ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇತ್ತ ಓದಲೇಬೇಕಾದ ಎರಡು ಸುದ್ದಿಗಳು

1kusumabale attack

2

ಆರ್‌ಎಸ್‌ಎಸ್‌: ಕುವೆಂಪು ವಿ.ವಿ. ಕುಲಪತಿ ಶ್ಲಾಘನೆ

ಶಿವಮೊಗ್ಗ: ‘ದೇಶದ ಸೌಹಾರ್ದ, ಏಕತೆ, ರಕ್ಷಣೆಗೆ ಶ್ರಮಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ  ನಿಜವಾದ ಜಾತ್ಯತೀತ ಸಂಘಟನೆ’ ಎಂದು ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಜೋಗನ್‌ ಶಂಕರ್ ಶ್ಲಾಘಿಸಿದರು.

ಭಾನುವಾರ  ಇಲ್ಲಿ ಆಯೋಜಿಸಲಾಗಿದ್ದ ಆರ್‌ಎಸ್‌ಎಸ್‌ ‘ನಗರ ಶಾರೀರಿಕೋತ್ಸವ’ದಲ್ಲಿ ಅವರು ಮಾತನಾಡಿದರು.

ಆರ್‌ಎಸ್‌ಎಸ್‌ ಕಾರ್ಯಕರ್ತರು ದೇಶದ ಅಭ್ಯುದಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ದೇಶ ಪ್ರೇಮ ಹಾಗೂ ಸಂಘಟನೆಯ ವಿಷಯ ಬಂದಾಗ ಎಂತಹ ತ್ಯಾಗಕ್ಕಾದರೂ ಸಿದ್ಧರಿರುತ್ತಾರೆ. ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಿದ್ದರೂ ಇಂತಹ ವಿಷಯಗಳಲ್ಲಿ ಪ್ರತಿಯೊಬ್ಬ ಸ್ವಯಂಸೇವಕರೂ ವೈಯಕ್ತಿಕ ಕೆಲಸಕ್ಕಿಂತ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್ ಅವರೂ ಆರ್‌ಎಸ್‌ಎಸ್‌ ಸಂಘಟನೆ ಕುರಿತು ಕುತೂಹಲ ಹೊಂದಿದ್ದರು. ಸಂಘಟನೆಯ ಪ್ರಮುಖ ಕೇಶವ ಬಲಿರಾಂ ಹೆಡಗೇವಾರ್ ಆಹ್ವಾನದ ಮೇರೆಗೆ ಶಾಖೆಯ ಚಟುವಟಿಕೆ ಹತ್ತಿರದಿಂದ ವೀಕ್ಷಿಸಿದ್ದರು. ಸಂಘಟನೆಯ ಒಳಗೆ ಯಾವುದೇ ಅಸ್ಪೃಶ್ಯತೆ ಎಲ್ಲ. ಅಲ್ಲಿ ಎಲ್ಲರೂ ಒಂದೇ ಎಂಬ ವಿಷಯ ತಿಳಿದು ಸೋಜಿಗಗೊಂಡಿದ್ದರು.

ದೇಶಕ್ಕೆ ಇಂತಹ ಸಂಘಟನೆಯ ಅಗತ್ಯವಿದೆ ಎಂದು ಉದ್ಗರಿಸಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು.

‍ಲೇಖಕರು admin

22 March, 2016

4 Comments

  1. Anshad

    ನನ್ನ ಪ್ರೀತಿಯ ಜೋಗನ್ ಶಂಕರ್ ಸರ್..(ಕುವೆಂಪು ವಿಶ್ವ ವಿದ್ಯಾಲಯ)
    ಕಡಲ ಕಿನಾರೆಯ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅನೇಕ ವರ್ಷಗಳ ಉಪನ್ಯಾಸ ವೃತ್ತಿಯನ್ನು ಮಾಡಿ ಸಮಾಜಿಕ ಮೌಲ್ಯಗಳ, ಸಾಮಾಜಿಕ ಸ್ಥರ ವಿನ್ಯಾಸಗಳ ಉಪನ್ಯಾಸಗಳನ್ನು ಮತ್ತು ಸಮಾಜದ ತುಳಿತಕ್ಕೊಳಗಾದ ದಲಿತ ಸಮುದಾಯಗಳ ಕುರಿತಾಗಿ ಪ್ರಬಂಧ,ಸಂಶೋಧನೆಗಳ,ಮೂಲಕ ಅವರ ಏಳ್ಗೆಯ ಕಡೆ ಬೆಳಕು ಚೆಲ್ಲಿದ್ದೀರಿ. ಮನುವಾದದ ಸಾಮಾಜಿಕ ವಿಭಜನೆಯ ಏಣಿ ಶ್ರೇಣಿ ವ್ಯವಸ್ಥೆಯ ಭಾಗವಾಗಿ ಅದನ್ನು ಪ್ರತಿಪಾಧಿಸುವ ಮನುವಾಧೀ ಸಂಘಟನೆಗಳ ಪುಷ್ಟೀಕರಣದಿಂದಾಗಿ ಇವತ್ತಿಗೂ ದಲಿತರ ಪರಿಸ್ಥಿತಿಗಳು ಅತ್ಯಂತ ಅಮಾನವೀಯವಾಗಿದೆ ಎಂಬುದೂ ತಮಗೆ ತಿಳಿದ ವಿಚಾರವೇ ಆಗಿದೆ.
    ಒಂದು ಕಡೆ ಮಡೆ ಮಡೆ ಸ್ನಾನದಂತಹ ನೀಚ ಸಂಸ್ಕೃತಿಗಳು ಇದೇ ಮೂಲಭೂತವಾದಿಗಳ ನೆರಳಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವಾಗ ಸಮಾಜದಲ್ಲಿ ಮಹಿಳೆ ಕೇವಲ ಮನೆಗೆ ಸೀಮಿತ ಎಂದು ಮಹಿಳೆಯರನ್ನು ಮತ್ತಷ್ಟು ಮನುವಾದದ ಅಡಿಯಲ್ಲಿ ತರುವ ಭಾಷಣವನ್ನುಮೋಹನ್ ಭಾಗವತರು ಇತ್ತೀಚೆಗಷ್ಟೇ ಮಾಡಿದ್ದರು. ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅದನ್ನೂ ಗಮನಿಸಿರುತ್ತೀರಿ. ಇತ್ತೀಚೆಗಷ್ಟೇ ದಾದ್ರಿ ಘಟನೆ ನಡೆದಿದೆ.ದಲಿತರ ಜೀವಂತ ಹೆಣವಾಗಿಸುವ ಪ್ರಯತ್ನಗಳೂ ನಡೆದಿದೆ. ಇದಕ್ಕೆಲ್ಲಾ ಮೂಲಭೂತವಾಧಿ ಮನಸುಗಳು ಮತ್ತು ಅಂತಹದ್ದನ್ನು ಪೋಷಿಸುತ್ತಿರುವ ಸಂಘಟನೆಗಳು ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ.
    ಇಷ್ಟೆಲ್ಲದರ ನಡುವೆ ಶಿವಮೊಗ್ಗದಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಂಘವನ್ನು ಸಮರ್ಥಿಸುವ ಗೊಜಿನಲ್ಲಿ ಅಂಬೇಡ್ಕರ್ ರ ನಿಲುವನ್ನು ತಿಳಿಸಿರುತ್ತೀರಿ. ಅಂಬೇಡ್ಕರ್ ರಿಗೆ ಸಂಘದ ಸಂಪೂರ್ಣ ಹಿಡನ್ ಅಜೆಂಡಾ ಗೊತ್ತಿಲ್ಲದ ಕಾಲಘಟ್ಟದಲ್ಲಿ ಅವರು ಸಂಘದ ಕಚೇರಿಗೆ ಬೇಟಿ ನೀಡಿ ರಾಷ್ಟ್ರ ಪ್ರೇಮದ ನಾಟಕದ ಅರಿವಿಲ್ಲದನ್ನು ಗಮನಿಸಿ ಒಳ್ಳೆಯ ಅಭಿಪ್ರಾಯವನ್ನು ಹೇಳಿದ್ದರು. ಅದರೆ ಅಂಬೇಡ್ಕರ್ ಮರಣದ ಸಮಯದಲ್ಲಿ ಹಿಂದೂವಾಗಿ ಮರಣ ಹೊಂದದೆ ನಿಜವಾದ ಮಾನವೀಯ ಸಂಘಂ ಶರಂಣಂ ಗಚ್ಚಾಮಿ ಎನ್ನುವ ಬುದ್ಧನ ಕಡೆ ನೋಟವನ್ನು ಚೆಲ್ಲಿದ್ದರು. ಒಂದೊಮ್ಮೆ ಆರ್ ಎಸ್ ಎಸ್ ಕಡೆಗೆ ಹೆಚ್ಚು ಒಲವಿದ್ದಿದ್ದರೆ ಅವರು ಹಿಂದೂ ಧರ್ಮದಲ್ಲೇ ಮರಣ ಹೊಂದುತ್ತಿದ್ದರು. ಮುಂದುವರೆದು ಆರ್ ಎಸ್ ಎಸ್ ನಂತಹ ಸಂಘದ ಅವಶ್ಯಕತೆ ಇವತ್ತು ನಮಗೆ ಆವಶ್ಯಕತೆ ಇದೆ ಎಂಬ ಮಾತನ್ನು ಹೆಳಿದ್ದೀರಿ ಅದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸದಾ ಪ್ರಗತಿ ಪರವಾಗಿ ಆಲೋಚಿಸುವ ನಿಮ್ಮಂತ ಹಿರಿಯ ಗುರುಗಳು ಈ ರೀತಿಯ ಕರೆಯನ್ನು ಬಹಿರಂಗವಾಗಿ ನೀಡಿದರೆ ಪ್ರಗತಿಪರತೆಯ ಮಾತುಗಳು ಮತ್ತು ತಳ ಸಮುದಾಯಗಳ ಜೀವಪರತೆಯ ನಿಲುವುಗಳು ಪ್ರಶ್ನಾರ್ಹವಾಗಿ ಕಾಣುತ್ತಿದೆ. ಅಥವಾ ತಮ್ಮ ಮಾತುಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿರಲೂ ಬಹುದು. ಆದರೆ ಕೇವಲ ಒಂದು ಸಿದ್ಧಾಂತದಡಿ ಮನುವಾದವನನ್ನು ಬಹಳ ನಾಜುಕಿನಿಂದ ಜನರ ಮನಸಿನೊಳಗೆ ತೂರಿಸುವ ಹಿಂದೂ ರಾಷ್ಟ್ರ ಎನ್ನುವ ಹಳದಿ ಅಂಗಿಯ ಕಡೆ ಮುಖ ಮಾಡುವ ಇಂತಹ ಸಂಘದ ಕಾರ್ಯಕ್ರಮದಲ್ಲಿ ಈ ರೀತಿಯ ಘೋಷ ವಾಕ್ಯಗಳು ಅದೆಷ್ಟು ಸರಿ?ವೈಜ್ಞಾನಿಕ ತಳಹದಿಯ ಮೇಲೆ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂಘದ ಆವಶ್ಯಕತೆ ನಮಗೆ ಜರೂರಿಯಿದೆ ಅದಲ್ಲದೇ ಒಂದು ಧರ್ಮದ ಆದಾರದ ಪ್ಯಾಸಿಸ್ಟ್ ಮನೋಭಾವದ ಸಂಘಗಳು ಭಾರತದಂತಹ ಸುಂದರ ಸಮಾಜದೊಳಗೆ ನಮಗೆ ಬೆಕಾಗಿದೆಯೇ? ಸಂವಿಧಾನದ ನೆಲೆಗಳು,ಸಂವಿಧಾನದ ಆದರ್ಷ, ಜತ್ಯಾತೀತ ಮೌಲ್ಯಗಳಲ್ಲವೇ ಇವತ್ತಿನ ಜರೂರಿ…………..

    ಅನ್ ಷಾದ್ ಪಾಳ್ಯ.

  2. bmbasheer

    ಈ ಸುದ್ದಿಗಳನ್ನು ಓದಿ “ಬ್ರೂಟಸ್ ಯೂ ಟೂ” ಎಂದು ಅಂಬೇಡ್ಕರ್ ಆತ್ಮ ಉದ್ಗರಿಸಿತಂತೆ

  3. kumbar Veerabhadrappa

    ಹ್ಹಾಹ್ಹಾ ಕುಲಪತಿಗಳಾದ ಜೋಗನ್ ಶಂಕರ್ ರವರ ಬಾಯಿಯಿಂದ ಉದುರಿ ನೇರವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕವೇರಿಯನ್ನು ರೋಮಾಂಚನಗೊಳಿಸಿರುವ ಆಣಿಮುತ್ತುಗಳೇ!

  4. M A Sriranga

    ೧. ದೇವನೂರು ಮಹಾದೇವರ ‘ಕುಸುಮಬಾಲೆ’ ವಿಮರ್ಶೆಗೆ ಅತೀತವೆ? ಆ ಕಾದಂಬರಿ ಪ್ರಕಟವಾದಾಗಲೇ ಅದನ್ನು ಕನ್ನಡಕ್ಕೆ ಅನುವಾದ ಮಾಡುತ್ತೇನೆ ಎಂದು ಒಬ್ಬ ಸಾಹಿತಿ ಹಾಗು ವಿಮರ್ಶಕರು (ಬಹುಷಃ ಚಂ ಪಾ ಅವರಿರಬಹುದು) ಹೇಳಿದ್ದ ನೆನಪು. ಸಿದ್ದಲಿಂಗಯ್ಯ ಅವರ ಕಾವ್ಯದ ಬಗ್ಗೆ ತುಂಬಾ ಉತ್ಸಾಹ,ಉತ್ಸುಕತೆಯಿಂದ ಬರೆದದ್ದು,ಸಭೆ ಸಮಾರಂಭಗಳಲ್ಲಿ ಮಾತಾಡಿದ್ದು ಮೇಲ್ಜಾತಿಗೆ ಸೇರಿದ ಸಾಹಿತಿ ಮತ್ತು ವಿಮರ್ಶಕರೇ. ಇದು ಕನ್ನಡ ಸಾಹಿತ್ಯ ಇತಿಹಾಸದ ಸತ್ಯ. ಸಿದ್ದಲಿಂಗಯ್ಯನವರೂ ಬಹುಷಃ ಇದನ್ನು ನಿರಾಕರಿಸಲಾರರು.
    ೨. ಅಣ್ಣಾ ಹಜಾರೆಯವರ ಹೋರಾಟಕ್ಕಿಂತ ಕನ್ನಯ್ಯ ಕುಮಾರನದೇ ಮೇಲ್ಪಟ್ಟದ್ದು ಎಂದು ಎಸ್ ಜಿ ಸಿದ್ದರಾಮಯ್ಯನವರು ಹೇಳಿದ್ದಾರೆಂಬ ಆ ಪತ್ರಿಕೆಯ ವರದಿ ನಿಜವೇ ಆಗಿದ್ದರೆ ಅದು ಹಿರಿಯರಾದ ಸಿದ್ಧರಾಮಯ್ಯನವರ ‘ರಾಜಕೀಯ ಪೂರ್ವಗ್ರಹ’ ಎಂದು ಹೇಳಲು ವಿಷಾದಿಸುತ್ತೇನೆ. ಹಾಗೆ ನೋಡಿದರೆ ಮಹಾತ್ಮ ಗಾಂಧಿ, ಜೆ ಪಿ ಮತ್ತು ಜಾರ್ಜ್ ಫರ್ನಾಡಿಸರೂ ಸಹ ಆಯಾ ಕಾಲದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ವ್ಯವಸ್ಥೆಗೆ/ ಪಕ್ಷಕ್ಕೆ ಸಂವಿಧಾನ ವಿರೋಧಿಗಳಾಗಿ ಕಂಡವರೇ. . ವಿರೋಧವೂ ಒಂದು ಅಸ್ತ್ರ; ಆದರೆ ಅದನ್ನು ಯಾವುದರ ಮೇಲೆ ಪ್ರಯೋಗಿಸುತ್ತೇವೆ,ಯಾತಕ್ಕಾಗಿ ಪ್ರಯೋಗಿಸುತ್ತೇವೆ ಎಂಬುದರ ಮೇಲೆ ಅದರ ಗುಣಾವಗುಣಗಳನ್ನು ಪರಾಮರ್ಶಿಸಬೇಕಾಗುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading