ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ನಿಜವಾದ ಅಪಾಯದ ಸ್ಥಿತಿ ..

ಕಿರಣ್ ಗಾಜನೂರು

ಮಹಿಳೆಯರು ಋತುಚಕ್ರದಲ್ಲಿ ಬಳಸುವ ನ್ಯಾಪ್ಕಿನ್ ಕುರಿತ ಮಾಳವಿಕಾ  ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು ಅಂದರು ಇಷ್ಟು ಹೇಳಿದೆ…

“ನಿಜವಾದ ಅರ್ಥದಲ್ಲಿ ಮಾಳವಿಕಾ ಅವರ ಹೇಳಿಕೆ ಸಹಜ ಮಾನವ ಸಂವೇದನೆ ಇಲ್ಲದ ಪೂರ್ಣ ಪ್ರಮಾಣದ ರಾಜಕೀಯ ನಿಲುವಾಗಿದೆ.

ರಾಜಕೀಯ ಅಭಿಲಾಷೆ/ಅಸ್ತಿತ್ವದ/ಅಧಿಕಾರದ ಪ್ರಶ್ನೆ ಹೇಗೆ ಸ್ತ್ರಿಯನ್ನು ಪುರುಷಾಹಂಕಾರದ ಪರಿಧಿಗೆ ಎಳೆದುಕೊಳ್ಳುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಹಾಗೆ ನೊಡುವುದಾದರೆ ಇದು ಮಾಳವಿಕಾ ಅವರು ಹೆಣ್ಣಾಗಿ ಯೋಚಿಸಿದ ವಿಚಾರವಲ್ಲ …!

ಬದಲಾಗಿ ಪಕ್ಷವೊಂದರ ಸೈದ್ಧಾಂತಿಕತೆ ಪ್ರತಿಪಾದಿಸುತ್ತಿರುವ ಮಹಿಳಾ ದೃಷ್ಟಿಕೋನದ ಭಾಗವಾಗಿ ಈ ವಿಚಾರ ಅವರಿಂದ ಬಂದಿದೆ…

ವೈಯಕ್ತಿಕವಾಗಿ ಆಕೆಯನ್ನು ಮಾತನಾಡಿಸಿದರೆ ಅವರು ಇದಕ್ಕೆ ಭಿನ್ನವಾದ ಅಭಿಪ್ರಾಯ ಕೊಡಬಹುದು…

ವಿಶಾಲ ಅರ್ಥದಲ್ಲಿ  ಮಾಳವಿಕಾ ಪ್ರಕರಣ ಭಾರತೀಯ ಪುರುಷ ಪ್ರಧಾನ ರಾಜಕೀಯ ರಂಗ ಮಹಿಳೆಯನ್ನು ಒಳಗೊಳ್ಳಲು ಬಯಸಿರುವ ಮಾದರಿಯ ಪ್ರತಿಬಿಂಬವಾಗಿದೆ ಎಂಬುದನ್ನು ನಾವು ಗ್ರಹಿಸಬೇಕಿದೆ.

ಈ ವಿಷಯದಲ್ಲಿ ಆಕೆಯನ್ನು ಎಕೈಕ ಅಪರಾಧಿ ಮಾಡುವುದಕ್ಕಿಂತ ಹೆಚ್ಚಾಗಿ ಅವರು ಹಾಗೆ ಅನೈಸರ್ಗಿಕವಾಗಿ ಯೋಚಿಸಲು ಪ್ರೇರೆಪಿಸಿದ ನಾವೇ “ಮೌಲ್ಯದ” ಹೆಸರಿನಲ್ಲಿ ಉಳಿಸಿಕೊಂಡು ಬಂದಿರುವ ಸಾಮಾಜಿಕ ಮತ್ತು ರಾಜಕೀಯ ರಚನೆಗಳ ಕುರಿತು ನಾವು ವಿಮರ್ಶಿಸಬೇಕಿದೆ…”

ಆದರೆ ಮಾಳವಿಕಾ ಅವರ ಹೇಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶಿಸುತ್ತಿರುವ  ಕ್ರಮ ನಮ್ಮ ಸಾಮಾಜಿಕ ಮತ್ತು ರಾಜಕೀಯ ಗ್ರಹಿಕೆಗಳಲ್ಲಿ ಆಳವಾಗಿ ಬೇರೂರಿರುವ ಲಿಂಗಾಧಾರಿತ ಮನಸ್ಥಿತಿಯ ವಿಮರ್ಶೆಯಾಗದೆ ಮತ್ತೊಂದು ತೆಳುವಾದ ರಾಜಕೀಯ ಅಭಿಪ್ರಾಯದಂತೆ ಭಾಸವಾಗುತ್ತಿದೆ.

ಇದು ನಿಜವಾದ ಅಪಾಯದ ಸ್ಥಿತಿ ಮತ್ತು ನಮ್ಮ ನಡುವಿನ ಬೌದ್ಧಿಕತೆ ರಾಜಕೀಯ ಕೇಂದ್ರಿತ ಆರೋಪ/ಪ್ರತ್ಯಾರೋಪಗಳಿಗೆ ಸೀಮಿತವಾಗಿರುವುದರ ಲಕ್ಷಣ…

‍ಲೇಖಕರು avadhi

9 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading