಿಕೆ. ಅದು ಗಾಂಧೀಬಜಾರು ಪ್ರದೇಶದಲ್ಲಿ ಮಾತ್ರ ಪ್ರಸಾರದಲ್ಲಿತ್ತು. ಅದರ ಆಕಾರವೂ ಬೇರೆಯಿತ್ತು ಎಂದು ನೆನಪು. ನಂತರ ಅದನ್ನು ಬಾಕಿನ ವಿಸ್ತರಿಸಿದರು. ಆರಂಭದ ಪತ್ರಿಕೆಗಳಲ್ಲಿ ವೈಯನ್ಕೆ ಜೋಕ್ ಫಾಲ್ಸ್ ಬರೆಯುತ್ತಿದ್ದರು. ಬಹುತೇಕ ಎಲ್ಲ ಹಿರಿಯ ಪ್ರಮುಖ ಲೇಖಕರೂ ಬರೆಯುತ್ತಿದ್ದರು ಎಂದು ನೆನಪು.
    ಬಾಕಿನ ಅವರ ಲಿಪಿ ಮುದ್ರಣಕ್ಕೆ ಹಿರಿಯ ಸಾಹಿತಿಗಳೆಲ್ಲ ಬಂದು ತಮ್ಮ ಕೃತಿಯ ಮುದ್ರಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಚ್ಚಿನ ತಪ್ಪುಗಳನ್ನು ಹುಡುಕುತ್ತಿದ್ದರು. ಬಾಕಿನ ಅವರಿಗೆಲ್ಲ ಕಾಫಿ, ಟೀ, ಬಜ್ಜಿ ತರಿಸಿ ಕೊಡುತ್ತಿದ್ದರಂತೆ. ಮಾಸ್ತಿ, ಪುತಿನ, ಕೆ ಎಸ್ ನ ಅಡಿಗ- ಎಲ್ಲರೂ ಅಲ್ಲಿಗೆ ಬರುತ್ತಿದ್ದರೆಂದು ಕೇಳಿದ್ದೆ.
    ಬಾಕಿನ ಮುದ್ರಣಾಲಯಕ್ಕೆ ನಾನೂ ಆಗಾಗ ಹೋಗುತ್ತಿದ್ದೆ. ಅಲ್ಲಿ ಕೂತು ಕಾಫಿ ಕುಡಿದು ಹರಟೆ ಹೊಡೆಯುತ್ತಿದ್ದೆವು. ಗಾಂಧೀ ಬಜಾರಿನಲ್ಲಿ ಖರ್ಚಿಲ್ಲದ್ ಕೂತು ಪಟ್ಟಾಂಗ ಕೊಚ್ಚುವುದಕ್ಕೆ ಅದು ಒಳ್ಳೆಯ ಜಾಗವೂ ಆಗಿತ್ತು.
    ಗಾಂಧೀ ಬಜಾರಿನಲ್ಲಿ ನಾನು ಆಸಕ್ತಿಯಿಂದ ಓದುತ್ತಿದ್ದದ್ದು ಬಾಕಿನ ಅವರ ಲೇಖನವನ್ನು ಮಾತ್ರ. ಅವರ ಸಂಪಾದಕೀಯ ಮತ್ತು ಕೊನೆಯ ಪುಟದಲ್ಲಿ ಅವರು ಬರೆಯುತ್ತಿದ್ದ ಬರಹ ಆಸಕ್ತಿಯಿಂದ ಓದಿಸಿಕೊಳ್ಳುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದನ್ನು ಬಿಟ್ಟು, ಬೇರೆ ಯಾವ ಲೇಖನವೂ ನನ್ನ ಗಮನ ಸೆಳೆದಿರಲಿಲ್ಲ.
    ವೈಯನ್ಕೆ ಅವರನ್ನು ನೆನಪಿಸುತ್ತಿದ್ದ, ಬಾಕಿನ ಅವರ ನಗುಮುಖವನ್ನು ಹೊಳಪು ಕಣ್ಣನ್ನು ತಿಂಗಳಿಗೊಮ್ಮೆ ಕಣ್ಮುಂದೆ ತರುತ್ತಿದ್ದ ಗಾಂಧೀ ಬಜಾರ್ ಇನ್ನು ಬರುವುದಿಲ್ಲ ಅನ್ನುವುದು ಕಸಿವಿಸಿಯ ಸಂಗತಿ.
    ಹಾಗಂತ, ನಾನು ನಿಮಗೆ ಸಹಾಯ ಮಾಡ್ತೀನಿ, ಬಾಕಿನ. ಪತ್ರಿಕೆ ಮುಂದುವರಿಸಿ ಅಂತ ಹೇಳುವ ಧೈರ್ಯವಂತೂ ನನಗಿಲ್ಲ. ನಾವೆಲ್ಲ ನಮ್ಮ ನಮ್ಮ ರಗಳೆಗಳಲ್ಲಿ ಮುಳುಗಿಹೋಗಿದ್ದೇವಲ್ಲ.

    • ಶಮ, ನಂದಿಬೆಟ್ಟ

      “ಹಾಗಂತ, ನಾನು ನಿಮಗೆ ಸಹಾಯ ಮಾಡ್ತೀನಿ, ಬಾಕಿನ. ಪತ್ರಿಕೆ ಮುಂದುವರಿಸಿ ಅಂತ ಹೇಳುವ ಧೈರ್ಯವಂತೂ ನನಗಿಲ್ಲ. ನಾವೆಲ್ಲ ನಮ್ಮ ನಮ್ಮ ರಗಳೆಗಳಲ್ಲಿ ಮುಳುಗಿಹೋಗಿದ್ದೇವಲ್ಲ.” ನಿಜವಾದ ಮಾತು..

      ಢಾಂಬಿಕತೆ, ಸೋಗು ಮುಖವಾಡಗಳಿಲ್ಲದ ನಿಮ್ಮ ಈ ನೇರವಂತಿಕೆ ನನಗಿಷ್ಟ ಸರ್.

  2. kvtirumalesh

    `ಗಾಂಧಿ ಬಜಾರ್ ಪತ್ರಿಕೆ’ ಒಂದು ಸಾಮಾನ್ಯ ಮನುಷ್ಯನ ಸಾಹಿತ್ಯ ಪತ್ರಿಕೆ–a common man’s literary journal. ಸ್ಮಾರ್ಟ್ ಪತ್ರಿಕೆಯಲ್ಲ. ಅಂಥದೊಂದು ಪತ್ರಿಕೆಯ ಅಗತ್ಯವಿತ್ತು, ಈಗಲೂ ಇದೆ ಅನಿಸುತ್ತದೆ. ಪ್ರಸಿದ್ಧರು, ಅಪ್ರಸಿದ್ಧರು, ಹಳಬರು, ಹೊಸಬರು ಅದರಲ್ಲಿ ಬರೆಯುತ್ತಿದ್ದರು. ಅಲ್ಲಿ ಎಲ್ಲರಿಗೂ ಸ್ವಾಗತವಿತ್ತು. ಬಾ.ಕಿ.ನ. ಅವರಿಗೆ ಸಹಾಯಕರಿಲ್ಲದ ಕಾರಣ ಲೇಖಕರ ಜೊತೆ ಸಂಪರ್ಕ ಇರಿಸಿಕೊಂಡು `ಬರೆಯಿಸುವುದು’ ಬಹುಶಃ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
    ಇನ್ನೆಲ್ಲೂ ಪ್ರಕಟವಾಗದ ಲೇಖನಗಳನ್ನು ಅವರು ಪ್ರಕಟಿಸುತ್ತಿದ್ದರು. ಒಮ್ಮೆ ನನ್ನ `ಶ ಷ ವಿತರಣ ವಿಚಾರ’ ಎಂಬ ಲೇಖನವನ್ನು ಅವರು ಪ್ರಕಟಿಸಿದ್ದರು, ಅದೇ ರೀತಿ ವ್ಯಾಕರಣಕ್ಕೆ ಸಂಬಂಧಿಸಿದ ಇತರ ಕೆಲವು ಲೇಖನಗಳನ್ನು ಸಹಾ. `ಶ ಷ ವಿತರಣ ವಿಚಾರ’ ಓದಿದ ಕನ್ನಡ ಅಧ್ಯಾಪಕರೊಬ್ಬರು ಖುಷಿಯಿಂದ ನನಗೆ ಪತ್ರ ಬರೆದಿದ್ದರು. ಈಚೆಗಷ್ಟೇ ಕಾನ್ ಸ್ಟಾಂಟಿನ್ ಕವಾಫಿಯ (ಗ್ರೀಕ್ ಕವಿ) ಕವಿತೆಗಳ ನನ್ನ ಅನುವಾದಗಳ ಗುಚ್ಛ `ಗಾಂಧಿ ಬಜಾರ್’ನಲ್ಲಿ ಬಂದಿತ್ತು. ಒಮ್ಮೆ ಈ ಪತ್ರಿಕೆ ಹೊಸ ಕನ್ನಡ ಕವಿತೆಗಳಿಗೇ ಒಂದು ಸಂಚಿಕೆಯನ್ನು ಮೀಸಲಿರಿಸಿತ್ತು!
    `ಗಾಂಧಿ ಬಜಾರ್’ ಅಲ್ಲದೆ ಇಂಥವಕ್ಕೆಲ್ಲ ಎಲ್ಲಿ ಸ್ಥಾನ ಸಿಗುತ್ತಿತ್ತು?
    ಬಾ.ಕಿ.ನ., ನಿಮಗೆ ಕೃತಜ್ಞತೆಗಳು!
    ಕೆ.ವಿ.ತಿರುಮಲೇಶ್

  3. Anonymous

    naanu kav alla,patrakartanoo alla aadare ba.ki.na. avara parichita snehita, gandhi bazar nalli iddaddu haagoo namma bruhat kutumbada parichaya.
    aagaage Gandhibazar ooduttidde.
    Adu nilluva suddi manassige besaravaayitu.
    Kannada patrikiyondu nilliuvudu adarallu sneha jiviyege aaptavaadaddu.
    nimma nagu haage irali Balakrishna avare.

    Balakrishna T.G.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading