ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದನ್ನು ಕಿಚ್ಚಿಲ್ಲದ ಬೇಗೆ ಎನ್ನುತ್ತಾರೇನೋ…

ಉಗಮ ಶ್ರೀನಿವಾಸ್

ಶಿವಮೊಗ್ಗದ ಗೆಳೆಯರೊಬ್ಬರ `ದ್ವಂದ್ವ ದ್ವಾಪರ’ ಎಂಬ ನಾಟಕದ ಒಂದು ಪ್ರಸಂಗ ನೆನಪಿಗೆ ಬಂತು. ಅದು ಹೀಗಿದೆ- ಮಹಾಭಾರತ ಯುದ್ಧದಲ್ಲಿ ಮೇಕಲೆ ಎಂಬಾಕೆಯ ಗಂಡ ಸಾವನ್ನಪ್ಪುತ್ತಾನೆ. ಆಕೆ ಆತನನ್ನು ಮದುವೆಯಾಗಿ ಕೇವಲ ಒಂದು ವಾರ ಮಾತ್ರ ಆಗಿರುತ್ತೆ. ಮಹಾಭಾರತ ಯುದ್ಧಕ್ಕೆ ಹಾಗೂ ತನ್ನ ಗಂಡನ ಸಾವಿಗೆ ಕೃಷ್ಣನೇ ಕಾರಣ ಎಂದು ನಂಬಿದ್ದ ಮೇಕಲೆ ಆತನನ್ನು ದ್ವೇಷಿಸಲು ಶುರುಮಾಡುತ್ತಾಳೆ.

ಇದು ಕೃಷ್ಣನಿಗೂ ತಿಳಿದಿರುತ್ತೆ. ಮೇಕಲೆ ಕೂಡ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾಳೆ. ನಾಟಕದ ಕಡೆಯಲ್ಲಿ ಕೃಷ್ಣನ ಎಲ್ಲಾ ಪವಾಡಗಳು ಮುಗಿದು ಹೋಗಿ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಕುಸಿದು ಕೂರುತ್ತಾನೆ. ಆಗ ಕೃಷ್ಣ – ಮೇಕಲೆಯನ್ನು ಕರೆದು ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಇದು ಸಕಾಲ. ಬಾ ಕೊಲ್ಲು ಎನ್ನುತ್ತಾನೆ. ಆಗ ಮೇಕಲೆ- ಇಲ್ಲಾ ಕೃಷ್ಣ ನಿನ್ನನ್ನು ಕೊಲ್ಲಲಾರೆ. ಒಂದು ವೇಳೆ ನಿನ್ನನ್ನು ಕೊಂದರೆ ನಾಳೆ ಯಾರ ವಿರುದ್ಧ ನಾನು ದ್ವೇಷ ಕಾರಿಕೊಳ್ಳಲಿ ಎನ್ನುತ್ತಾಳೆ. ಒಂದು ಆರೋಗ್ಯಕರ ದ್ವೇಷ ಒಳ್ಳೇದು ಅಲ್ವೆ. ಅದಕ್ಕೆ ನಮ್ಮ ವಚನಕಾರರು ಇದನ್ನು ಕಿಚ್ಚಿಲ್ಲದ ಬೇಗೆ ಎನ್ನುತ್ತಾರೇನೋ ಅಲ್ವಾ]]>

‍ಲೇಖಕರು G

26 March, 2012

1 Comment

  1. sandhya

    ಮೇಖಲೆ ದೈವತ್ವ ಕಳೆದುಕೊ೦ಡ ಕೃಷ್ಣನನ್ನು ಕುರಿತು, “ಸಾವು ಶಿಕ್ಷೆಯಲ್ಲ ನಿನಗೆ, ಪರಿಹಾರ. ನಿನ್ನ ದೈವತ್ವ ಕಳೆದುಕೊ೦ಡು ಅಸಹಾಯಕನಾಗಿ ಬದುಕಿದರೆ ನನ್ನ ನೋವು ನಿನಗೆ ಅರಿವಾದೀತು” ಎ೦ದು ಬದುಕುವ ಶಿಕ್ಷೆ ಕೊಟ್ಟಿದ್ದಿದ್ದರೆ ಅದು ಕೃಷ್ಣನಿಗೆ ಭರಿಸಲಾಗದ ಶಾಪವಾಗುತ್ತಿತ್ತೇನೋ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading